ಎನ್.ಆರ್.ಪುರ : ಕರ್ನಾಟಕ ಸರ್ಕಾರದ ಭೂ ಮತ್ತು ನ್ಯಾಯ ಮಂಡಳಿ ನಾಮ ನಿರ್ದೇಶನ ಸದಸ್ಯರಾಗಿ ಚಿಕ್ಕಮಗಳೂರು ಎನ್.ಆರ್.ಪುರ ತಾಲೂಕಿನ ಕಾರ್ತಿಕ್ ಕಾರ್ ಗದ್ದೆ ಅವರನ್ನು ಆಯ್ಕೆಮಾಡಿ ಎಂದು ಆದೇಶ ಹೊರಡಿಸಲಾಗಿದೆ.

ಹೌದು .. ಕರ್ನಾಟಕ ಸರ್ಕಾರದ ಭೂ ಮತ್ತು ನ್ಯಾಯ ಮಂಡಳಿ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾಗಲು ಸರ್ಕಾರವು ಅಧಿಕೃತ ಅಧಿಸೂಚನೆ ಹೊರಡಿಸುತ್ತದೆ. ಆಯಾ ತಾಲ್ಲೂಕಿನ ಉಪವಿಭಾಗಾಧಿಕಾರಿ ಅಥವಾ ಸರ್ಕಾರದಿಂದ ನೇಮಕಗೊಂಡ ಸಹಾಯಕ ಆಯುಕ್ತರು ಮಂಡಳಿಯ ಅಧ್ಯಕ್ಷರಾಗಿರುತ್ತಾರೆ.
ಈ ಬಾರಿ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್.ಪುರ ತಾಲೂಕಿನ ಬಿ.ಕಣಬೂರು ಗ್ರಾಮದ ಚಿನ್ನೇಗೌಡ ಕೆ.ಪಿ ಇವರ ಮಗನಾದ ಕಾರ್ತಿಕ್ ಕಾರ್ ಗದ್ದೆ ಅವರನ್ನು ನರಸಿಂಹರಾಜಪುರ ತಾಲೂಕು ಭೂ ನ್ಯಾಯ ಮಂಡಳಿಯ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.
ಸಾಮಾನ್ಯವಾಗಿ ಸ್ಥಳೀಯ ಶಾಸಕರು, ರಾಜಕೀಯ ಮುಖಂಡರು ಮತ್ತು ಸಾರ್ವಜನಿಕರು ಅರ್ಹ ಮತ್ತು ಸಮಾಜ ಸೇವೆಯಲ್ಲಿ ತೊಡಗಿರುವವರ ಹೆಸರನ್ನು ಸರ್ಕಾರಕ್ಕೆ ಶಿಫಾರಸು ಮಾಡುತ್ತಾರೆ.
