ಚಿಕ್ಕಮಗಳೂರು: ಮಲ್ಲೇಗೌಡ ಜನರಲ್ ಆಸ್ಪತ್ರೆಯ ಸರ್ಜನ್ ಆಗಿ ಡಾ.ಟಿ.ಎಂ.ದೇವರಾಜ್ ನೇಮಕವಾಗಿದ್ದು ಇಂದು ಮಧ್ಯಾಹ್ನ ಅಧಿಕಾರ ಸ್ಪೀಕಾರ ಮಾಡಲಿದ್ದಾರೆ.
ಮೂಳೆ ತಜ್ಞರಾಗಿ ಹಲವಾರು ಊರುಗಳಲ್ಲಿ ಸೇವೆ ಸಲ್ಲಿಸಿದರವರು.ತರೀಕೆರೆ ದೇವರಾಜ್ ತರೀಕೆರೆಯಲ್ಲಿ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ
ಜನರ ಪ್ರೀತಿ ಗಳಿಸಿದವರು.ಉತ್ತಮ ಸೈಕಲಿಸ್ಟ್ ಆಗಿ ಸೈಕಲ್ ನಲ್ಲಿ ಲಕ್ಷಾಂತರ ಕಿಲೋ ಮೀಟರ್ ಪರ್ಯಟನೆ ಮಾಡಿರುವ ದೇವರಾಜ್ ಹಲವಾರು ಸಂಘ ಸಂಸ್ಥೆಗಳ ಜೊತೆಗೆ ಒಡನಾಟ ಹೊಂದಿದ್ದರು.
ಬೇಲೂರಿನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ದೇವರಾಜ್ ಇಂದು ಸರ್ಜನ್ ಆಗಿ ಅಧಿಕಾರ ಸ್ಪೀಕರಿಸಲಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಹಲವಾರು ವರ್ಷಗಳಿಂದ ಬೀಡು ಬಿಟ್ಟಿರುವ ಕ್ರಿಮಿ ಕೀಟಗಳನ್ನು ದೂರವಿಟ್ಟರೆ ಜೊತೆಗೆ ಆಸ್ಪತ್ರೆಯ ಸುಧಾರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಮಾತ್ರ ಸಾಧ್ಯ. ಎಲ್ಲರೊಳಗೆ ಒಬ್ಬರಾಗಬಹುದು.
