ಮೂಡಿಗೆರೆ: ತ್ರಿಪುರ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ -ಉಪಾಧ್ಯಕ್ಷರ ನೇಮಕ ಪ್ರಕ್ರಿಯೆ ಶುಕ್ರವಾರ ನಡೆಯಿತು. ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಂಪತ್ ಪಟ್ಟದ್ದೂರು ಹಾಗೂ ಉಪಾಧ್ಯಕ್ಷರಾಗಿ ರುದ್ರಯ್ಯ ಅವರು ಆಯ್ಕೆಯಾದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಸಂಪತ್ ಪಟ್ಟದ್ದೂರು ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ರಾಜಕಾರಿಣಿಗಳು ಸದಾ ತಮ್ಮ ಕ್ಷೇತ್ರಗಳ ಅಭಿವೃದ್ಧಿ ಕಡೆ ಮಾತ್ರ ಗಮನ ಹರಿಸಬೇಕು ಎಂದರು
ಚುನಾವಣೆಯಲ್ಲಿ ತಾಯಿಯ ಸೋಲು ರಾಜಕೀಯ ಕ್ಷೇತ್ರದಲ್ಲಿ ಮತ್ತಷ್ಟು ಬಲಾಡ್ಯನಾಗಿ ಬೆಳೆಯಲು ಪ್ರೇರಣೆ ಎಂದು ಅವರು ತಿಳಿಸಿದರು. ರೈತ ಕುಟುಂಬದ ಮಗನಾಗಿ ಬಂದ ನಾನು ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ಕಡಿದಾಳು ಮತಗಟ್ಟೆ ಸ್ಪರ್ದಿಸಿ ಸದಸ್ಯನ್ನಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೂ. ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನನಗೆ ಅಷ್ಟೇನೂ ಅನುಭವ ಇಲ್ಲದಿದ್ದರೂ ತಾವೆಲ್ಲರೂ ಸೇರಿ ಈ ಜವಾಬ್ದಾರಿ ಸ್ಥಾನ ನೀಡಿದ್ದು ಹಿರಿಯರು, ನಿರ್ದೇಶಕರ ಸದಸ್ಯರ ಮಾರ್ಗದರ್ಶನ ಪಡೆದು ರೈತರ ಪರವಾಗಿ ಕೆಲಸ ಮಾಡುವುದಾಗಿ ತಿಳಿಸಿದರು
ಇದೆ ವೇಳೆ ನೂತನ ಅಧ್ಯಕ್ಷ ಉಪಾಧ್ಯಕ್ಷ ರಿಗೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಜೆಡಿಎಸ್ ಹಿರಿಯ ಮುಖಂಡ ಗಬ್ಬಳ್ಳಿ ಚಂದ್ರೆಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಮಾಜಿ ಸಚಿವ ಬಿ. ಬಿ. ನಿಂಗಯ್ಯ, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಪಟ್ಟದ್ದೂರು ಪುಟ್ಟಣ್ಣ, ಕೆಂಪೇಗೌಡ ಒಕ್ಕಲಿಗ ವೇದಿಕೆ ಅಧ್ಯಕ್ಷ ಬ್ರಿಜೇಶ್ ಕಡಿದಾಳು, ಪತ್ರಕರ್ತರಾದ ರಾಘವೇಂದ್ರ ಕೆಸವಳಲು, ಪುನೀತ್ ಕಡಿದಾಳು, ಪ್ರಕಾಶ್ ಬಕ್ಕಿ, ಕಾಫಿ ಬೆಳೆಗಾರರಾದ ಕಾರ್ತಿಕ್ ಪಟ್ಟದ್ದೂರು, ಉದ್ಯಮಿ ಪುನೀತ್ ಪಟ್ಟದ್ದೂರು ಸೇರಿದಂತೆ ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ಕೃಷಿ ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿ ಶುಭಾಶಯ ತಿಳಿಸಿದರು
ಈ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಚನ್ನಕೇಶವ ಹೆಸಗೋಡು, ಅರುಣ್ ಕೊಟ್ರುಕೆರೆ, ಸುಧೆವ್ ಗುತ್ತಿ,ರಾಧಾ ಲಕ್ಷ್ಮಣ ಗೌಡ ತ್ರಿಪುರ, ಮಮತಾ ರಾಮೇಗೌಡ ಹೆಸಗೋಡು, ಯದುವೀರ್ ಗುತ್ತಿ, ಸುನೀಲ್ ಹೆಸಗೋಡು, ಕಿರಣ್ ಹಳ್ಳಿ, ಪರಮೇಶ್ ಗುತ್ತಿ, ಮಾದು ಗುತ್ತಿಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು
ವರದಿ:ಪುನೀತ್ ಕಡಿದಾಳು
9483811948
