ಬಾಳೆಹೊನ್ನೂರು: ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಉಂಟಾದ ಕಲಹದ ಬಳಿಕ ವ್ಯಕ್ತಿಯೊಬ್ಬರು ಮಹಿಳೆಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ.
ಮೇಗರಮಕ್ಕಿ ಗ್ರಾಮದ ಕಸ್ತೂರಿ ಹಡ್ಲುವಿನ ವಾಸಿ ಅರುಣ್ ಕುಮಾರ್( 35) ಹಾಗೂ ಕೊಳಲೆ ಗ್ರಾಮದ ವಿದ್ಯಾ ನಡುವೆ ಕಲಹವಾಗಿದ್ದು ಇದರಿಂದ ಕೋಪಗೊಂಡು ವಿದ್ಯಾಳ ಮನೆಯಲ್ಲೆ ಅರುಣ್ ನೇಣಿಗೆ ಶರಣಾಗಿದ್ದಾನೆ. ಈ ಮೊದಲೇ ಇಬ್ಬರಿಗೂ ಬೇರೆ ಬೇರೆ ವಿವಾಹವಾಗಿತ್ತು.
ಪ್ರಕರಣ ಸಂಬಂಧ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್ಐ ಅಂಬರೀಶ್ ನೇತೃತ್ವದಲ್ಲಿ ತನಿಖೆ ನಡೆಸುತ್ತಿದ್ದಾರೆ.
