Thursday, July 16, 2026
Homeಜಿಲ್ಲಾಸುದ್ದಿCrop Insurence: ಬೆಳೆ ವಿಮೆ ಯೋಜನೆಯಡಿ ಭತ್ತದ ಬೆಳೆಗೆ ಅರ್ಜಿ ಆಹ್ವಾನ: ಆಗಸ್ಟ್‌ 14ರೊಳಗೆ ನೋಂದಣಿಗೆ...

Crop Insurence: ಬೆಳೆ ವಿಮೆ ಯೋಜನೆಯಡಿ ಭತ್ತದ ಬೆಳೆಗೆ ಅರ್ಜಿ ಆಹ್ವಾನ: ಆಗಸ್ಟ್‌ 14ರೊಳಗೆ ನೋಂದಣಿಗೆ ಅವಕಾಶ!

Telegram Group
Join Now

ಮೂಡಿಗೆರೆ:  ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ 2026 -27 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅನುಷ್ಠಾನಗೊಳಿಸಲು ಅಧಿ ಸೂಚನೆ ಹೊರಡಿಸಲಾಗಿದ್ದು ಭತ್ತದ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ ಅತಿವೃಷ್ಟಿ ಅನಾವೃಷ್ಟಿ ಮೊದಲಾದ ಕಾರಣದಿಂದ ಬೆಳೆದ ಬೆಳೆ ಕೈಕೊಟ್ಟರೆ ರೈತರಿಗೆ ಬೆಳೆವಿಮೆಯು ಶ್ರೀರಕ್ಷೆಯಾಗಲಿದೆ.

ಈ ಯೋಜನೆ ಅಡಿಯಲ್ಲಿ ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರಿಬ್ಬರೂ ವಿಮೆ ಮಾಡಿಸಬಹುದು ವಿಮಾ ಕಂತು ಪಾವತಿಸಲು ಅರ್ಜಿಯೊಂದಿಗೆ ಆಧಾರ್ ಕಾರ್ಡ್ ಪಹಣಿ ಬ್ಯಾಂಕ್ ಪಾಸ್ ಬುಕ್ ದಾಖಲಾತಿಗಳನ್ನು ಹತ್ತಿರದ ಬ್ಯಾಂಕ್ ಸಾಮಾನ್ಯ ಸೇವಾ ಕೇಂದ್ರ ಗ್ರಾಮ್ ಒನ್ ಕೇಂದ್ರ ಗಳಲ್ಲಿ ನಿಗದಿತ ವಿಮಾ ಕಂತು ಪಾವತಿಸಿ ಬೆಳೆ ವಿಮೆಗೆ ನೋಂದಣಿ ಮಾಡಿಸಿಕೊಳ್ಳಬಹುದು ಬೆಳೆ ವಿಮೆ ನೋಂದಣಿಗೆ 14 ಆಗಸ್ಟ್ 2026 ಕೊನೆಯ ದಿನಾಂಕ ವಾಗಿರುತ್ತದೆ.

ರೈತ ಬಾಂಧವರು ನಿಗದಿಪಡಿಸಿದ ಅವಧಿಯೊಳಗೆ ಬೆಳೆ ವಿಮೆಗೆ ನೊಂದಾಯಿಸಿಕೊಳ್ಳಬೇಕೆಂದು ಸಹಾಯಕ ಕೃಷಿ ನಿರ್ದೇಶಕರು ಮೂಡಿಗೆರೆ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ ಹೆಚ್ಚಿನ ಮಾಹಿತಿಗಾಗಿ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ ಅಥವಾ ಮೂಡಿಗೆರೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬೇಕಾಗಿ ಕೋರಲಾಗಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments