ಮೂಡಿಗೆರೆ:ತಲೆಯೊಳಗೆ ಗೆಡ್ಡೆಯಾಗಿ ಚಿಕಿತ್ಸೆ ಪಡೆಯಲು ಹಣವಿಲ್ಲದೇ ಗಬ್ಗಲ್ ಗ್ರಾಮದ ಕುಟುಂಬವೊಂದು ದಾನಿಗಳಿಂದ ಚಿಕಿತ್ಸೆಯ ನೆರವಿನ ನಿರೀಕ್ಷೆಯಲ್ಲಿದೆ.
ಹೌದು .. ಗಬ್ಗಲ್ ಗ್ರಾಮದ ಬಡಕುಟುಂಬದ ಗುಲಾಬಿ ಎಂಬುವವರು ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಕುಟುಂಬ ಚಿಕಿತ್ಸೆಗೆ ಹಣವಿಲ್ಲದೇ ಸಾಲ ಮಾಡಿ ಚಿಕಿತ್ಸೆಗೆ ಕೊಡಿಸುತ್ತಿದ್ದು ಮುಂದಿನ ಚಿಕಿತ್ಸೆಗೆ ಹಣವಿಲ್ಲದೇ ಕೈ ಚೆಲ್ಲಿ ಕುಳಿತಿದೆ.
ಗುಲಾಬಿ ಅವರಿಗೆ ಕೆಲ ವರ್ಷದಿಂದ ಮಾತು ತೊದಲುವುದು, ನಡೆಯಲು ಸಾಧ್ಯವಾಗದೇ ಇರುವುದು, ಕಿವಿ ಕೇಳಿಸದೇ ಇರುವುದು, ದೃಷ್ಠಿ ಮಂಜಾಗುವ ಲಕ್ಷಣಗಳು ಕಾಣಿಸಿಕೊಂಡಿದ್ದು ಬಾಳೆಹೊನ್ನೂರು, ಮಾಗುಂಡಿ ಮುಂತಾದ ಸ್ಥಳೀಯ ಆಸ್ಪತ್ರೆಗೆ ತೋರಿಸಿದ್ದಾರೆ. ಆದರೂ ಕೂಡ ರೋಗ ಕಡಿಮೆಯಾಗದೇ ಇರುವುದರಿಂದ ಶಿವಮೊಗ್ಗ ಮತ್ತು ಪಡೀಲಿನ ಆಸ್ಪತ್ರೆಗೆ ಹೋದಾಗ ಪರಿಶೀಲಿಸಿದ ವೈದ್ಯರು, ಎಡ ಕಿವಿ ಸ್ವಲ್ಪ ಮೇಲೆ ತಲೆಯ ಒಳಭಾಗದಲ್ಲಿ ಗೆಡ್ಡೆ ಇದ್ದು ಶಸ್ತçಚಿಕಿತ್ಸೆ ಮಾಡಬೇಕು ಎಂದು ತಿಳಿಸಿದ್ದಾರೆ. ಇದಕ್ಕೆ ಸುಮಾರು 3 ಲಕ್ಷ ವೆಚ್ಚವಾಗಲಿದ್ದು ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವಂತಾಗಿದೆ.
ಗುಲಾಬಿ ಅವರ ಗಂಡ ವರ್ಷದ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗುಲಾಬಿ ಅವರಿಗೆ 8ನೇ ತರಗತಿ ಓದುವ ಮಗ ಮತ್ತು 6ನೇ ತರಗತಿ ಓದುವ ಮಗಳಿದ್ದಾಳೆ. ಗುಲಾಬಿ ಅವರ ತಾಯಿ ಹಾಗೂ ಅವರ ಕುಟುಂಬದವರು ಗುಲಾಬಿ ಅವರನ್ನು ನೋಡಿಕೊಳ್ಳುತ್ತಿದ್ದು ಚಿಕಿತ್ಸೆಗೆ ದಾನಿಗಳಿಂದ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ನೆರವು ನೀಡುವ ದಾನಿಗಳು ಗುಲಾಬಿ ಅವರ ಕರ್ನಾಟಕ ಬ್ಯಾಂಕ್ ನ ಬಾಳೆಹೊನ್ನೂರು ಶಾಖೆಯ ಖಾತೆ ಸಂಖ್ಯೆ:5382500100803601, ಐಎಫ್‌ಎಸ್‌ಸಿ ಕೋಡ್:ಕೆಎಆರ್‌ಬಿ0000052ಗೆ ಹಣ ಸಂದಾಯ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ 7338628023 ಸಂಖ್ಯೆಗೆ ಸಂರ್ಪಕಿಸಬಹುದಾಗಿದೆ
