Tuesday, July 21, 2026
Homeಜಿಲ್ಲಾಸುದ್ದಿಹೊಳೆನರಸೀಪುರದ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಚೆನ್ನಮ್ಮ ಅಂತಿಮ ಅಂತ್ಯಕ್ರಿಯೆ!

ಹೊಳೆನರಸೀಪುರದ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಚೆನ್ನಮ್ಮ ಅಂತಿಮ ಅಂತ್ಯಕ್ರಿಯೆ!

Telegram Group
Join Now

ಹಾಸನ: ಮಾಜಿಪ್ರಧಾನಿ ಹೆಚ್.ಡಿ.ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ನಿಧನರಾಗಿದ್ದು, ಅವರ ಪಾರ್ಥಿವ ಶರೀರ ಹೊಳೆನರಸೀಪುರ  ಪಟ್ಟಣದ ಹೆಚ್.ಡಿ.ರೇವಣ್ಣ ಅವರ ನಿವಾಸಕ್ಕೆ ಆಗಮಿಸಿದೆ. ಇಂದು ಮಧ್ಯಾಹ್ನ 2 ಗಂಟೆ ನಂತರ ಹರದನಹಳ್ಳಿ ಬಳಿಯ ಬೆಟ್ಟದ ರಂಗನಾಥಸ್ವಾಮಿ ದೇವಾಲಯದ  ತಪ್ಪಲಿನಲ್ಲಿ ಅಂತ್ಯಕ್ರಿಯೆ ನೆರವೇರಲಿದ್ದು, ಈಗಾಗಲೇ ಸಿದ್ಧತೆಗಳು ಮುಗಿದಿವೆ.

ಚೆನ್ನಮ್ಮ ದೊಡ್ಡಗೌಡರ ಕುಟುಂಬದ ಯಜಮಾನಿ. ಕರುಣೆಯ ಮೂರ್ತಿಯಾಗಿದ್ದ ಕ್ಷಮೆಯಾಧರಿತ್ರಿ. ಮನೆ ಬಾಗಿಲಿಗೆ ಬಂದವರಿಗೆ ಬರಿಗೈಯಲ್ಲಿ ಕಳುಹಿಸದ ಅನ್ನಪೂರ್ಣೇಶ್ವರಿ. ರಾಜಕೀಯ ಕುಟುಂಬದ ಸಿಮೀತ ಹೆಣ್ಣು ಮಗಳು ಆಗಿರಲಿಲ್ಲ. ಅವರು ದೊಡ್ಡಗೌಡ ಕುಟುಂಬಕ್ಕೆ ಬರುವ ಪ್ರತಿಯೊಬ್ಬರಿಗೂ ಅಮ್ಮ ಆಗಿದ್ದರು. ಯಾರೇ ಆಗಲಿ ದೇವೇಗೌಡರ ಭೇಟಿ ಬಳಿಕ ಅಮ್ಮನ ಭೇಟಿ ಮಾಡದೇ ತೆರಳುತ್ತಿರಲಿಲ್ಲ. ಊಟ ಮಾಡದೆ ಆ ತಾಯಿಯ ಮನೆಯಿಂದ ಯಾರು ಹೋಗುತ್ತಿರಲಿಲ್ಲ. ರಾಜಕೀಯ ಮನೆತನ ಹೆಣ್ಣು ಮಗಳಾಗಿದ್ದರೂ ಅವರಲ್ಲಿ ಹಳ್ಳಿಯ ಸೊಗಡಿನ ಪ್ರೀತಿ, ಬಾಂಧವ್ಯವಿತ್ತೇ ಹೊರತು ಅಹಂಗೆ ಜಾಗವೇ ಇರಲಿಲ್ಲ. ಸಾಕ್ಷಾತ್ ಅನ್ನಪೂರ್ಣೇಶ್ವರಿಯಾಗಿದ್ದ ಚೆನ್ನಮ್ಮ ಅವರ ಹುಟ್ಟೂರಿನಲ್ಲಿ ಇಂದು ಅಂತ್ಯಸಂಸ್ಕಾರ ನೆರವೇರಲಿದೆ.

ಶಿವೈಕ್ಯರಾದ ಚೆನ್ನಮ್ಮ ಅವರ ಅಂತ್ಯಕ್ರಿಯೆ ಹೊಳೆನರಸೀಪುರ ತಾಲೂಕಿನ, ಹರದನಹಳ್ಳಿ ಗ್ರಾಮದ ಸಮೀಪವಿರುವ ಕ್ಯಾತನಹಳ್ಳಿ ಗ್ರಾಮದ ಬೆಟ್ಟದ ರಂಗನಾಥಸ್ವಾಮಿ ತಪ್ಪಲಿನಲ್ಲಿರುವ ಜಮೀನಿನಲ್ಲಿ ನಡೆಯಲಿದೆ. ಶ್ರೀ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಬೃಹತ್ ಜರ್ಮನ್ ಟೆಂಟ್ ನಿರ್ಮಿಸಲಾಗಿದ್ದು, ಮೂವತ್ತು ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ವಾಸ್ತು ತಜ್ಞ ಹರಿಪ್ರಸಾದ್ ವಾಸ್ತು ಪ್ರಕಾರ ಜಾಗ ಗುರುತು ಮಾಡಿದ್ದು, ಮಧ್ಯಾಹ್ನ ಎರಡು ಗಂಟೆ ನಂತರ ಬೆಂಗಳೂರಿನ ಜೆ.ಪಿ ನಗರದ ಕನಕಗಿರಿ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಾದ ಕಣ್ಣನ್ ಸ್ವಾಮಿ ನೇತೃತ್ವದಲ್ಲಿ ವಿಧಿ ವಿಧಾನಗಳು ನಡೆಯಲಿದೆ. ಅದರಂತೆ 4:30ರೊಳಗೆ ಅಂತ್ಯಕ್ರಿಯೆ ನೆರವೇರಲಿಸಲು ನಿರ್ಧರಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments