ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ ಹರಿಪ್ರಸಾದ್ ಅವರು ಚಾರ್ಜ್ ತೆಗೆದುಕೊಂಡ ಮೇಲೆ ಎಲ್ಲಾ ಜಿಲ್ಲಾಧ್ಯಕ್ಷರ ಬದಲಾವಣೆಗೆ ಮನಸ್ಸು ಮಾಡಿದ್ದಾರೆ. 2028ಕ್ಕೆ ಕಾಂಗ್ರೆಸ್ ಪಕ್ಷವನ್ನ ಮರಳಿ ಅಧಿಕಾರಕ್ಕೆ ತರಬೇಕು ಅನ್ನೋ ಉದ್ದೇಶದಿಂದ ಜಿಲ್ಲಾ ಮಟ್ಟದಲ್ಲಿ ಸಕ್ರಿಯವಾಗಿರುವ, ಕ್ರೀಯಾಶೀಲರಾಗಿರುವ, ಎಲ್ಲರನ್ನೂ ಒಂದುಗೂಡಿಸಿಕೊಂಡು ಕರೆದುಕೊಂಡು ಹೋಗುವ, ಉತ್ತಮ ನಾಯಕತ್ವ ಹೊಂದಿರುವ ನಾಯಕನಿಗೆ ಜಿಲ್ಲಾಧ್ಯಕ್ಷ ಪಟ್ಟದ ಜವಾಬ್ದಾರಿಯನ್ನ ಹೊರಿಸಬೇಕು ಅಂತಾ ಈಗಾಗಲೇ ಕಾರ್ಯತಂತ್ರ ಆರಂಭಿಸಿದ್ದಾರೆ.
ಹೀಗಿರುವಾಗ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಅದೊಂದು ಹೆಸರು ದೊಡ್ಡ ಮಟ್ಟದಲ್ಲಿ ಚಾಲ್ತಿಯಲ್ಲಿದೆ, ಆ ಹೆಸರು ಬೇರ್ಯಾರೂ ಅಲ್ಲ, ಕಾಂಗ್ರೆಸ್ ಕಟ್ಟಾಳು, ಸಾಮಾಜಿಕ-ಜನಪರ ಹೋರಾಟಗಾರ, ಖ್ಯಾತ ವಕೀಲ ಸುಧೀರ್ ಕುಮಾರ್ ಮುರೊಳ್ಳಿ.. ಅಷ್ಟಕ್ಕೂ ಸುಧೀರ್ ಕುಮಾರ್ ಮುರೊಳ್ಳಿ ಅವರೇ ಚಿಕ್ಕಮಗಳೂರು ಕಾಂಗ್ರೆಸ್ನ ಕ್ಯಾಪ್ಟನ್ ಆಗಲಿ ಅಂತಾ ಯಾಕೆ ಬಯುಸತ್ತಾ ಇದ್ದಾರೆ ಅನ್ನೋದಕ್ಕೆ ಕೆಳಕಂಡ ಒಂದಷ್ಟು ವಿಚಾರಗಳೂ ಕೂಡ ಕಾರಣವಾಗಿದೆ.
ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಗಾದಿಗೆ ಸುಧೀರ್ ಕುಮಾರ್ ಮುರೊಳ್ಳಿ ಸೂಕ್ತ ಈಗಾಗಲೇ ರಾಜ್ಯ ಪ್ರವಾಸ ಮಾಡುತ್ತ ಪಕ್ಷ ಸಂಘಟನೆ ಮಾಡುತ್ತಿರುವ ಸುಧೀರ್ಕುಮಾರ್ ಮುರೊಳ್ಳಿ ಮಾತಿಗೆ ನಿಂತರೆ ಎಂಥವರೂ ಮರಳಾಗುತ್ತಾರೆ. ನಾಲಿಗೆಯಲ್ಲಿ ಸರಸ್ವತಿ ಸರಾಗವಾಗಿ ಹರಿದಾಡುತ್ತಾಳೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶದ ಸಮಸ್ಯೆ, ಪರಿಹಾರಗಳ ಬಗ್ಗೆ ಇವರ ಜ್ಞಾನಭಂಡಾರದಲ್ಲಿವೆ.
ಇವರು ಸಂಘಟನಾ ಚತುರರು. ತಮ್ಮ ಕ್ಷೇತ್ರದಿಂದ ಹಿಡಿದು ದೇಶದವರೆಗೂ ಯಾವುದೇ ಸಂಘಟನೆಯನ್ನು ಮಾಡುವಂತಹ ಛಾತಿಯನ್ನು ಬೆಳೆಸಿಕೊಂಡಿರುವವರು. ಯಾವುದೇ ಕೆಲಸವನ್ನು ಮಾಡಬೇಕೆಂದುಕೊಂಡರೆ ಅದಕ್ಕೊಂದು ತಾರ್ಕಿಕ ಅಂತ್ಯ ಕಾಣುವವರೆಗೂ ಬಿಡುವುದಿಲ್ಲ.
ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಭಾಗದಲ್ಲಿ ಸುಧೀರ್ಕುಮಾರ್ ಮುರೊಳ್ಳಿ ಅವರ ಹೆಸರು ಕೇಳದವರಿಲ್ಲ. 2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಇಡೀ ದೇಶದಲ್ಲೇ ಕಾಂಗ್ರೆಸ್ ಅಧಃಪತನದತ್ತ ಸಾಗಿತ್ತು. ಕೇವಲ 45 ಸ್ಥಾನಗಳನ್ನು ಗಳಿಸಲು ಮಾತ್ರ ಸಾಧ್ಯವಾಯಿತು.
ಮೂಲ ನೆಲೆಯಾದ ಮಲೆನಾಡಿನಲ್ಲೂ ಕಾಂಗ್ರೆಸ್ ತನ್ನ ನೆಲೆ ಕಳೆದುಕೊಂಡಿತ್ತು. 2018ರ ವಿಧಾನಸಭೆ ಚುನಾವಣೆಯಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತಾದರೂ ಮುರೊಳ್ಳಿ ಅವರು ಕಾಂಗ್ರೆಸ್ ಕಟ್ಟುವ ಪ್ರಯತ್ನವನ್ನು ಮಾಡಿದರು.
ತನ್ನದೇ ಆದ ಯುವಪಡೆಯನ್ನು ರಚಿಸಿ ಹಳ್ಳಿ ಹಳ್ಳಿ ಗೆ ತೆರಳಿ ಜನರ ಮನ ಮನಕ್ಕೆ ಕಾಂಗ್ರೆಸ್ನ್ನು ತಲುಪಿಸುವ ಕೆಲಸವನ್ನು ಮಾಡಿದರು.
ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ತಮ್ಮ ಪಾಲಿನ ಕೆಲಸವನ್ನು ಅಚ್ಚುಕಟ್ಟಾಗಿ ನೆರವೇರಿಸಿದರು. ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬಾವುಟವನ್ನು ಹಾರಿಸಲು ಕಾರಣೀಭೂತರಾದರು. ಎಲ್ಲರ ಮನೆಮಾತಾದರು.
ರಾಜ್ಯದಲ್ಲಿ ಪ್ರಚಾರ ಸಮಿತಿಯಾ ಜವಾಬ್ದಾರಿ ತೆಗೆದುಕೊಂಡು ರಾಜ್ಯದ ಎಲ್ಲಾ ಕಡೆ ಪ್ರವಾಸ ಮಾಡಿ ಕಾರ್ಯಕರ್ತರ ಪ್ರೀತಿಗೆ ಪಾತ್ರರಾಗಿದ್ದರೆ
ಬಿಜೆಪಿಯವರು ಮಾಡುವ ಅಪಪ್ರಚಾರಗಳು, ಕೋಮುವಾದ ತಂತ್ರ-ಕುತಂತ್ರಗಳನ್ನು ಬಹಿರಂಗಗೊಳಿಸಿದರು. ಯಾವುದಕ್ಕೂ ಜಗ್ಗದೆ, ಕುಗ್ಗದೆ ಮುನ್ನಡೆದರು. ಅಮಾಯಕರು, ಬಡವರು, ದಲಿತರಿಗೆ ದನಿಯಾದರು.
ಅವರೊಬ್ಬ ಬುದ್ಧಿವಂತ ರಾಜಕಾರಣಿ. ಚತುರತೆ ಇರುವ ಯುವನಾಯಕ ಎಂದು ಮನೆ ಮಾತಾದರು. ಇವರ ಮೇಲೆ ಎಲ್ಲರೂ ವಿಶ್ವಾಸವಿಟ್ಟರು. ಇವರನ್ನು ನಂಬಿದರೆ ನಮಗೆ ಅನುಕೂಲವಾಗುತ್ತದೆ ಎಂಬ ನಂಬಿಕೆ ಈ ಭಾಗದ ಜನರಲ್ಲಿ ಉಂಟಾಗುವಂತಾಯಿತು. ಆ ರೀತಿ ಕೆಲಸಗಳನ್ನು ಸುಧೀರ್ಕುಮಾರ್ ಮುರೊಳ್ಳಿ ಮಾಡಿದರು, ಇಲ್ಲಿನ ಜನಪ್ರತಿನಿಧಿಗಳೊಂದಿಗೆ ಮಾಡಿಸುತ್ತಿದ್ದಾರೆ. ಅಲ್ಲದೆ, ಜನವಿರೋಧಿ ಕೆಲಸಗಳನ್ನು ಮಾಡುವ ಪ್ರತಿಪಕ್ಷಗಳಿಗೆ ಪ್ರತಿ ಕ್ಷಣವೂ ಬಿಸಿ ಮುಟ್ಟಿಸುತ್ತಿದ್ದಾರೆ.
ಕಳೆದ ಬಾರಿ ಸಹ ರಾಜ್ಯದ ಹಿರಿಯ ನಾಯಕರೊಬ್ಬರು ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರಕ್ಕೆ ಸುಧೀರ್ ಹೆಸರು ಸೂಚಿಸಿದ್ದರು ಎನ್ನಲಾಗಿದೆ , ಕೊನೆಯ ಹಂತದಲ್ಲಿ ಜಯಪ್ರಕಾಶ್ ಹೆಗ್ಡೆಯವರಿಗೆ ಕೊಡಲಾಯಿತು
ಯುವಕರ ಕಣ್ಮಣಿ, ಮಾತಿನ ಚತುರ, ಖ್ಯಾತ ವಕೀಲ ಸುಧೀರ್ಕುಮಾರ್ ಮುರೊಳ್ಳಿ ಅವರನ್ನು ಏಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಮಾಡಬಾರದು ಎಂದು ಸ್ಥಳೀಯರು ಹಾಗೂ ರಾಜ್ಯ ನಾಯಕರು ಯೋಚಿಸಿದ್ದಾರೆ ಎಂದು ತಿಳಿದು ಬಂದಿದೆ ಸದ್ಯದ ಪರಿಸ್ಥಿಯಲ್ಲಿ ಮುರೊಳ್ಳಿ ಗೆ ಕೊಟ್ಟರೆ ಒಳ್ಳೆಯದು ಎಂದು ಕಾರ್ಯಕರ್ತರ ಅಭಿಪ್ರಾಯವಾಗಿದೆ ರಾಜ್ಯ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಸುಧೀರ್ ಮುರೊಳ್ಳಿಯ ಸಂಘಟನೆ ಬಗ್ಗೆ ವಿಶ್ವಾಸವಿಟ್ಟಿದ್ದಾರೆ
ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿಯವರು ಯುವಕರಿಗೆ ಆದ್ಯತೆ ನೀಡಬೇಕೆಂಬ ಒಲವು ಹೊಂದಿದ್ದಾರೆ. ಅದರಲ್ಲೂ ಸಂಘಟನಾ ಚತುರರೂ, ಪಕ್ಷದ ಬಗ್ಗೆ ಕಾಳಜಿ ಹೊಂದಿರುವವರು, ಶಿಸ್ತು-ಸಂಯಮಕ್ಕೆ ಹೆಸರಾದವರು ಸಿಕ್ಕಿದರೆ ಅವರಿಗೆ ಆದ್ಯತೆ ನೀಡುತ್ತಾರೆ. ಪಕ್ಷವನ್ನು ತಳಮಟ್ಟದಿಂದ ಕಟ್ಟುವ ಚತುರತೆ ಹೊಂದಿರುವ ಮುರೊಳ್ಳಿ ಸಾಹಿತ್ಯ, ಕ್ಷೇತ್ರದಲ್ಲೂ ಅಪಾರ ಆಸಕ್ತಿ ಹೊಂದಿದ್ದಾರೆ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿಯೂ ಅಪಾರ ಅನುಭವ, ಕಳಕಳಿ ಹೊಂದಿದ್ದಾರೆ.
ಕಾನೂನು ಪದವಿ ಜೊತೆಗೆ ಸಾರ್ವಜನಿಕ ಆಡಳಿತವನ್ನು ಓದಿಕೊಂಡಿದ್ದಾರೆ. ಮಲೆನಾಡು ಕರಾವಳಿ ಭಾಗದಲ್ಲಿ ಪಕ್ಷ ಸಂಘಟನೆಗೆ ಒಳ್ಳೆಯದು ಎಂಬುದು ಇಲ್ಲಿನ ಕಾರ್ಯಕರ್ತರ, ಕಾಂಗ್ರೆಸ್ ಜನಪ್ರತಿನಿಧಿಗಳ ಅಭಿಪ್ರಾಯವಾಗಿದೆ.
