Tuesday, July 14, 2026
Homeಜಿಲ್ಲಾಸುದ್ದಿಸಮಾಜದ ಶಾಶ್ವತ ಪರಿವರ್ತನೆಗಾಗಿ ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ಪಾತ್ರ ರೋಟರಿ ಸಂಸ್ಥೆ ವಹಿಸಿದೆ:ನಯನ್ ಗೋಣಿಬೀಡು

ಸಮಾಜದ ಶಾಶ್ವತ ಪರಿವರ್ತನೆಗಾಗಿ ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ಪಾತ್ರ ರೋಟರಿ ಸಂಸ್ಥೆ ವಹಿಸಿದೆ:ನಯನ್ ಗೋಣಿಬೀಡು

Telegram Group
Join Now

ಮೂಡಿಗೆರೆ :ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಜನ್ನಪುರದ ವರ್ತಕರ ಸಮುದಾಯ ಭವನದಲ್ಲಿ ಅದ್ದೂರಿಯಾಗಿ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಶ್ರೀ ನಯನ್ ಗೋಣಿಬೀಡು ಮಾತನಾಡಿ ಸಮಾಜದ ಶಾಶ್ವತ ಪರಿವರ್ತನೆಗಾಗಿ ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುವಲ್ಲಿ ಪ್ರಮುಖ ಪಾತ್ರವನ್ನು ರೋಟರಿ ಸಂಸ್ಥೆ ವಹಿಸಿದೆ ಎಂದು ಅವರು ಹೇಳಿದರು

ರೋಟರಿ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ರೋಟರಿಯು ಸಮಾಜಮುಖಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದರು

ಹಲವು ನಿರೀಕ್ಸೆಯೊಂದಿಗೆ ನನ್ನನ್ನು ಅಧ್ಯಕ್ಷ ರಾಗಿ ಆಯ್ಕೆ ಮಾಡಿದ ಸಂಸ್ಥೆಯ ಸದಸ್ಯರಿಗೆ ಧನ್ಯವಾದ ಅರ್ಪಿಸಿದ ಅವರು ನಿಮ್ಮ ನಿರೀಕ್ಷೆಯಂತೇ ನಾನು ಮತ್ತು ನಮ್ಮ ತಂಡ ಸಮಾಜ ಮುಖಿ ಕೆಲಸಗಳನ್ನು ಮಾಡುವುದಾಗಿ ಭರವಸೆ ನೀಡಿದರು,

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅಲೆನ್ ವಿನಯ್ ಲಿವೀಸ್ ರೋಟರಿ ಸಂಸ್ಥೆಯು ಮಾನವೀಯ ಸೇವೆ, ಸಾಮಾಜಿಕ ಕಳಕಳಿ ಮತ್ತು ನಾಯಕತ್ವದ ಮೂಲಕ ಸಮಾಜದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಶಿಕ್ಷಣ, ಆರೋಗ್ಯ, ಪರಿಸರ ಹಾಗೂ ಯುವಜನರ ಸಬಲೀಕರಣ ಕ್ಷೇತ್ರಗಳಲ್ಲಿ ರೋಟರಿ ನೀಡುತ್ತಿರುವ ಕೊಡುಗೆ ಶ್ಲಾಘನೀಯ ಎಂದರು.

ಈ ವರ್ಷ ಸದಸ್ಯರ ಸಹಕಾರದೊಂದಿಗೆ ಇನ್ನಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳು, ಶಾಲಾ ಮಕ್ಕಳಿಗೆ ಅಗತ್ಯ ಸೌಲಭ್ಯಗಳು, ವೃಕ್ಷಾರೋಪಣ, ರಕ್ತದಾನ, ಮಹಿಳಾ ಸಬಲೀಕರಣ ಹಾಗೂ ಯುವಜನರ ಕೌಶಲ್ಯಾಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವಂತೆ ಸಲಹೆ ನೀಡಿದರು

ಸದಸ್ಯತ್ವ ವಿಸ್ತರಣೆ, ಸಮಾಜ ಸೇವೆ ಹಾಗೂ ಹೊಸ ಯೋಜನೆಗಳ ಮೂಲಕ ಕ್ಲಬ್​ ಇನ್ನಷ್ಟು ಜನರಿಗೆ ತಲುಪುವಂತೆ ಕಾರ್ಯ ನಿರ್ವಹಿಸಲಿ. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವವೇ ರೋಟರಿಯ ಮೂಲ ಧ್ಯೇಯವಾಗಿದೆ. ಪ್ರತಿಯೊಬ್ಬ ಸದಸ್ಯರೂ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಇದೆ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು

ಈ ಸಂದರ್ಭದಲ್ಲಿ ಸಹಾಯಕ ಗವರ್ನರ್ ಡಾ.ಗಣೇಶ್,ಅಧ್ಯಕ್ಷರಾದ ಮಹಿಪಾಲ್,ಕಾರ್ಯದರ್ಶಿ ರಾಮು,ಜೋನಲ್ ಲೆಫ್ಟಿಂನೆಂಟ್ ಯು. ವಿ.ಪ್ರಕಾಶ್,ಕಾರ್ಯದರ್ಶಿ ಕೆ. ಸಿ ವಿನಯ್,ಸೇರಿದಂತೆ ಗೋಣಿಬೀಡು ರೋಟರಿ ಸಂಸ್ಥೆಯ ನೂತನ ಉಪಾಧ್ಯಕ್ಷ ರತನ್ ಎಂ. ಎಂ.ನಿರ್ದೇಶಕರುಗಳಾದ ನಂಜುಂಡೇಗೌಡ ಜಿ, ಎ, ಸದಾಶಿವ ಕೆ,ಜಗದೀಶ್ ಕೆ,ಟಿ.ಬಿ, ಎಸ್ ಓಂಕಾರ್,ಪ್ರಸನ್ನ ಜಿ. ಕೆ ಮುಂತಾದವರಿದ್ದರು

ವರದಿ:ಪುನೀತ್ ಕಡಿದಾಳು
9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments