ಮೂಡಿಗೆರೆ: ಲಾಟರಿ ಹೆಸರಿನಲ್ಲಿ ಮೂಡಿಗೆರೆಯ ಕುಂಬರಡಿ ಗ್ರಾಮದ ಯುವಕ ಸುರಕ್ಷಿತ್ ಎಂಬಾತನಿಗೆ ದೂರವಾಣಿ ಮೂಲಕ ಕರೆ ಬಂದಿದ್ದು ಕೇರಳ ಲಾಟರಿ ಪಡೆಯುವಂತೆ ಮೊದಲು ಲಾಟರಿ ಮೊತ್ತವನ್ನು ಆನ್ಲೈನ್ ಮುಖೇನ ಪವತಿಸಿಕೊಂಡಿದ್ದು ಮಹಾ ಮೋಸ ಮಾಡಲು ತಯಾರಾಗಿದ್ದು, ಸ್ವಲ್ಪ ಸಮಯದ ಬಳಿಕ ಹ್ಯಾಕರ್ ನಿಮಗೆ ಕೇರಳ ಲಾಟರಿ 24 ಲಕ್ಷ ಬಂದಿದೆ.

ಆ ಹಣವನ್ನು ನಿಮ್ಮ ಖಾತೆಗೆ ಹಣ ಪಾವತಿಸಲು 12000 ತೆರಿಗೆ ಯಾಗುತ್ತದೆ. ತೆರಿಗೆ ಹಣವನ್ನು ವೈಯುಕ್ತಿಕ ಖಾತೆಗೆ ಕೂಡಲೆ ಜಮಾ ಮಾಡುವಂತೆ ಪಿಡಿಸಿದ್ದು, ಹಣ ಪಾವತಿಸಲು ತಯಾರಾಗಿ ಕೊನೆಯದಾಗಿ ಮಾಲೀಕರ ಬಳಿ ನಡೆದ ಘಟನೆ ಕುರಿತು ಮಾಹಿತಿ ನೀಡಿದ್ದಾನೆ ತದನಂತರ ಮಾಲೀಕರು ತಿಳಿ ಹೇಳಿ ಹ್ಯಾಕರ್ಗಳ ಮಹಾ ಮೋಸದ ಬಗ್ಗೆ ತಿಳಿ ಹೇಳಿದ್ದಾರೆ
ಈ ವಿಚಾರವಾಗಿ ಪಬ್ಲಿಕ್ ಇಂಪ್ಯಾಕ್ಟ್ ಗೆ ಮಾಹಿತಿ ನೀಡಿದ ಅವರು ತನಗೆ ಆದಂತ ಮೋಸ ಸಾರ್ವಜನಿಕರಿಗೆ ಆಗಬಾರದು, ಯಾರು ಕೂಡ ಅಪರಿಚಿತ ಸಂಖ್ಯೆ ಗಳಿಂದ ಬರುವಂತ ದೂರವಾಣಿ ಕರೆಗಳಿಗೆ ಸ್ಪಂದಿಸಬೇಡಿ . ಯಾವುದೇ ಒಟಿಪಿ ಅಥವಾ ಬ್ಯಾಂಕ್ ಖಾತೆ ಕುರಿತಾಗಿ ಮಾಹಿತಿ ನೀಡಬಾರದು,ಎಂಬುದಾಗಿ ಮನವಿ ಮಾಡಿದ್ದಾರೆ
