Sunday, July 26, 2026
Homeಜಿಲ್ಲಾಸುದ್ದಿಜಾನಪದದಿಂದ ಭಾರತೀಯ ಸಂಸ್ಕೃತಿ ಜೀವಂತ: ಸಾಹಿತಿ ಹಳೆಕೋಟೆ ರಮೇಶ್ ಅಭಿಮತ

ಜಾನಪದದಿಂದ ಭಾರತೀಯ ಸಂಸ್ಕೃತಿ ಜೀವಂತ: ಸಾಹಿತಿ ಹಳೆಕೋಟೆ ರಮೇಶ್ ಅಭಿಮತ

Telegram Group
Join Now

ಕೊಟ್ಟಿಗೆಹಾರ: ಜಾನಪದದಿಂದ ಭಾರತೀಯ ಸಂಸ್ಕೃತಿ ಜೀವಂತವಾಗಿದ್ದು ಜನಪದ ಸಮಾಜದ ಅಂಕುಡೊಂಕು ಗಳನ್ನು ತಿದ್ದುವುದಲ್ಲದೆ ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸಾಹಿತಿ ಹಳೇಕೋಟೆ ರಮೇಶ್ ಹೇಳಿದರು.

ಮೂಡಿಗೆರೆ ತಾಲ್ಲೂಕು ಕರ್ನಾಟಕ ಜಾನಪದ ಪರಿಷತ್ತು ಮತ್ತು ಚಿಕ್ಕಮಗಳೂರು ಜಿಲ್ಲಾ ಘಟಕ ವತಿಯಿಂದ ಹೊರಟ್ಟಿ ಗ್ರಾಮದ ಕನ್ನಡ ಹೋರಾಟಗಾರರಾದ ಹೊರಟ್ಟಿ ರಘು ಅವರ ಮನೆಯಂಗಳದಲ್ಲಿ ನಡೆದ ಜಾನಪದ ಜಗುಲಿ-ಮನೆಯಂಗಳದಿ ಜಾನಪದರ ಸಂಗೀತ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಭ್ರಮಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೃಷಿಕ ವರ್ಗ ಮತ್ತು ಮಹಿಳೆಯರಿಂದ ಜಾನಪದ ಕಲೆ, ಸಾಹಿತ್ಯ, ಸಂಗೀತ ಸಮೃದ್ದವಾಗಿ ಬೆಳೆದು ಬಂದಿದೆ. ಇಂದಿನ ಯುವಕ ಯುವತಿಯರು ಅವುಗಳನ್ನು ಪೋಷಿಸಿ ಮುಂದಿನ ತಲೆಮಾರಿಗೆ ತಲುಪಿಸುವ ಕಾರ್ಯ ಮಾಡಬೇಕಿದೆ ಎಂದರು.

ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಜಿ ಬಿ ಸುರೇಶ್ ಮಾತನಾಡಿ ಭಾರತೀಯ ಕಲೆ ಸಾಹಿತ್ಯ ಸಂಗೀತ ಸಂಸ್ಕೃತಿಗೆ ಜಾನಪದ ಸಂಸ್ಕೃತಿಯ ಕೊಡುಗೆ ಅಪಾರ. ಎಲ್ಲಾ ರೀತಿಯ ಕಲೆಗಳಿಗೆ ಜಾನಪದವೇ ತಾಯಿ ಬೇರು. ಜಾನಪದಕ್ಕೆ ನೈತಿಕ ಮತ್ತು ಜಾತ್ಯತೀತ ಮನೋಭಾವನೆಯನ್ನು ಬೆಳೆಸುವ ಶಕ್ತಿ ಇದೆ. ಇದು ಮನಸ್ಸಿಗೆ ಶಾಂತಿ ಮತ್ತು ಮನರಂಜನೆಯನ್ನು ನೀಡುವುದಲ್ಲದೆ ಮನುಷ್ಯನಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸುತ್ತದೆ ಎಂದರು.

ಪತ್ರಕರ್ತರಾದ ಮಗ್ಗಲಮಕ್ಕಿ ಗಣೇಶ್ ಮಾತನಾಡಿ, ಕನ್ನಡ ಮತ್ತು ಜಾನಪದ ಸಾಹಿತ್ಯ ಕ್ಷೇತ್ರಕ್ಕೆ ಕನ್ನಡಪರ ಹೋರಾಟಗಾರ ಹೊರಟ್ಟಿ ರಘುರವರ ಸೇವೆ ಅಪಾರ. ಕನ್ನಡವನ್ನು ಜೀವಂತವಾಗಿಡಲು ಅವರ ವಾಹನಗಳಿಗೆ ಕನ್ನಡ ಬಾವುಟವನ್ನು ಕಟ್ಟಿ ಎಲ್ಲೆಡೆ ಸಂಚರಿಸುವ ಮೂಲಕ ಕನ್ನಡಾಭಿಮಾನವನ್ನು ಪಸರಿಸುತ್ತಿದ್ದಾರೆ. ನಶಿಸಿ ಹೋಗುತ್ತಿರುವ ಜಾನಪದ ಕಲೆ ಸಾಹಿತ್ಯ ಸಂಗೀತವನ್ನು ತಳಮಟ್ಟದಲ್ಲಿ ಸಂಘಟಿಸಲು ಸಕ್ರಿಯವಾಗಿ ಕರ್ನಾಟಕ ಜಾನಪದ ಪರಿಷತ್ತು ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದರು.

ಕನ್ನಡ ಪರ ಹೋರಾಟಗಾರ ಹೊರಟ್ಟಿ ರಘು ಮಾತನಾಡಿ ಇಂದಿನ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಜಾನಪದ ಕಲೆ ಸಾಹಿತ್ಯ ಸಂಗೀತ ಜೀವಂತವಾಗಿ ಉಳಿದಿದೆ. ಅದನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯ ಬೇಕಾದರೆ ಪ್ರತಿ ಕುಟುಂಬದ ಹಿರಿಯರು ಅವರ ಮಕ್ಕಳಿಗೆ ಅದರ ಜ್ಞಾನ ಮತ್ತು ಉಪಯೋಗವನ್ನು ಹೇಳಿ ಕೊಡಬೇಕಾಗಿದೆ ಎಂದರು.

ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ನವೀನ್, ಸಾಹಿತಿ ಎಂ.ಎಸ್ ನಾಗರಾಜ್, ಕರ್ನಾಟಕ ಜಾನಪದ ಪರಿಷತ್ತು ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಕುನ್ನಳ್ಳಿ ರವಿ, ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣಗೌಡ, ಉಪಾಧ್ಯಕ್ಷ ಚಂದ್ರೇಗೌಡ, ಗೌರವಾಧ್ಯಕ್ಷ ಸುಬ್ರಹ್ಮಣ್ಯ, ಮೂಡಿಗೆರೆ ತಾಲೂಕು ಕಸಾಪ ಅಧ್ಯಕ್ಷ ಲಕ್ಷ್ಮಣ್ ಗೌಡ ಕಸಾಪ ಮಾಜಿ ಅಧ್ಯಕ್ಷ ಶಾಂತಕುಮಾರ್, ದೀಪಿಕಾ, ಕೋಮರಾಜು, ಚಂದ್ರೇಶ, ಲೋಕೇಶ್ ಮುಂತಾದವರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments