ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಒಟ್ಟು 18 ಲೋಕೋಪಯೋಗಿ ಇಲಾಖೆಯ ರಸ್ತೆಗಳಿಗೆ ಒಟ್ಟು 119 ಕೋಟಿ ರೂ. ಅನುದಾನ ರಸ್ತೆಯ ದುರಸ್ತಿ ಮತ್ತು ಅಭಿವೃದ್ಧಿಗಾಗಿ ಮಂಜೂರಾಗಿದೆ ಎಂದು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲ್ಲದೇ ಬಾಳೆಹೊನ್ನೂರು-ಶೃಂಗೇರಿ ರಸ್ತೆಗೆ 50 ಕೋಟಿ ರೂ., ಕೊಪ್ಪ- ಜಯಪುರ- ಶೃಂಗೇರಿ ರಸ್ತೆ 6 ಕೋಟಿ ರೂ., ಕಡೂರು ತಾಲೂಕಿನ ಬೇಗೂರು ಗೇಟ್‌ನಿಂದ -ಅರೇಹಳ್ಳಿ ಮೂಲಕ ಮಚ್ಚೆರಿ ರಸ್ತೆಗೆ 6 ಕೋಟಿ, ಚಿಕ್ಕಮಗಳೂರು ತಾಲೂಕಿನ ಸೀತಾಲಯ್ಯನ ಗಿರಿ- ಮುಳ್ಳಯ್ಯನಗಿರಿ ರಸ್ತೆಗೆ 6 ಕೋಟಿ ರೂ. ಮಂಜೂರಾಗಿದೆ.
ಮೂಡಿಗೆರೆ ತಾಲೂಕಿನ ರಾಜ್ಯ ಹೆದ್ದಾರಿ 106ರ ಬಾಳೂರು ಹ್ಯಾಂಡ್ ಪೋಸ್ಟ್‌ನಿಂದ ಕಳಸ ರಸ್ತೆಗೆ 6 ಕೋಟಿ ಹಾಗೂ ತರಿಕೆರೆ ತಾಲೂಕಿನಲ್ಲಿ ರಾಜ್ಯ ಹೆದ್ದಾರಿ 57 ಬಾಗಲಕೋಟೆ- ಬಿಳಿಗಿರಂಗನ ಬೆಟ್ಟ ರಸ್ತೆಯ ಅಭಿವೃದಿಗೆ 6 ಕೋಟಿ ರೂ. ಮಂಜೂರಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
