ಚಿಕ್ಕಮಗಳೂರು: ಮಾಜಿ ಸೈನಿಕ ಹಾಗೂ ಪ್ರಸ್ತುತ ಚಿಕ್ಕಮಗಳೂರು ಜಿಲ್ಲೆಯ ಬಸವನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಕೀರ್ತಿ ಕುಮಾರ್ ಹೆಚ್ ಡಿ, ಅವರಿಗೆ ಭಾರತೀಯ ಸೇನೆಯಲ್ಲಿ ಸಲ್ಲಿಸಿದ ಅತ್ಯುತ್ತಮ ವಿದೇಶಿ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ.

ಇವರು ಚಿಕ್ಕಮಂಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲೂಕು ಹೆಗ್ಗರವಳ್ಳಿ ಗ್ರಾಮದ ದಿವಂಗತ ದುಗ್ಗೇಗೌಡ ಮತ್ತು ದೇವಮ್ಮ ಇವರ ದ್ವಿತೀಯ ಪುತ್ರನಾಗಿ ಜನಿಸಿ, ಹೆಗ್ಗೆರವಳ್ಳಿ ಹುರುಡಿ ,ಹಾನುಬಾಳು ಇಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಮುಗಿಸಿ, ಡಿ ಎಸ್ ಬಿ ಜಿ ಪ್ರಥಮ ದರ್ಜೆ ಕಾಲೇಜು, ಮೂಡಿಗೆರೆ ಇಲ್ಲಿ ಪದವಿ ಪಡೆದಿದ್ದಾರೆ.
ಭಾರತೀಯ ಸೇನೆಯ ಮದ್ರಾಸ್ ರೆಜಿಮೆಂಟ್ ನಲ್ಲಿ 17 ವರ್ಷಗಳು, ದೇಶಾದ್ಯಂತ ಮತ್ತು ವಿದೇಶಗಳಲ್ಲಿ ಸೇವೆ ಸಲ್ಲಿಸಿ, ತನ್ನ ತಾಯ್ನಾಡಿಗೆ ಮರಳಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಯಲ್ಲಿ 2016ನೇ ಬ್ಯಾಚಿನ ಕೆಡೆರ್ ನಲ್ಲಿ ತರಬೇತಿ ಹೊಂದಿ, ದಕ್ಷ ರೀತಿಯಿಂದ ಸೇವೆ ಸಲ್ಲಿಸುತ್ತಿರುವರು, ಸೈನ್ಯದಲ್ಲಿರುವಾಗ ಇವರ ವಿದೇಶಿ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಸನ್ಮಾನವನ್ನು ನೀಡುತ್ತಿದ್ದಾರೆ.

ಸರ್ಕಾರಿ ಶಾಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು ಸಹ, ನಿರಂತರವಾಗಿ ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿಕೊಂಡಿರುತ್ತಾರೆ, ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಇರುವ ಇವರು, ರಾಜಸ್ಥಾನ ಮತ್ತು ಗುಜರಾತ್ ನಲ್ಲಿ ಸೇನೆಯಲ್ಲಿರುವಾಗ ಬ್ರಿಗೇಡ್ ಮತ್ತು ಇವುಗಳಲ್ಲಿ 40 ಮತ್ತು 50 ಕಿಲೋಮೀಟರ್ ಮಾರತಾನ್ ಓಟದಲ್ಲಿ ಚಿನ್ನದ ಪದಕಗಳನ್ನು ಗಳಿಸಿರುತ್ತಾರೆ, ಮತ್ತು ಹವ್ಯಾಸಿ, ಈಜುಗಾರರಾಗಿರುತ್ತಾರೆ, ಸೇನೆಯಲ್ಲಿರುವಾಗ ಭಾರತೀಯ ಶಾಂತಿಪಾಲನಾ ಪಡೆಯಲ್ಲಿ ಅತ್ಯುತ್ತಮ ಸೇವೆಯನ್ನು ಲೆಬನಾನ್ ಉಗಾಂಡ ಮತ್ತು ಸೈಬೀರಿಯಾಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ.
ಸದಾ ಹಸನ್ಮುಖಿ ಮತ್ತು ಉತ್ಸಾಹ ಯಾಗಿರುವ ಇರುವವರು, ಎಲ್ಲರೊಂದಿಗೂ ಬೆರೆತು ಒಡನಾಟ ಇಟ್ಟುಕೊಂಡಿರುತ್ತಾರೆ, ಇವರಿಗೆ ಉದ್ಯೋಗದಲ್ಲಿ ಉನ್ನತ ಬಡ್ತಿ ಮತ್ತು ಇನ್ನು ಹಲವು ಪ್ರಶಸ್ತಿ ಸನ್ಮಾನಗಳು ಸಿಗಲೆಂದು ಹಾಗೆ ಜನಸೇವೆಯಲ್ಲಿ ಇನ್ನಷ್ಟು ಸಾಧನೆ ಮಾಡಲೆಂದು ಸಾರ್ವಜನಿಕರು ಹಾರೈಸಿದ್ದಾರೆ.
