Friday, July 10, 2026
Homeಜಿಲ್ಲಾಸುದ್ದಿChickmagalore: ನಕಲಿ ಮತದಾರರಿಗೆ ಅವಕಾಶ ನೀಡಬಾರದು: SIR ಬಗ್ಗೆ ರಂಭಾಪುರಿ ಶ್ರೀಗಳು ಮಹತ್ವದ ಹೇಳಿಕೆ

Chickmagalore: ನಕಲಿ ಮತದಾರರಿಗೆ ಅವಕಾಶ ನೀಡಬಾರದು: SIR ಬಗ್ಗೆ ರಂಭಾಪುರಿ ಶ್ರೀಗಳು ಮಹತ್ವದ ಹೇಳಿಕೆ

Telegram Group
Join Now

ಚಿಕ್ಕಮಗಳೂರು : SIR ಬಗ್ಗೆ ರಂಭಾಪುರಿ ಶ್ರೀಗಳು ಮಹತ್ವದ ಹೇಳಿಕೆ ನೀಡಿದ್ದಾರೆ. ಎಸ್.ಐ.ಆರ್.ಗೆ ವಿರೋಧ ಪಕ್ಷದವರ ಆಕ್ಷೇಪಣೆ ಇದೆ, ಮಂದಿರ-ಮಸೀದಿ-ಚರ್ಚ್ ನಲ್ಲಿ ಎಸ್.ಐ.ಆರ್. ನಡೆಸಬಾರದು, ಮನೆ-ಮನೆಗೆ ಭೇಟಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ನಿಜವಾದ ಮತದಾರಿಗೆ ಅನ್ಯಾಯ ಆಗಬಾರದು, ನಕಲಿ ಮತದಾರರಿಗೆ ಅವಕಾಶ ಕೊಡಬಾರದು ಎಂದು ತಿಳಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಕೇಂದ್ರದಿಂದ ಜಾತಿ ಜನಗಣತಿ ಆರಂಭವಾಗುವ ಲಕ್ಷಣಗಳಿವೆ. ವೀರಶೈವ ಲಿಂಗಾಯುತ ಸಮುದಾಯದವರು ಎಚ್ಚರಿಕೆಯಿಂದ ಬರೆಸಬೇಕು.ಯಾವುದೇ ಒಳಪಂಗಡದಲ್ಲಿ ಇದ್ರು ʼವೀರಶೈವ ಲಿಂಗಾಯುತʼ ಎಂದೇ  ನಮೋದಿಸಬೇಕೆಂದು ಸ್ಪಷ್ಟಪಡಿಸಿದ್ದಾರೆ.

ಹಾಗೆ ನಮ್ಮ ಸಮುದಾಯ ಒಟ್ಟು ಸಂಖ್ಯೆ ಒಂದು ಲೆಕ್ಕಕ್ಕೆ ಬರಲಿದೆಒಳಜಾತಿಯನ್ನ ಬರೆಸದೆ, ವೀರಶೈ ಲಿಂಗಾಯುತ ಅನ್ನೋ ಸಮಗ್ರತೆಯನ್ನೇ ಕಾಪಾಡಿಕೊಂಡು ಬರಬೇಕು ಅನ್ನೋದು ನಮ್ಮ ಅಭಿಲಾಷೆ ಅದೇ ರೀತಿಧರ್ಮ-ಜಾತಿಗಳ ಮಧ್ಯೆ ನಡೆದಿರುವ ಸಂಘರ್ಷ ಎಂದೂ ನಡೆಯಬಾರದು.ನಾವು ಭಾರತ ಮಾತೇ ಮಕ್ಕಳು ಎಂಬ ಭಾವನೆಯಲ್ಲಿ ಇರಬೇಕು ಒಗ್ಗಟ್ಟಿನಲ್ಲಿ ಬದುಕಬೇಕು ಎಂದು  ರಂಭಾಪುರಿ ಶ್ರೀಗಳು ಕರೆ ಕೊಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments