ಜಯಪುರ: ಶ್ರೀ ರಾಮಸೇವಾ ಪ್ರಾ.ಸ.ಕೃ. ಮತ್ತು ಗ್ರಾ.ಅ. ಬ್ಯಾಂಕ್ ನಿ., ಕರಿಮನೆ ಲೋಕನಾಥಪುರ ಇವರು ಇಂದು(ಶುಕ್ರವಾರ) ಪತ್ರಿಕಾಗೋಷ್ಠಿ ನಡೆಸಿ ಬ್ಯಾಂಕಿನ ಹಾಗೂ ಬ್ಯಾಂಕಿನ ವತಿಯಿಂದ ರೈತರಿಗೆ ಇರುವ ಸೌಲಭ್ಯಗಳನ್ನು ವಿವರಿಸಿದರು.
ಬ್ಯಾಂಕಿನ ಅಧ್ಯಕ್ಷ ಅಬ್ಬಳಮಕ್ಕಿ ಅಶ್ವಥ್ ಮಾತನಾಡಿ ನಮ್ಮ ಬ್ಯಾಂಕು ರಾಜ್ಯ ಹಾಗೂ ಜಿಲ್ಲೆಯಲ್ಲಿ ಒಂದು ಅತ್ಯುತ್ತಮ ಬ್ಯಾಂಕಾಗಿದ್ದು, ಪ್ರಸ್ತುತ ವರ್ಷ ಸ್ವಂತ ಬಂಡವಾಳ ವಿಭಾಗದಲ್ಲಿ ಪಡೆದ ಸಾಲಗಳಿಗೆ ನಮ್ಮ ಆಡಳಿತ ಮಂಡಳಿ ಪ್ರಯತ್ನದಿಂದ ಸರ್ಕಾರದಿಂದ ಏಕಕಾಲಿಕ ಸಾಲ ತೀರುವಳಿ ಯೋಜನೆಗೆ ಅನುಮತಿ ದೊರೆತ್ತಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಅನೇಕ ಸಾಲಗಾರರು ಇದರ ಸದುಪಯೋಗ ಪಡೆದುಕೊಂಡು ಸಾಲ ತೀರುವಳಿ ಮಾಡಿರುತ್ತಾರೆ. ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರುಗಳಿಗೆ ಹೆಚ್ಚಿನ ಸಾಲ ಕೊಡುವ ಉದ್ದೇಶದಿಂದ ಈ ಕೆಳಕಂಡ ಸಾಲಗಳನ್ನು ನೀಡಲು ತೀರ್ಮಾನಿಸಿದೆ ಎಂದರು
1.ವಾಹನ ಖರೀದಿ ಸಾಲ
ಶೇ. 10ರ ಬಡ್ಡಿದರದಲ್ಲಿ,
2. ರಸಗೊಬ್ಬರ ಖರೀದಿ ಸಾಲ ಶೇ. 10ರ ಬಡ್ಡಿದರದಲ್ಲಿ,
3.ಸಾಮಾಜಿಕ ಉದ್ದೇಶ ಸಾಲವನ್ನು 3 ಲಕ್ಷದಿಂದ 10 ಲಕ್ಷಕ್ಕೆ ಏರಿಸಿದ್ದು
ಶೇ. 12ರ ಬಡ್ಡಿದರದಲ್ಲಿ
4. ವಿದ್ಯಾಭ್ಯಾಸ ಸಾಲ 20 ಲಕ್ಷದವರೆಗೆ
ಶೇ. 10ರ ಬಡ್ಡಿದರದಲ್ಲಿ
5.ಸ್ಥಿರಸೊತ್ತು ಆಧಾರ ಸಾಲ ರೂ. 30.00ಲಕ್ಷದವರೆಗೆ
ಶೇ. 12ರ ಬಡ್ಡಿದರದಲ್ಲಿ
6.ಜಮೀನು ಖರೀದಿ ಹಾಗೂ ನಿವೇಶನ ಖರೀದಿ ಸಾಲ ರೂ. 30.00ಲಕ್ಷದವರೆಗೆ
ಶೇ. 12ರ ಬಡ್ಡಿದರದಲ್ಲಿ
7.ಗೃಹ ನಿರ್ಮಾಣಸಾಲ/ಮನೆ ರಿಪೇರಿ/ಮನೆ ಖರೀದಿ ಸಾಲ ರೂ. 30.00ಲಕ್ಷದವರೆಗೆ
ಶೇ. 12ರ ಬಡ್ಡಿದರದಲ್ಲಿ.
ವಿಷಯ ಪರಿಣಿತ ನಿರ್ದೇಶಕರಾದ ಹೆಚ್ ಎಂ ನಟರಾಜ್ ಬಾಳೆಮನೆಯವರು ಸ್ವಂತ ಬಂಡವಾಳ ಯೋಜನೆಯಲ್ಲಿ ಎರಡು ಕೋಟಿ ಮೂರು ಲಕ್ಷ ಸುಸ್ತಿ ಸಾಲ ಲಾಸಾಗಿತ್ತು, ಇದು ಅನೇಕ ವರ್ಷಗಳಿಂದ ಬಾಕಿಯಿತ್ತು ಅದಕ್ಕೆ ನಮ್ಮ ರೈತ ಮಂಡಳಿಯಿಂದ ನಾವು ಸರ್ಕಾರದ ಅನುಮತಿ ಪಡೆದು ಬಡ್ಡಿ ರಿಯಾಯಿತಿ ನೀಡಿದ್ದರಿಂದ ಒಂದು ಕೋಟಿ ನಲವತ್ತ ಮೂರು ಲಕ್ಷ ವಸೂಲಿಯಾಗಿ ಒಟ್ಟು ಬಂಡವಾಳದಲ್ಲಿ ಶೇ ಎಪ್ಪತ್ತರಷ್ಟು ವಸೂಲಿಯಾದಂತಾಗಿದೆ ಎಂದರು.
ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಸಿ ಎಸ್ ಲಕ್ಷೀ ನಾರಾಯಣ್ ಅವರು ನಾವು ವಿವಿಧ ರೀತಿಯ ಸಾಲಗಳನ್ನು ಬ್ಯಾಂಕಿನ ವತಿಯಿಂದ ನೀಡುತ್ತಿದ್ದೇವೆ ಸರ್ಕಾರಿ ನೌಕರರ ಸಂಬಳಾಧರಿತ ಸಾಲದಿಂದ ಹಿಡಿದು ಬಂಗಾರ ಅಡಮಾನದ ಸಾಲದವರೆಗೂ ನೀಡುತ್ತಿದ್ದೇವೆ. ನಮ್ಮ ಬ್ಯಾಂಕಿನ ಹೆಮ್ಮೆಯ ಮಾರ್ಗದರ್ಶಕರು ನಮ್ಮ ಬ್ಯಾಂಕಿನ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಆದ ಸಹಕಾರಿ ದುರೀಣರು ಹೆಚ್ ಎಂ ನಟರಾಜ್ ಬಾಳೆಮನೆ ಅವರ ಶ್ರಮ ಈ ಬ್ಯಾಂಕಿನ ಅಭಿವೃದ್ಧಿಯಲ್ಲಿ ಬಹಳಷ್ಟಿದೆ ಎಂದು ಅವರ ಕೊಡುಗೆಗಳನ್ನು ನೆನಡದರು.
ಈ ಸಂಧರ್ಭದಲ್ಲಿ ಅಧ್ಯಕ್ಷರಾದ ಅಬ್ಬಳಮಕ್ಕಿ ಅಶ್ವಥ್, ಉಪಾಧ್ಯಕ್ಷರಾದ ಎ ಆರ್ ಮಹೇಶ್, ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಹೆಚ್ ಎಂ ನಟರಾಜ್ ಬಾಳೆಮನೆ, ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಸಿ ಎಸ್ ಲಕ್ಷೀ ನಾರಾಯಣ್, ಮಾಜಿ ಅಧ್ಯಕ್ಷರಾದ ನಾಗರತ್ಮಮ್ಮ, ಸದಸ್ಯರಾದ ಸುಧೀರ್ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಕ್ಟೋರಿಯಾ ಕಾರ್ವಾಲ್ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.
ವರದಿ: ಶಶಿ ಬೆತ್ತದಕೊಳಲು
