ಚಿಕ್ಕಮಗಳೂರು: ಜಿಲ್ಲೆಯ ಮಲ್ಲಂದೂರು ಸಮೀಪದ ಮೇಲು ಹೊಲದ ಗದ್ದೆ ಬಳಿ ಕವಿಕಲ್ ಮಠದ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷವಾಗಿದೆ.ಆ ಭಾಗದ ಸ್ಥಳೀಯರಲ್ಲಿ ಮತ್ತು ರೈತರಲ್ಲಿ ತೀವ್ರ ಆತಂಕವನ್ನುಂಟುಮಾಡಿದೆ.
ಹೌದು .. ಬೆಂಗಳೂರು ಮೂಲದ ಪ್ರವಾಸಿಗರು ಸನ್ ಸೆಟ್ ನೋಡಲು ಬಂದಾಗ ಬುಧವಾರ ಸಂಜೆ ಬೃಹತ್ ಗಾತ್ರದ ಹುಲಿ ಏಕಾಏಕಿ ಕಾಣಿಸಿಕೊಂಡಿದ್ದು ಅವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.
ಮುನ್ನೆಚ್ಚರಿಕೆಯಾಗಿ ಸ್ಥಳೀಯ ಅರಣ್ಯ ಇಲಾಖೆ ಬೋನು ಅಥವಾ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಮನವಿ ಮಾಡಲಾಗಿದೆ.
