Thursday, June 11, 2026
Homeಕ್ರೈಮ್Rowdysheetar Murder Case: ಹಾಸನದ ರೌಡಿಶೀಟರ್ ಕೊಲೆ ಕೇಸ್:‌ ಈವರೆಗೆ ಹತ್ತು ಆರೋಪಿಗಳ ಬಂಧನ!

Rowdysheetar Murder Case: ಹಾಸನದ ರೌಡಿಶೀಟರ್ ಕೊಲೆ ಕೇಸ್:‌ ಈವರೆಗೆ ಹತ್ತು ಆರೋಪಿಗಳ ಬಂಧನ!

ಹಾಸನ: ನಟೋರಿಯಸ್ ರೌಡಿಶೀಟರ್ ಆವಲಹಳ್ಳಿ ಮಂಜೇಶ್ ಹತ್ಯೆ ಪ್ರಕರಣಕ್ಕೆ  ಸಂಬಂಧಿಸಿದಂತೆ ಹತ್ತು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮೋಹನ್, ಶಶಿ, ಸಾಯಿನಾಥ್, ಭರತ್, ಲಿಂಗರಾಜ್, ರಾಕೇಶ್, ಆದಿತ್ಯ, ಆಕಾಶ್, ದಿಲೀಪ್ ಬಂಧಿತ ಆರೋಪಿಗಳಾಗಿದ್ದು, ಪ್ರಮುಖ ಆರೋಪಿಗಳ ಬಂಧನಕ್ಕೆ ಪೊಲೀಸರು ತಲಾಶ್ ನಡೆಸಿದ್ದಾರೆ. ಕೊಲೆ ಪ್ರಕರಣದಲ್ಲಿ ನಾವು ಆರೋಪಿಗಳಲ್ಲ ಎಂದು ಬೆಂಗಳೂರು ಮೂಲದ ನಾಲ್ವರು ಹಾಗೂ ತುಮಕೂರು ಮೂಲದ ಓರ್ವ ಯುವಕ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಕೊಲೆ ಪ್ರಕರಣದಲ್ಲಿ ನಮ್ಮನ್ನ ಹುಡುಕುತ್ತಿದ್ದಾರಂತೆ, ಹಾಗಾಗಿ ಪೊಲೀಸರು ನಮ್ಮ ಮನೆ ಬಳಿ ಬರುವುದು ಬೇಡ ಎಂದು ನಾವೇ ಪೊಲೀಸ್ ಠಾಣೆಗೆ ಬಂದಿದ್ದೇವೆ ಎಂದು ಹೇಳಿದ್ದರು.

ಇದಕ್ಕೂ ಮೊದಲು ಡಿವೈಎಸ್‌ಪಿ ಕಚೇರಿಗೆ ಬಂದು ಐವರು ಶರಣಾಗಿದ್ದರು. ಇವರೆಲ್ಲರೂ ಕೊಲೆ ಪ್ರಕರಣದ ಆರೋಪಿಗಳಾಗಿದ್ದು, ತೀವ್ರ ವಿಚಾರಣೆ ನಡೆಸಿದ ಪೊಲೀಸರ ಒಟ್ಟು ಹತ್ತು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ಜೂನ್ 7ರ ರಾತ್ರಿ ಹಾಸನದ ಜಿಲ್ಲಾ ಕೋರ್ಟ್ ಸಮೀಪ ಮಂಜೇಶ್ ಭೀಕರ ಹತ್ಯೆ ನಡೆದಿದ್ದು, ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!