Tuesday, August 11, 2026
Homeಕ್ರೈಮ್POCSO cases: ಅಪ್ರಾಪ್ತರ ಮೇಲಿನ ದೌರ್ಜನ್ಯ: 2 ಪ್ರತ್ಯೇಕ ಪೋಕೋ ಪ್ರಕರಣ ದಾಖಲು!

POCSO cases: ಅಪ್ರಾಪ್ತರ ಮೇಲಿನ ದೌರ್ಜನ್ಯ: 2 ಪ್ರತ್ಯೇಕ ಪೋಕೋ ಪ್ರಕರಣ ದಾಖಲು!

Telegram Group
Join Now

ಬಾಳೆಹೊನ್ನೂರು: ಅಪ್ರಾಪ್ತರ ಮೇಲಿನ ದೌರ್ಜನ್ಯ ಕುರಿತಂತೆ 2 ಪ್ರತ್ಯೇಕ ಪೋಕೋ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಾಳೆಹೊನ್ನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹುಯಿಗೆರೆ ಸಮೀಪದ ಖಾಸಗಿ ಕಾಫಿ ಎಸ್ಟೇಟಿಗೆ ಕೂಲಿ ಕೆಲಸಕ್ಕೆ ಬಂದಿದ್ದ ಅಸ್ಸಾಂ ಮೂಲದ ಹಬೀ ರೆಹಮಾನ್ (21) ಮದ್ಯ ಪ್ರದೇಶ ಮೂಲದ 15 ವರ್ಷದ ಬಾಲಕಿಯನ್ನು ಪ್ರೀತಿ ನೆಪದಲ್ಲಿ ಕಳೆದ 3 ತಿಂಗಳ ತಿಂದೆ ಅಸ್ಸಾಂಗೆ ಕರೆದೊಯ್ದು, ಆಕೆ ಮೇಲೆ ಬಲತ್ಕಾರ ಮಾಡಿದ್ದ. ಈ ಕುರಿತು ಬಾಲಕಿ ಪೋಷಕರು ದೂರು ನೀಡಿದ ಹಿನ್ನೆಲೆ ಪೊಲೀಸರು ಇಬ್ಬರನ್ನು ಪತ್ತೆ ಮಾಡಿ ವಾಪಾಸ್ ಕರೆ ತಂದು ಪ್ರಕರಣ ದಾಖಲಿಸಿದ್ದಾರೆ.

ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಸಂತ್ರಸ್ತ ಬಾಲಕಿಯನ್ನು ಸಖಿ ಕೇಂದ್ರಕ್ಕೆ ದಾಖಲಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ದೂಬ್ಬ ಗ್ರಾಮದ ಶಿವಕುಮಾರ್ (43) ಆರೋಪಿ. ಈತ ಶೃಂಗೇರಿ ಕಾಲೇಜಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಯುವತಿ ಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ.

ಇತ್ತೀಚೆಗೆ ಪೋಷಕರು ಆಕೆಯನ್ನು ಆಸ್ಪತ್ರೆಗೆ ಪರೀಕ್ಷೆಗೆ ಕರೆದು ಕೊಂಡು ಹೋದಾಗ ಆಕೆ ಗರ್ಭವತಿಯಾಗಿ ರುವುದು ಬೆಳಕಿಗೆ ಬಂದಿದೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments