Friday, July 10, 2026
Homeಜಿಲ್ಲಾಸುದ್ದಿFree Bus Pass: ಕಾರ್ಯ ನಿರ್ವಹಿಸದ ಕರ್ನಾಟಕ ಒನ್ ವೆಬ್‌ಸೈಟ್: ಉಚಿತ ಪಾಸ್ ಪಡೆಯಲು...

Free Bus Pass: ಕಾರ್ಯ ನಿರ್ವಹಿಸದ ಕರ್ನಾಟಕ ಒನ್ ವೆಬ್‌ಸೈಟ್: ಉಚಿತ ಪಾಸ್ ಪಡೆಯಲು ವಿದ್ಯಾರ್ಥಿಗಳ ಪರದಾಟ

Telegram Group
Join Now

ಮೂಡಿಗೆರೆ: ರಾಜ್ಯದಲ್ಲಿ ನೂತನ ಸಿ ಎಂ ನೇಮಕ ಬೆನ್ನಲ್ಲೇ ನೂತನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆ ಆದೇಶ ನೀಡಿದರು.

ಈ ಹಿನ್ನೆಲೆಯಲ್ಲಿ  ಸರ್ಕಾರಕ್ಕೆ ನಿಗದಿತ ಹಣ ಪಾವತಿಸಿ ಬಸ್ ಪಾಸ್ ಪಡೆದ ಶಾಲಾ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿಗಳು (ಗಂಡು ಮಕ್ಕಳು) ಈ ಬಾರಿ ಬಸ್ ಪಾಸ್ ಉಚಿತ ಎಂದು ಸಂತೋಷ ವ್ಯಕ್ತಪಡಿಸಿದರು, ಆದರೆ ಈ ಫ್ರೀ ಯೋಜನೆಯಿಂದ ಸರ್ಕಾರದ ವೆಬ್‌ ಸೈಟ್ ಗಳು ಸರಿಯಾಗಿ ಕಾರ್ಯ ನಿರ್ವಹಿಸಿದೆ ಇರುವುದರಿಂದ ವಿದ್ಯಾರ್ಥಿಗಳು ಬಸ್ ಪಾಸ್ ಮಾಡಿಸಲು ಹರಸಾಹಸ ಪಡುವಂತಾಗಿದ್ದು ಇದರೊಂದಿಗೆ ಬಸ್ ಪಾಸ್ ಮಾಡುವ ಗುತ್ತಿಗೆ ಪಡೆದಿರುವ ಕರ್ನಾಟಕ ಓನ್ ಕೇಂದ್ರದ ಶಾಖೆಗಳವರಿಗೂ ತಲೆ ನೋವು ತಂದಿದೆ.

ಈ ಹಿಂದೆ ವಿದ್ಯಾರ್ಥಿಗಳ ಸ್ಯಾಟ್ಸ್ ನಂಬರ್ ಹಾಕಿದಾಗ ಅ ವಿದ್ಯಾರ್ಥಿಗಳ ಎಲ್ಲಾ ವಿಳಾಸಗಳು ಕಂಪ್ಯೂಟರ್ ನಲ್ಲಿ ಕಾಣಿಸುತ್ತಿತ್ತು ಆದರೆ ಈ ಬಾರಿ ಸ್ಯಾಟ್ಸ್ ಐಡಿ ಹಾಕಿದರೆ ಯಾವುದೇ ದಾಖಲೆಗಳು ಕಾಣುವುದಿಲ್ಲ, ಹಾಗೂ ವಿದ್ಯಾರ್ಥಿಗಳು ಬೆರೆ ಕಡೆ ಅರ್ಜಿ ಹಾಕಿದ್ದು ತಾಲ್ಲೂಕು ಬದಲಾವಣೆ ಆಗುತ್ತದೆ ಆಗ KSRTC ಅಧಿಕಾರಿಗಳು ಕನಿಷ್ಠ ಮಾನವಿಯತೇ ತೋರಿಸದೆ ಅದು ನಮ್ಮ ಕೌಂಟರ್ ಅಲ್ಲಾ ಎಂದು ಅಂತ ಅರ್ಜಿಗಳನ್ನು ರಿಜೇಕ್ಟ್ ಮಾಡುತ್ತಾರೆ.

ಇದರಿಂದ ಮತ್ತೇ ಹೊಸ ಅರ್ಜಿ ಹಾಕಲು ಹೋದರೆ ಅದನ್ನು ಕಂಪ್ಯೂಟರ್ ನಲ್ಲಿ ತೋರಿಸುವುದಿಲ್ಲ, ಇದರಿಂದ ರಿಜೇಕ್ಟ್ ಆದ ಅಪ್ಲಿಕೇಶನ್ ಗಳು ಮತ್ತೇ ಹಾಕಲು ಹೋದರೆ 10 ರಿಂದ 15 ದಿನಗಳು ಆದರೂ ಆಗುವುದಿಲ್ಲ, ಇನ್ನೂ ಬಸ್ ಪಾಸ್ ಅರ್ಜಿ ಹಾಕುವಾಗ OTP ಗಳು ಬರದೆ ಇರುವುದು ದೊಡ್ಡ ಸಮಸ್ಯೆ ಆಗಿದ್ದು ಮಲೆನಾಡು ಭಾಗದ ಪೋಷಕರು ತಲೆ ಕೆಡಿಸಿಕೊಂಡಿದ್ದಾರೆ, ಸಮಸ್ಯೆಗಳನ್ನು ಕರ್ನಾಟಕ ಓನ್ ಕೇಂದ್ರದ ಮುಖ್ಯಸ್ಥರುಗಳು ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರು ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಸಮಸ್ಯೆಗಳನ್ನು ಬಗೆ ಹರಿಸಲು ಕರ್ನಾಟಕ ಓನ್ ಮುಖ್ಯಸ್ಥರು ಎಷ್ಟೇ ಮನವಿ ಮಾಡಿದರು ಗ್ರೂಪ್ ಗಳಲ್ಲಿ ತಿಳಿಸಿದರು ಸಮಸ್ಯೆಯನ್ನು ಬಗೆ ಹರಿಸಲು ಆಸಕ್ತಿ ವಹಿಸುತ್ತಿಲ್ಲ,

ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ನಷ್ಟ ಅನುಭವಿಸುತ್ತಿದ್ದಾರೆ. ಈ ಹಿಂದೆ ಸಾಮಾನ್ಯ ವಿದ್ಯಾರ್ಥಿಗಳಿಗೆ 1100 ರೂಗಳಿಗೆ ಹಾಗೂ ಪರಿಶಿಷ್ಟ ಜಾತಿ ಪಂಗಡದ ವಿದ್ಯಾರ್ಥಿಗಳಿಗೆ 300 ರೂಗಳಿಗೆ ವಾರ್ಷಿಕ ಬಸ್ ಪಾಸ್ ಸಿಗುತ್ತಿತ್ತು. ಹಾಗೋ ಹೀಗೋ ಹಣ ಕಟ್ಟಿ ಬಸ್ ಮಾಡಿಸಿಕೊಂಡು ನಿತ್ಯ ಶಾಲಾ ಕಾಲೇಜುಗಳಿಗೆ ಹೋಗಿ ಬರುತ್ತಿದ್ದರು. ಆದರೆ ಈಗ ಫ್ರೀ ಪಾಸ್ ಘೋಷಣೆ ಮಾಡಿದ ನಂತರ ಹಳೆಯ ಪಾಸು ಇಲ್ಲ ಹೊಸ ಪಾಸುಗಳು ಸಿಗುತ್ತಿಲ್ಲ ಎನ್ನು ಸ್ಥಿತಿ ನಿರ್ಮಾಣವಾಗಿದೆ. ನಿತ್ಯ 50, 100, 200 ರೂಗಳನ್ನು ಬಸ್ ಚಾರ್ಚ್ ನೀಡಿ ಶಾಲಾ ಕಾಲೇಜಿಗೆ ಹೋಗಿಬರುವ ಸ್ಥಿತಿ ನಿರ್ಮಾಣವಾಗಿದೆ.

ಕಳೆದ ಒಂದು ತಿಂಗಳಿಂದ ಪ್ರತಿ ವಿದ್ಯಾರ್ಥಿ ಕನಿಷ್ಠ 2 ರಿಂದ 4 ಸಾವಿರ ರೂಗಳನ್ನು ಬಸ್ ಚಾರ್ಜ್ ಗಾಗಿ ವೆಚ್ಚ ಮಾಡಿದ್ದಾರೆ. ಈ ಹಿಂದಿನ ವ್ಯವಸ್ಥೆಯೇ ಇದ್ದರೆ ಈ ಹಣದಲ್ಲಿ ಕನಿಷ್ಟ ಐದಾರು ವರ್ಷ ಪಾಸ್ ಮಾಡಿಸಿಕೊಂಡು ತಿರುಗಾಡಬಹುದಾಗಿತ್ತು.

ಸರ್ಕಾರದ ಹೊಸ ಯೋಜನೆ ಬಡ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಅನುಕೂಲವಾಗುವ ಬದಲು ಮಾರಕವಾಗಿದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

ಇನ್ನು ಬಸ್ ಪಾಸ್ ನೀಡುವ ಗುತ್ತಿಗೆ ಪಡೆದಿರುವ ಕರ್ನಾಟಕ ಒನ್ ಕೇಂದ್ರದವರ ಬಳಿಯಲ್ಲಿಯೂ ಈ ಸಮಸ್ಯೆಗೆ ಉತ್ತರ ಸಿಗುತ್ತಿಲ್ಲ. ಅವರು ಸಮಸ್ಯೆಗೆ ಸರ್ಕಾರದ ಕಡೆ ಬೆರಳು ತೋರಿಸುತ್ತಾರೆ. ನಿತ್ಯ ವಿದ್ಯಾರ್ಥಿಗಳು, ಪೋಷಕರು ಮತ್ತು ಕರ್ನಾಟಕ ಒನ್ ಕೇಂದ್ರದ ಸಿಬ್ಬಂದಿಗಳ ನಡುವೆ ವಾಗ್ವಾದ ನಡೆಯುವಂತಾಗಿದೆ.

ಸರಿಯಾದ ತಯಾರಿ ಇಲ್ಲದೇ, ವೆಬ್ ಸೈಟ್ ಬದಲಾವಣೆ ಮಾಡದೇ ಯೋಜನೆ ಜಾರಿಗೆ ತಂದರೆ ಎಂತಾ ಅವಾಂತರ ಸೃಷ್ಟಿಯಾಗುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ಸರ್ಕಾರ ಈ ಕೂಡಲೇ ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಇಲ್ಲ ಎಂದರೆ ಯೋಜನೆಯನ್ನು ವಾಪಾಸ್ಸು ಪಡೆದು ಈ ಹಿಂದೆ ಇದ್ದಂತೆಯೇ ಬಸ್ ಪಾಸ್ ವ್ಯವಸ್ಥೆಯನ್ನಾದರೂ ಜಾರಿಗೆ ತರಬೇಕು. ಇಲ್ಲದೇ ಇದ್ದರೆ ವಿದ್ಯಾರ್ಥಿಗಳ ಮತ್ತು ಪೋಷಕರ ಸಹನೆಯ ಕಟ್ಟೆ ಹೊಡೆಯುವುದಂತು ನಿಶ್ಚಿತ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments