Tuesday, June 30, 2026
HomeಇತರೆBidadi Township: ಭೂಮಿ ಕೊಡಿ ಅಂತ ರೈತರಿಗೆ ಬಲವಂತ ಮಾಡುವಂತಿಲ್ಲ: ಗೃಹಸಚಿವ ಪ್ರಿಯಾಂಕ್ ಖರ್ಗೆ

Bidadi Township: ಭೂಮಿ ಕೊಡಿ ಅಂತ ರೈತರಿಗೆ ಬಲವಂತ ಮಾಡುವಂತಿಲ್ಲ: ಗೃಹಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಭೂಮಿ ಕೊಡಿ ಅಂತ ರೈತರಿಗೆ ಬಲವಂತ ಮಾಡುವಂತಿಲ್ಲ. ನಾವು ಯಾವತ್ತೂ ಆ ರೀತಿ ಬಲವಂತವಾಗಿ ಭೂಮಿಯನ್ನು ಪಡೆದಿಲ್ಲ ಎಂದು ಗೃಹಸಚಿವ ಪ್ರಿಯಾಂಕ್ ಖರ್ಗೆ  ಹೇಳಿದ್ದಾರೆ.

ಬಿಡದಿ ಟೌನ್‌ಶಿಪ್ ಜಟಾಪಟಿ ವಿಚಾರವಾಗಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಈ ವೇಳೆ, ಭೂಸ್ವಾಧೀನ ನಿಯಮಗಳು ಬಹಳ ಸ್ಪಷ್ಟವಾಗಿವೆ. ಯಾರು ಕೂಡ ಒತ್ತಾಯಪೂರ್ವಕವಾಗಿ ಭೂಮಿ ತೆಗೆದುಕೊಳ್ಳಲು ಆಗಲ್ಲ. ರೈತರು ಸ್ವ ಇಚ್ಛೆಯಿಂದ ಎಲ್ಲಿ ಕೊಡುತ್ತಾರೆ ಅದನ್ನು ಪರಿಗಣನೆ ಮಾಡ್ತೀವಿ. ಯಾರು ಸ್ವ ಇಚ್ಛೆಯಿಂದ ಭೂಮಿ ಕೊಡುವುದಿಲ್ಲವೋ ಅಲ್ಲಿ ಯೋಜನೆ ಆಗಲ್ಲ. 90 ರಿಂದ 95% ವಿರೋಧ ಆಗಿದ್ರೆ ಈ ನಿಯಮ ಅನ್ವಯ ಆಗುತ್ತೆ ಎಂದು ಸ್ಪಷ್ಟನೆ ನೀಡಿದ್ದಾರೆ.

ದೇವನಹಳ್ಳಿ, ಚನ್ನರಾಯಪಟ್ಟಣದ ಬಳಿ ನಾವು ಭೂಸ್ವಾಧೀನ ಕೈಬಿಟ್ಟಿಲ್ವಾ? ಕೃಷಿ ವಲಯ ಅಂತಾನೇ ಘೋಷಣೆ ಮಾಡಿದ್ದೇವೆ. ಕೆಲವರು ಇಂಡಸ್ಟ್ರಿ ಮಾಡಬೇಕು ಅಂತ ಈಗ ಬಂದಿದ್ದರು. ಅದನ್ನು ಪರಿಶೀಲನೆ ಮಾಡಿ ಒಂದು ತೀರ್ಮಾನಕ್ಕೆ ಬರುತ್ತೇವೆ ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments