Monday, June 29, 2026
Homeಜಿಲ್ಲಾಸುದ್ದಿMP Kota Srinivas Poojary: ಕೇಂದ್ರದ ಯೋಜನೆಗಳನ್ನು ಬಳಸಿಕೊಂಡು ತಮ್ಮದೇ ಎಂಬ ಸುಳ್ಳಿನಲ್ಲಿ ಕಾಂಗ್ರೆಸ್ ಜನರನ್ನು...

MP Kota Srinivas Poojary: ಕೇಂದ್ರದ ಯೋಜನೆಗಳನ್ನು ಬಳಸಿಕೊಂಡು ತಮ್ಮದೇ ಎಂಬ ಸುಳ್ಳಿನಲ್ಲಿ ಕಾಂಗ್ರೆಸ್ ಜನರನ್ನು ವಂಚಿಸುತ್ತಿದೆ: ಸಂಸದ ಕೋಟ

ಮೂಡಿಗೆರೆ: ಕೇಂದ್ರದ ಎಲ್ಲಾ ಯೋಜನೆಗಳನ್ನು ಬಳಸಿಕೊಂಡು ತಮ್ಮದೇ ಎಂಬ ಸುಳ್ಳಿನಲ್ಲಿ ಜನರನ್ನು ವಂಚಿಸಲಾಗುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.

ಅವರು ಇಲ್ಲಿನ ಬಿಜೆಪಿ ಕಚೇರಿ ಪಂಚವಟಿಯಲ್ಲಿ ತೀವ್ರ ಮತ ಪರಿಷ್ಕರಣೆ ಕಾರ್ಯಗಾರದಲ್ಲಿ ಮತನಾಡಿ. ಸುಳ್ಳು ಎಂಬ ಪದ ರಾಜಕೀಯದಲ್ಲಿ ಹೆಚ್ಚು ಬಳಸಬಾರದು. ಆದರೆ ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಿಂದ ಬರಿ ಸುಳ್ಳನ್ನೇ ಜನರಿಗೆ ಹೇಳಿಕೊಂಡು ಬರುತ್ತಿದೆ. ಇವರು ತಮ್ಮ ಬೊಕ್ಕಸದಿಂದ ಒಂದು ಕಾಳು ಅಕ್ಕಿ ಕೊಟ್ಟಿಲ್ಲ  ಆದರೆ ಹತ್ತು ಕೆಜಿ ಕೊಡ್ತಿದೀವಿ ಅಂತಾರೆ  ಗರ್ಭ ಕಂಠ ಕಾಯಿಲೆಗೆ ಉಚಿತ ವ್ಯಾಕ್ಸೀನ್ ನಮ್ಮದೆ ಅಂತಾರೆ.

ಈ ಯೋಜನೆಯಲ್ಲಿ 13 ವರ್ಷ ಮೇಲಿನ ಹೆಣ್ಣು ಮಕ್ಕಳಗೆ ಕೂಡ ಕಡ್ಡಾಯ ಮಾಡಲಾಗಿದೆ.. ಇವೆಲ್ಲವು ಕೇಂದ್ರ ಯೋಜನೆ. ಈಗ ಎಸ್ ಐಅರ್ ನಡೆಯುತ್ತಿದೆ. ಕಾಂಗ್ರೆಸ್ ಮತದಾರರನ್ನ ಪಟ್ಟಿಯಿಂದ ತೆಗೆಯಲಾಗುತ್ತಿದೆ ಎಂದು ಸುಳ್ಳು ಹೇಳುತ್ತಿದೆ. ಭಯೋತ್ಪಾದರು. ಅಕ್ರಮ ವಲಸಿಗ. ವಿದೇಶಿಗ ಒಂದು ಮತ ಸೇರದಂತೆ ಬಿಜೆಪಿ ಕಾರ್ಯಕರ್ತರು ಗಮನ ಹರಿಸಿ.. ಮತದಾರ ಪಟ್ಟಿಯಲ್ಲಿ ಬಿಟ್ಟು ಹೋದ ಮತಗಳನ್ನು ಸರಿಯಾಗಿ ಗಮನಿಸಿ ರಾಜ್ಯಸರ್ಕಾರ ಇಲ್ಲಿಯು ಅಕ್ರಮ ಮಾಡಬಹುದು. ಈ ಮೂಲಕ ತಮ್ಮ ಭೂತ್ ಗಳನ್ಮು ಗಟ್ಟಿಗೊಳಿಸಿ ಎಂದರು.

ವಿಧಾನ ಪರಿಷತ್ ಉಪಸಭಾಪತಿ ಎಂ ಕೆ ಪ್ರಾಣೇಶ್ ಮಾತನಾಡಿ. ಕ್ಷೇತ್ರದ ಎಲ್ಲಾ ಭೂತಗಳಲ್ಲೂ ಕಾರ್ಯಕರ್ತರು ಕಡ್ಡಾಯವಾಗಿ ತಮ್ಮ ಕಾರ್ಯಚಟುವಟಿಕೆ ನಡೆಸಬೇಕು. ಅಲ್ಲದೇ ಅಧಿಕಾರಿಗಳು ಮತಗಳನ್ನು ತೆಗೆಯುವ ಇಲ್ಲವೇ. ಆಳುವ ಸರ್ಕಾರಕ್ಕೆ ಉಪಯೋಗ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಎಸ್,ಐ,ಆರ್ ಪ್ರಕ್ರಿಯೆ ದೇಶಾದ್ಯಂತ ನಡೆಯುತ್ತಿದ್ದು ಕಳ್ಳ ಮತಗಳು ಪಕ್ಷದ ವಿರುದ್ಧವೇ ಇರುತ್ತವೆ. ದೇಶವನ್ನು ಕಟ್ಟಲು ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಹಗಲಿರಲು ಶ್ರಮಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಮುಂದಿನ ಪೀಳಿಗೆಗೆ ದೇಶವನ್ನು ಮತ್ತಷ್ಟು ಬಲಪಡಿಸಲು ನಮ್ಮ ಸೇವೆ ಅತ್ಯಗತ್ಯ. ಪಕ್ಷಕ್ಕಾಗಿ ಶ್ರಮಿಸೋಣ ಎಂದು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಗಜೇಂದ್ರಕೊಟ್ಟಿಗೆಹಾರ. ರಘು ಜನ್ನಾಪುರ. ದೀಪಕ್ ದೊಡ್ಡಯ್ಯ .ಹಳಸೆ ಶಿವಣ್ಣ. ಜಯಂತ್ ಬಿದರಹಳ್ಳಿ. ಮನೋಜ ಹಳೆಕೋಟೆ. ಪ್ರಮೋದ್ ದುಂಡುಗ. ಪಂಚಾಕ್ಷರಿ ಹಾಲೂರು. ಭರತ್ ಬಾಳೂರು. ದನಿಕ್ ಕೊಡದಿಣ್ಣೆ. ಪ್ರಶಾಂತ್ ಬಿಳಗುಳ. ಸುನಿಲ್ ಮಣ್ಣೆಕೆರೆ ಮತ್ತಿತರರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments