Tuesday, August 11, 2026
HomeರಾಜಕೀಯSM Krishna Road: 631 ಕೋಟಿ ವೆಚ್ಚದ ಬಹುನಿರೀಕ್ಷಿತ ಎಸ್‌ಎಂ ಕೃಷ್ಣ ರಸ್ತೆ ಇಂದು ಲೋಕಾರ್ಪಣೆ!

SM Krishna Road: 631 ಕೋಟಿ ವೆಚ್ಚದ ಬಹುನಿರೀಕ್ಷಿತ ಎಸ್‌ಎಂ ಕೃಷ್ಣ ರಸ್ತೆ ಇಂದು ಲೋಕಾರ್ಪಣೆ!

Telegram Group
Join Now

ಬೆಂಗಳೂರು: ಮೈಸೂರು ರಸ್ತೆಯ ಚಲ್ಲಘಟ್ಟ ಮೆಟ್ರೋ ನಿಲ್ದಾಣದಿಂದ ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್‌ಗೆ ಸಂಪರ್ಕ ಕಲ್ಪಿಸುವ ಬಿಡಿಎಯ 631 ಕೋಟಿ ವೆಚ್ಚದ ಬಹುನಿರೀಕ್ಷಿತ ಎಸ್‌ಎಂ ಕೃಷ್ಣ ರಸ್ತೆಯನ್ನು ಇಂದು ಸಿಎಂ ಡಿಕೆ ಶಿವಕುಮಾರ್ ಲೋಕಾರ್ಪಣೆ ಮಾಡಲಿದ್ದಾರೆ.

ಇಂದು ಕೆಂಪೇಗೌಡ ಜಯಂತಿಯಂದೇ ಈ ಕಾರ್ಯಕ್ರಮ ನಡೀತಿದೆ. ಕೆಂಪೇಗೌಡ ಬಡಾವಣೆಯ ಎಲ್ಲಾ 9 ಬ್ಲಾಕ್‌ಗಳ ಸಂಚಾರಕ್ಕೂ ಕೊಂಡಿ ಕಲ್ಪಿಸುವ ಈ ದಶಪಥ ರಸ್ತೆಯನ್ನು 631 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 10.7 ಕಿ.ಮೀ ಉದ್ದದ, 100 ಮೀಟರ್ ಅಗಲದ (330 ಅಡಿ), 10 ಲೇನ್‌ಗಳ ರಸ್ತೆ ಇದಾಗಿದೆ.

3 ಪ್ರಮುಖ ಅಂಡರ್ ಪಾಸ್‌ಗಳು, 11 ಸೇತುವೆಗಳು, 270 ಮೀಟರ್ ಉದ್ದದ ಸುರಂಗ ಮಾರ್ಗ, ಅಗಲದ ರಸ್ತೆ ವಿಭಜಕ, ಆಧುನಿಕ ಸರ್ವಿಸ್ ರಸ್ತೆ, ಸೈಕಲ್ ಟ್ರ‍್ಯಾಕ್ ವ್ಯವಸ್ಥೆ ಹೊಂದಿದೆ. ಪೀಣ್ಯ, ಕೆಂಗೇರಿ, ಮೈಸೂರು, ಮಾಗಡಿ, ಹಾಸನ, ಕುಣಿಗಲ್, ಮಂಡ್ಯ ಹಾಗೂ ರಾಮನಗರ ಭಾಗಗಳಿಂದ ಬೆಂಗಳೂರಿಗೆ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ನೈಸ್ ರಸ್ತೆಗೆ ಪರ್ಯಾಯ ಮಾರ್ಗವಾಗಿ ಟೋಲ್ ಫ್ರೀ ಹಾಗೂ ಸಿಗ್ನಲ್ ಫ್ರೀ ರಸ್ತೆಗೆ ಜನರು ಖುಷ್ ಆಗಿದ್ದು, ಇಂದು ಸಂಚಾರಕ್ಕೆ ಮುಕ್ತವಾಗಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments