Friday, September 18, 2026
Homeಕ್ರೈಮ್Chickmagalore: ಅಕ್ರಮವಾಗಿ ಕಡವೆ ಬೇಟೆ: ಮೂವರು ಅರೆಸ್ಟ್!

Chickmagalore: ಅಕ್ರಮವಾಗಿ ಕಡವೆ ಬೇಟೆ: ಮೂವರು ಅರೆಸ್ಟ್!

Telegram Group
Join Now

ಚಿಕ್ಕಮಗಳೂರು: ಲಕ್ಕವಳ್ಳಿ ವಲಯದ ಎಂ.ಸಿ. ಹಳ್ಳಿ ಶಾಖೆಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಡವೆಯನ್ನು ಬೇಟೆ ಮಾಡಿ ಮಾಂಸ ಕತ್ತರಿಸುತ್ತಿರುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಸುಮಾರು 70 ಕೆ.ಜಿ. ಕಡವೆ ಮಾಂಸ, (ತಲೆ, ಕಾಲು ಸಮೇತ), ಒಂದು ನಾಡ ಬಂದೂಕು, ದ್ವಿಚಕ್ರ ವಾಹನ, ಬೇಟೆಯಾಡಲು ಬಳಸಿದ ಕತ್ತಿ, ಚಾಕು, ಹಣೆ ಬ್ಯಾಟರಿ ಮೊದಲಾದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಎಂ.ಸಿ. ಹಳ್ಳಿ ಕ್ವಾಟ್ರಸ್ ನಿವಾಸಿಗಳಾದ ಕಿರಣ್ ಕುಮಾರ್ ಜಿ.ಬಿನ್., ಗೋವಿಂದರಾಜು, ಭದ್ರಾವತಿಯ ಮಣಿಕಂಠ ಡಿ. ಬಂಧಿತರು. ಉಳಿದ ಆರೋಪಿಗಳಾದ ಪ್ರವೀಣ ಪಿ., ಪ್ರಭು, ಚೇತು ವಿಜಯ ತಲೆಮರೆಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಲಕ್ಕವಳ್ಳಿ ಆರ್‌ಎಫ್‌ಒ ಇಂದು ಜಿ.ಎಸ್., ಸಿಬ್ಬಂದಿ ಚನ್ನೇಗೌಡ ಜಿ.ಟಿ., ಮನೋಜ್ ಕೆ., ಸಂತೋಷ್ ಎಂ.ಬಿ., ಬಾಲರಾಜ್, ಪುನೀತ್, ವಿಶ್ವನಾಥ್, ಕು. ಶೋಭಾ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!