ಮೂಡಿಗೆರೆ: ವಿಧಾನಪರಿಷತ್ ಉಪಸಭಾಪತಿ ಎಂಕೆ ಪ್ರಾಣೇಶ್ ರವರ ಪರಿಷತ್ ಸದಸ್ಯತ್ವ ನ್ಯಾಯಾಲಯದಿಂದ ರದ್ದತಿಯಾಗಿದ್ದು. ಇದು ನಿಜಕ್ಕೂ ಸಜ್ಜನ ಸರಳ ಮತ್ತು ಪ್ರಾಮಾಣಿಕ ರಾಜಕಾರಣದ ನೈತಿಕತೆಯ ಸೋಲು ಎಂಬುದಾಗಿ ಬಿಜೆಪಿ ಮುಖಂಡ ನಯನ ತಳವಾರ ತಿಳಿಸಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ಚುನಾವಣೆಯಲ್ಲಿ ವಿಧಾನ ಪರಿಷತ್ ಗೆ ಎಂ ಕೆ ಪ್ರಾಣೇಶ್ ಬಿಜೆಪಿಯಿಂದ ಆಯ್ಕೆಯಾಗಿದ್ದರು, ಗಾಯತ್ರಿ ಶಾಂತೇಗೌಡ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದರು. ಅಂತಿಮ ಫಲಿತಾಂಶದಲ್ಲಿ ಮೂರು ಮತಗಳ ಆಧಾರದಲ್ಲಿ ಎಂ ಕೆ ಪ್ರಾಣೇಶ್ ಜಯಗಳಿಸಿ ಪರಿಷತ್ತಿಗೆ ಪ್ರವೇಶ ಪಡೆದಿದ್ದರು. ಆದರೆ ಇದನ್ನು ಒಪ್ಪದ ಗಾಯತ್ರಿಯವರು ನಾಮಿನಿ ಸದಸ್ಯರ ಮತಗಳನ್ನು ಹಾಕಿಸಿಕೊಂಡು ಪ್ರಾಣೇಶ್ ಗೆದ್ದಿದ್ದಾರೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.
ಈ ನಾಮಿನಿ ಮತಗಳು ಪ್ರಾಣೇಶ್ ಇವರಿಗೆ ಮಾತ್ರ ಸೀಮಿತವಾಗಿ ಬಿದ್ದದ್ದಲ್ಲ ರಾಜ್ಯದ ಎಲ್ಲಾ ವಿಧಾನ ಪರಿಷತ್ ಸದಸ್ಯರು ಈ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಅವರಿಗೆ ಒಂದು ನ್ಯಾಯ. ಪ್ರಾಣೇಶ ಅವರಿಗೆ ಒಂದು ನ್ಯಾಯ. ಇದು ಒಟ್ಟಾರೆ ನ್ಯಾಯಾಂಗದ ಪರಮಾಧಿಕಾರವಾಗಿದೆ ಈ ಸಂದರ್ಭದಲ್ಲಿ ನ್ಯಾಯಾಲಯ ದಲ್ಲಿ ಕಳೆದ ನಾಲ್ಕುವರೆ ವರ್ಷ ಪ್ರಕರಣ ನಡೆದು. ಅಂತಿಮವಾಗಿ ಸುಪ್ರೀಂಕೋರ್ಟ್ ಆದೇಶದಂತೆ ಗಾಯತ್ರಿ ಶಾಂತೇಗೌಡ ಗೆಲುವು ಸಾಧಿಸಿದ್ದಾರೆ ಎಂದು ಆದೇಶಿಸಿದೆ
ಆದರೆ ನಿಜಕ್ಕೂ ಇದೊಂದು ನೈತಿಕತೆಯ ಸೋಲು. ಈ ಹಿಂದೆ ಗಾಯತ್ರಿ ಶಾಂತೇಗೌಡ ವಿಧಾನಪರಿಷತ್ ಸದಸ್ಯರಾಗಿದ್ದ ಸಂದರ್ಭ ಇದೇ ರೀತಿಯ ನಾಮಿನಿ ಮತಗಳನ್ನು ಇವರು ಕೂಡ ಪಡೆದು ಗೆಲವು ಸಾಧಿಸಿದ್ದರು. ಆಗ ಈ ನಾಮಿನಿ ಮತಗಳು ಖುಷಿತಂದಿದ್ದವು. ಈ ನಾಮಿನಿ ಮತದಾರರಿಗೆ ಹಕ್ಕನ್ನು ಎಸ್ಎಂ ಕೃಷ್ಣ ಸರ್ಕಾರದ ಅವಧಿಯಲ್ಲಿ ನೀಡಲಾಗಿದ್ದು ಅದು ಕಾಂಗ್ರೆಸ್ ನ ಸರ್ಕಾರವೇ ಆಗಿತ್ತು. ಆದರೆ ತನ್ನದೇ ಸರ್ಕಾರದ ಆದೇಶ ತಾನು ಸೋತ ವೇಳೆ ಅನ್ವಯ ಆಗುವುದಿಲ್ಲ ಎಂಬ ಧೋರಣೆ ಎಷ್ಟು ಸರಿ ಈ ಹಿಂದೆ ಇದೆ ನಾಮಿನಿ ಮತಗಳಿಂದ ಗಾಯಿತ್ರಿ ಗೆದ್ದಿರಲಿಲ್ಲವೇ? ಎಂದು ಪ್ರಶ್ನೆ ಮಾಡಿದರು.
ಹಾಗೆ ಸುಪ್ರೀಂಕೋರ್ಟ್ ಹೈ ಕೋರ್ಟ್ ನಲ್ಲಿ ಈ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ ಕನಿಷ್ಠ ಈಗ ಗೆದ್ದಿರುವ ಅಭ್ಯರ್ಥಿ 15 ಕೋಟಿಗೂ ಹೆಚ್ಚು ಹಣವನ್ನು ವ್ಯಾಜ್ಯಕ್ಕಾಗಿ ವ್ಯಯ ಮಾಡಿದ್ದು ಇವರ ಪರವಾಗಿ ಬಂದು ನಿಂತವರು ಗಂಟೆಗೆ ಮೀಟರ್ ಲೆಕ್ಕದಲ್ಲಿ ಲಾಯರ್ ಗಿರಿ ಮಾಡುವ ಮಾಡುವ ಕಪಿಲ್ ಸಿಬಾಲ್. ಅಭಿಷೇಕ್ ಮನುಸಿಂಗ್ವಿ. ಇಂಥ ಘಟಾನುಘಟಿಗಳು ವಾದಕ್ಕೆ ನಿಂತವರು. ಕೋರ್ಟ್ನಲ್ಲಿ ಅತಿ ಹೆಚ್ಚು ಸೀನಿಯರ್ ಲಾಯರ್ ಗಳು ವಾದಕ್ಕೆ ನಿಂತಾಗ. ಆ ಕೇಸಿನ ಕಥೆ ಏನಾಗುತ್ತದೆ ಎಂಬುದು ಬಹುತೇಕರಿಗೆ ತಿಳಿದ ವಿಷಯ. ಇಲ್ಲಿ ಕಳೆದ 40 ವರ್ಷದಿಂದ ಪಕ್ಷವನ್ನು ತಳಮಟ್ಟದಿಂದ ಕಟ್ಟಿದ ಪ್ರಾಣೇಶ ಯಾವುದೇ ಗುತ್ತಿಗೆ ಕಾಮಗಾರಿ ಮಾಡಲಿಲ್ಲ. ಟ್ರಾಸ್ಪರ್ ದಂದೆ. ಡೀಲ್ ಮಾಡಲಿಲ್ಲ. ಅವ್ಯವಹಾರ ಮಾಡಲಿಲ್ಲ 10 ವರ್ಷ ಅಧಿಕಾರ ಇದ್ದರೂ ತನ್ನ ಸರಳ ಸಜ್ಜನ ಪ್ರಾಮಾಣಿಕ ರಾಜಕೀಯದಿಂದ ರಾಜ್ಯದ ಮನೆ ಮಾತಾದವರು. ಇವರ ಕೈಯಲ್ಲೂ ಭ್ರಷ್ಟ ಹಣ ಇದ್ದಿದ್ದಲ್ಲಿ ಇವರು ಹತ್ತಾರು ಕೋಟಿ ವಕೀಲರಿಗೆ ವಹಿಸಿ ಗೆಲ್ಲಬಹುದಿತ್ತೇನೋ ಆದರೆ ಅಲ್ಲೂ ಕೂಡ ತಮ್ಮ ಪ್ರಾಮಾಣಿಕತೆ ಮೆರೆದರು.
ಹಣವಿದ್ದರೆ ಹೆಣವನ್ನು ಬಾಯಿ ಬಿಡಿಸಬಹುದು ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ ಪ್ರಾಣೇಶ್ ಸದಸ್ಯತ್ವ ರದ್ದತಿ ಯಾವುದೇ ಕಾರ್ಯಕರ್ತರ ಮತ್ತು ಪಕ್ಷದ ನೈತಿಕತೆಯನ್ನು ಕುಗ್ಗಿಸುತ್ತಿಲ್ಲ. ಅವರ ಪ್ರಾಮಾಣಿಕತೆ ಸರಳ ವ್ಯಕ್ತಿತ್ವ ಮತ್ತಷ್ಟು ಮೇರು ಮಟ್ಟಕ್ಕೆ ತಲುಪಿದ್ದು ಯುವಕರಿಗೆ ಕಾರ್ಯಕರ್ತರಿಗೆ ಹೆಮ್ಮೆಯ ಸೆಲೆಯಾಗಿದೆ ಎಂದರು
