Friday, September 18, 2026
Homeಜಿಲ್ಲಾಸುದ್ದಿBelur: ನಡತೆ ಮೇಲೆ ಅನುಮಾನ : ಪತ್ನಿ ಜೀವ ತೆಗೆದು ತಾನು ನೇಣು ಬಿಗಿದುಕೊಂಡ ಪತಿ!

Belur: ನಡತೆ ಮೇಲೆ ಅನುಮಾನ : ಪತ್ನಿ ಜೀವ ತೆಗೆದು ತಾನು ನೇಣು ಬಿಗಿದುಕೊಂಡ ಪತಿ!

Telegram Group
Join Now

ಬೇಲೂರು :ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕೆಸಗೋಡು ಗ್ರಾಮದಲ್ಲಿ ಪತ್ನಿಯ ನಡತೆಯ ಮೇಲೆ ಅನುಮಾನ ವ್ಯಕ್ತಪಡಿಸಿದ ಪತಿಯೊಬ್ಬ, ಪತ್ನಿಯನ್ನು ಕೊಲೆಗೈದು ಬಳಿಕ ತಾನೂ ನೇಣಿಗೆ ಶರಣಾಗಿರುವ ಭೀಕರ ಘಟನೆ ನಡೆದಿದೆ.

ಮೃತರನ್ನು ರಘು (41) ಹಾಗೂ ಗಗನ (38) ಎಂದು ಗುರುತಿಸಲಾಗಿದೆ. 13 ವರ್ಷಗಳ ಹಿಂದೆ ವಿವಾಹವಾಗಿದ್ದ ಈ ದಂಪತಿಗೆ 12 ಮತ್ತು 6 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಜೀವನೋಪಾಯಕ್ಕಾಗಿ ಚಿಕ್ಕಮಗಳೂರಿನಲ್ಲಿ ಬೇಕರಿ ನಡೆಸುತ್ತಿದ್ದ ದಂಪತಿ, ಶುಕ್ರವಾರ ಕಾರಿನಲ್ಲಿ ಕೆಸಗೋಡು ಗ್ರಾಮಕ್ಕೆ ಬಂದಿದ್ದರು.

ಪತ್ನಿಯನ್ನು ಕಾರಿನಲ್ಲೇ ಉಸಿರುಗಟ್ಟಿಸಿ ಕೊಲೆ ಮಾಡಿ, ಶವವನ್ನು ಯಗಚಿ ನಾಲೆಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಬಳಿಕ ಗ್ರಾಮಕ್ಕೆ ಬಂದ ರಘು, ಸಂಬಂಧಿಕರಿಗೆ ವಿಡಿಯೋ ಕಾಲ್ ಮೂಲಕ ಪತ್ನಿಯನ್ನು ಕೊಲೆ ಮಾಡಿರುವುದಾಗಿ ತಿಳಿಸಿದ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಆತ್ಮಹತ್ಯೆಗೆ ಮುನ್ನ ಮೊಬೈಲ್‌ನಲ್ಲಿ ವಿಡಿಯೋ ದಾಖಲಿಸಿರುವ ರಘು, ತನ್ನ ಕೃತ್ಯಕ್ಕೆ ಕಾರಣವೆಂದು ಪತ್ನಿಯ ವಿರುದ್ಧ ಕೆಲವು ಆರೋಪಗಳನ್ನು ಮಾಡಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!