ಮೂಡಿಗೆರ: ಸಂಗೀತ ಪ್ರಸಾದ್ ಎಂಬ ನಮ್ಮ ಬಿಜೆಪಿ ಕಾರ್ಯಕರ್ತೆ ಮೇಲೆ ಕೊಲೆ ಬೆದರಿಕೆ ಹಾಕಿರುವ ಕಾಂಗ್ರೆಸ್ ಶಾಸಕಿ ಅಪ್ತ ಕಾಂಗ್ರೆಸ್ ನ್ನ ಗೂಂಡಾ ಕಾರ್ಯಕರ್ತ ಚಂದ್ರು ಒಡೆಯರ್ ಬಂಧಿಸದಿದ್ದಲ್ಲಿ ಬೃಹತ್ ಹೋರಾಟವನ್ನು ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ್ ಶೆಟ್ಟಿ ತಿಳಿಸಿದ್ದಾರೆ.
ಮೂಡಿಗೆರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೂಡಿಗೆರೆಯ ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆ, ಗುಂಡಿ ಬಿದ್ದ ರಸ್ತೆಗಳು, ನಗರದ ಸಮಸ್ಯೆಗಳು. ಅಭಿವೃದ್ಧಿ ಕೆಲಸಗಳ ಕುರಿತು ಪ್ರಶ್ನಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬೆಳಕು ಚೆಲ್ಲುತ್ತಿದ್ದ ವಕೀಲೆ ಸಂಗೀತ ಇವರಿಗೆ ನೀನು ಮೂಡಿಗೆರೆಗೆ ಬಾ ಚಪ್ಪಲಿಯಲ್ಲಿ ಹೊಡೆಯುವೆ ಕಲ್ಲಿನಿಂದ ಹೊಡೆಸುವೆ ಎಂಬ ಕೊಲೆಬೆದರಿಕೆ ಹಾಕಿದ್ದು ಈಗಾಗಲೇ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರು ಪೊಲೀಸ್ ಇಲಾಖೆ ಕಾಂಗ್ರೆಸ್ ನ ಕಚೇರಿಯಂತೆ ವರ್ತಿಸುತ್ತಿದ್ದು ಪ್ರಕರಣ ಕಾಗ್ರೆಸ್ ಸರ್ಕಾರದ ಒತ್ತಡದಿಂದ ಪ್ರಕರಣ ದಾಖಲಿಸದಿರುವುದು ಕಂಡುಬಂದಿದ್ದು ಚಂದ್ರು ಒಡೆಯರ್ ಬಂಧನ ಮಾಡದಿದ್ದಲ್ಲಿ ಪಕ್ಷದ ವತಿಯಿಂದ ಬೃಹತ್ ಹೋರಾಟವನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ.
ಈ ಗೂಂಡಾ ವ್ಯಕ್ತಿ ಶಾಸಕರ ಆಪ್ತ ಎಂದು ಹೇಳಿಕೊಂಡಿದ್ದಾನೆ ಈತ ಮೂಡಿಗೆರೆ ಸಾರ್ವಜನಿಕ ಆಸ್ಪತ್ರೆಯ ಸ್ಥಾಯಿ ಸಮಿತಿಯಲ್ಲಿ ಸದಸ್ಯ ಆಗಿರುತ್ತಾನೆ. ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ ಹೇರಿಗೆ ವಾರ್ಡ್ ಬಾಗಿಲು ಹಾಕಿ ಒಂದು ವರ್ಷವಾಗಿದೆ. ಇತಿಹಾಸದಲ್ಲಿ ಮೂಡಿಗೆರೆ ಆಸ್ಪತ್ರೆ ಈ ಅವಸ್ಥೆ ಕಂಡಿರಲಿಲ್ಲ. ಚಿಕ್ಕ ಪುಟ್ಟ ಸಮಸ್ಯೆಗಳಿಗೂ ಚಿಕ್ಕಮಗಳೂರಿಗೆ ಹೋಗಿ ಎಂದು ಕಳಿಸಲಾಗುತ್ತಿದೆ ಆದರೆ ಇದನ್ನು ಸರಿಪಡಿಸುವ ಬದಲು ಸಮಾಜ ಸೇವಕರು ಎಂಬ ಸೋಗಿನಲ್ಲಿ ಅಲ್ಲಿನ ವೈದ್ಯರು. ದಾದಿಯರು ನೌಕರರು ಮೇಲೆ ಬ್ಲಾಕ್ ಮೇಲ್ ಮಾಡುತ್ತಿರುವ ಆರೋಪ ಕೂಡ ಇದೆ. ಅಲ್ಲದೆ ಮೂಡಿಗೆರೆ ಪೋಲೀಸ್ ಠಾಣೆಯಲ್ಲಿ ಹಳೆ ರೌಡಿ ಶೀಟರ್ ಕೂಡ ಅಗಿರುತ್ತಾನೆ. ಶಾಸಕರು ಇತ್ತ ಗಮನ ಹರಿಸುತ್ತಿಲ್ಲವೇ ಇಡೀ ಜಿಲ್ಲೆಯಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡಿದರೆ. ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ಗೂಂಡಾ ಪಡೆ ಹಲ್ಲೆ ನಡೆಸುವ ಹಂತಕ್ಕೆ ತಲುಪಿರುವುದು. ಖಂಡನೀಯ ಎಂದರು.
ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ ಮಾತನಾಡಿ, ದೂರು ನೀಡಿ ಎರಡು ದಿನವಾದರೂ ಸ್ಪಂದಿಸಿಲ್ಲ ಸಂಗೀತ ಶಾಸಕರ ರೀತಿಯೆ ಒಬ್ಬ ಮಹಿಳೆಯಲ್ಲವೆ. ಇವರ ಮೇಲೆ ಈ ರೀತಿಯ ದಬ್ಬಾಳಿಕೆ ಸರಿಯೆ. ಈ ಹಿಂದೆ ಇದೆ ತಾಲೂಕಿನ ಶಾಸಕರಿಗೆ ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ ಹಾಕಿದ್ದಾರೆ ಎಂದು. ಅನೇಕರನ್ನ ಪೋಲಿಸರು ಬಂಧಿಸಿರಲಿಲ್ಲವೇ. ಅವರಿಗೊಂದು ನ್ಯಾಯ ಬಿಜೆಪಿ ಕಾರ್ಯಕರ್ತರಿಗೆ ಒಂದು ನ್ಯಾಯವೇ. ರಾಜ್ಯದ ಕಾನೂನು ವ್ಯವಸ್ಥೆಗೆ ಹಿಡಿದ ಕ್ಯೆಗನ್ಮಡಿಯಾಗಿದ್ದು. ಇಲ್ಲಿನ ಪೊಲೀಸ್ ಇಲಾಖೆಯ ಕರ್ತವ್ಯಗಳು ಏನು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ ಇನ್ನೆರಡು ದಿವಸದಲ್ಲಿ ಈತನನ್ನು ಬಂಧಿಸದಿದ್ದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹೋರಾಟ ಹಮ್ಮಿಕೊಂಡಿದ್ದು. ಅಂದು ತಾಕತ್ತಿದ್ದರೆ ಈ ವ್ಯಕ್ತಿ ನಮ್ಮ ಕಾರ್ಯಕರ್ತೆಯ ಮೇಲೆ ಚಪ್ಪಲಿಯಲ್ಲಿ ಹೊಡೆದು. ಕಲ್ಲು ತೂರಾಟ ನಡೆಸಲಿ ಎಂದು ಸವಾಲು ಎಸೆದರು.
