Friday, August 14, 2026
Homeಜಿಲ್ಲಾಸುದ್ದಿBhadra River: ಮಲೆನಾಡಿನಲ್ಲಿ ಮಳೆ: ಈ ವರ್ಷ ಭದ್ರಾ ನದಿಯ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ

Bhadra River: ಮಲೆನಾಡಿನಲ್ಲಿ ಮಳೆ: ಈ ವರ್ಷ ಭದ್ರಾ ನದಿಯ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ

Telegram Group
Join Now

ಎನ್‌. ಆರ್‌. ಪುರ:   ಮಲೆನಾಡು ಮತ್ತು ಪಶ್ಚಿಮಘಟ್ಟ ಶ್ರೇಣಿಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯ ಪ್ರಭಾವದಿಂದಾಗಿ ಭದ್ರಾ ನದಿಯ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದೆ.

ಹೌದು .. ಜೂನ್ ಕೊನೆಯ ವಾರದಲ್ಲಿ ಮಳೆ ಕೊರತೆಯಿಂದಾಗಿ ಬತ್ತಿಹೋಗಿದ್ದ ಭದ್ರಾ ಜಲಾಶಯಕ್ಕೆ ಇದೀಗ ಜೀವಕಳೆ ಬಂದಿದೆ. ನದಿಯ ಒಳಹರಿವು ಹೆಚ್ಚಾಗಿದ್ದು, ನದಿ ಪಾತ್ರದ ನಿವಾಸಿಗಳು ಹಾಗೂ ಕೃಷಿಕರಲ್ಲಿ ಹೊಸ ಭರವಸೆ ಮೂಡಿದೆ.

ನಿನ್ನೆ ಬತ್ತಿದ ಭದ್ರಾ ನದಿಯಲ್ಲಿ ವಾಲಿಬಾಲ್ ಆಡಿದ್ದ ಯುವಕರು ಇಂದು ಕಾಲಿಡೋದಕ್ಕೂ ಭಯ ಪಡುವ ಸ್ಥಿತಿ ನಿರ್ಮಾಣವಾಗಿದ್ದು  ಸೋಮವಾರ ಬೆಳಗ್ಗೆ ವಾಲಿಬಾಲ್ ಆಡಿದ್ದ ಜಾಗ, ಮಂಗಳವಾರ ಬೆಳಗ್ಗೆ ಜಲಾವೃತಗೊಂಡಿದ್ದುವಾಲಿಬಾಲ್ ಕೋರ್ಟ್ ನೆಟ್ ಗೆ ಕಟ್ಟಿದ್ದ ಕಂಬಗಳಷ್ಟೆ ಗೋಚರವಾಗಿರುವ ಘಟನೆ  ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ಭದ್ರಾ ನದಿ ತಪ್ಪಲಿನಲ್ಲಿ ಕಂಡುಬಂದಿದೆ.

ತೀವ್ರ ಮಳೆ ಕೊರತೆಯಿಂದ ಬತ್ತಿದ್ದ ಭದ್ರಾ ನದಿ ಈಗ ತುಂಬಿರುವುದನ್ನು ಕಂಡು ಸ್ಥಳೀಯರೇ ಶಾಕ್ ಆಗಿದ್ದಾರೆ. ಮೂರು ದಶಕಗಳ ಬಳಿಕ ತಳ ಕಂಡು ಬರಿದಾಗಿದ್ದ ಭದ್ರೆಯ ಒಡಲು ಈಗ ಭದ್ರಾ ಡ್ಯಾಂ ನ ಪ್ರಸ್ತುತ ನೀರಿನ ಮಟ್ಟ ಹೆಚ್ಚಾಗಿದೆ.

ಕಳೆದ ಎರಡು ತಿಂಗಳಿಂದ ವಾಲಿಬಾಲ್ ಕೋರ್ಟ್ ಮಾಡಿಕೊಂಡಿದ್ದ ಯುವಕರು ನೀರು ಬತ್ತಿ ಮರಳುಗಾಡಿನಂತಾಗಿದ್ದ ಭದ್ರಾ ನದಿ ಯುವಕರಿಗೆ ಆಟದ ಮೈದಾನವಾಗಿತ್ತು ರಾತ್ರಿ ಕಳೆದು ಬೆಳಗಾಗುವುದರಲ್ಲಿ ನದಿ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಏರಿಕೆ ಭದ್ರೆಯ ಒಡಲು ಕಂಡು ಸ್ಥಳೀಯರು, ರೈತರು ಹಾಗೂ ಬೆಳಗಾರರ ಸಂಭ್ರಮ ಪಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments