Friday, September 18, 2026
Homeಜಿಲ್ಲಾಸುದ್ದಿ37ನೇ ಸೌತ್ ಝೋನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ದಾಖಲೆ ನಿರ್ಮಿಸಿ ಇತಿಹಾಸ ಸೃಷ್ಟಿಸಿದ ಬಾಳೆಹೊನ್ನೂರಿನ ಸಾಲೀಂ!

37ನೇ ಸೌತ್ ಝೋನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ದಾಖಲೆ ನಿರ್ಮಿಸಿ ಇತಿಹಾಸ ಸೃಷ್ಟಿಸಿದ ಬಾಳೆಹೊನ್ನೂರಿನ ಸಾಲೀಂ!

Telegram Group
Join Now

ಬಾಳೆಹೊನ್ನೂರು:  ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ನಮ್ಮ SJR PU College, Balehonnuruನ ಶ್ರೀ ಸಾಲೀಂ, ಪಾಂಡಿಚೇರಿಯಲ್ಲಿ ನಡೆದ 37ನೇ ಸೌತ್ ಝೋನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಅಂಡರ್-20 ಪುರುಷರ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ.

ಸಾಲೀಂ ಅವರು 64.16 ಮೀಟರ್ ದೂರ ಎಸೆದು 🥇 ಪ್ರಥಮ ಸ್ಥಾನ ಪಡೆದುಕೊಂಡು, ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.

ಈ ಸಾಧನೆಯ ಮೂಲಕ ಅವರು 2003ರಿಂದ ದಾಖಲಾಗಿದ್ದ 62.44 ಮೀಟರ್‌ನ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ ಹಾಗೂ ಹ್ಯಾಮರ್ ಥ್ರೋ ವಿಭಾಗದಲ್ಲಿ ಹೊಸ ಸೌತ್ ಜೋನ್ ದಾಖಲೆದಾರರಾಗಿ ಹೊರಹೊಮ್ಮಿದ್ದಾರೆ.

ಸಾಲೀಂ ಅವರ ಈ ಐತಿಹಾಸಿಕ ಸಾಧನೆ ಕರ್ನಾಟಕ, ಎಸ್.ಜೆ.ಆರ್‌ ಪಿಯು ಕಾಲೇಜು ಬಾಳೆಹೊನ್ನೂರು ಹಾಗೂ ಸಂಪೂರ್ಣ ಮಲೆನಾಡು ಪ್ರದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ.

🏆 64.16 ಮೀಟರ್ | 🥇 ಚಿನ್ನದ ಪದಕ | ಹೊಸ ರಾಷ್ಟ್ರೀಯ ದಾಖಲೆ

ಸಾಲೀಂ ಅವರಿಗೆ ಬಾಳೆಹೊನ್ನೂರು ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು,ಉಪನ್ಯಾಸಕರು ಹಾಗೂ ಸಿಬ್ಬಂಧಿ ವರ್ಗದವರು ಶುಭ ಹಾರೈಸಿದ್ದಾರೆ.

ನಿಮ್ಮ ಸಾಧನೆ ಇನ್ನಷ್ಟು ಎತ್ತರಕ್ಕೆ ಏರಲಿ — ಕರ್ನಾಟಕದ ಕೀರ್ತಿ ಮತ್ತಷ್ಟು ಬೆಳಗಲಿ ಎಂದು ಆಶೀಸೋಣ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!