Wednesday, August 12, 2026
Homeಇತರೆಬಿಜೆಪಿ ಜೆಡಿಎಸ್‌ನ ಮುಗಿಸಿಬಿಡುತ್ತೆ ನೋಡ್ತಿರಿ: ಡಾ.ಮಂಜುನಾಥ್‌ ಗೆದ್ರೆ ತಾನೇ ಮಂತ್ರಿಯಾಗೋದು – ಡಿ.ಕೆ.ಶಿವಕುಮಾರ್‌

ಬಿಜೆಪಿ ಜೆಡಿಎಸ್‌ನ ಮುಗಿಸಿಬಿಡುತ್ತೆ ನೋಡ್ತಿರಿ: ಡಾ.ಮಂಜುನಾಥ್‌ ಗೆದ್ರೆ ತಾನೇ ಮಂತ್ರಿಯಾಗೋದು – ಡಿ.ಕೆ.ಶಿವಕುಮಾರ್‌

Telegram Group
Join Now

ರಾಮನಗರ: ನೋಡ್ತಾ ಇರಿ ಬಿಜೆಪಿ ಜೆಡಿಎಸ್‌ ಪಕ್ಷವನ್ನು ಹೇಗೆ ಮುಗಿಸುತ್ತೆ ಅಂತ. ಬಿಜೆಪಿ ಜೆಡಿಎಸ್‌ ನುಂಗಿಬಿಡೋದು ಖಂಡಿತ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ರು.

ಅವರು ಇಂದು ಡಿ.ಕೆ.ಸುರೇಶ್‌ ಪರ ರಾಮನಗರದಲ್ಲಿ ಪ್ರಚಾರ ಮಾಡುವ ವೇಳೆ ಮಾಧ್ಯಮದೊಂದಿಗೆ ಮಾತನಾಡಿ ಬಿಜೆಪಿ ಹಾಗೂ ಜೆಡಿಎಸ್‌ ವಿರುದ್ಧ ವಾಗ್ದಾಳಿ ನಡೆಸಿದ್ರು. ಕುಮಾರಸ್ವಾಮಿ ತಮ್ಮ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ. ಆದ್ರೆ ಬಿಜೆಪಿ ಜೆಡಿಎಸ್‌ ಪಕ್ಷವನ್ನು ಮುಗಿಸಿಬಿಡುತ್ತೆ ನೋಡಿ ಎಂದರು. ನನಗೆ ದೇವೇಗೌಡರ ಕುಟುಂಬದ ಬಗ್ಗೆ ಯಾವುದೇ ದ್ವೇಷ ಇಲ್ಲ. ಹಾಗೇನಾದ್ರೂ ಇದ್ದಿದ್ರೆ ಕುಮಾರಸ್ವಾಮಿಯನ್ನು ಸಿಎಂ ಮಾಡ್ತಾನೆ ಇರಲಿಲ್ಲ ಎಂದರು.

ಇನ್ನು ಡಾ. ಮಂಜುನಾಥ್‌ ಕೇಂದ್ರದಲ್ಲಿ ಆರೋಗ್ಯ ಸಚಿವರಾಗ್ತಾರೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಗೆದ್ರೆ ತಾನೇ ಮಂತ್ರಿ ಆಗೋದು ಎಂದು ವ್ಯಂಗ್ಯವಾಡಿದ್ರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments