ಚಿಕ್ಕಮಗಳೂರು: ಜಿಲ್ಲೆಯ ಐದು ಜನ ಶಾಸಕರಿಗೆ ಮಂತ್ರಿ ಪದವಿ ದೊರೆಯದೆ ಕೊನೆ ಕ್ಷಣದಲ್ಲಿ ಫಿಲ್ಮ್ ನಲ್ಲಿ ಸೈಡ್ ರೀಲ್ ರೀತಿ ವಿಧಾನ ಪರಿಷತ್ ಸದಸ್ಯರಾದ ಗಾಯಿತ್ರಿ ಶಾಂತೇಗೌಡ ಮಂತ್ರಿ ಸ್ಥಾನಕ್ಕೆ ನೇಮಕವಾಗಿದ್ದಾರೆ.
ಮಂತ್ರಿ ಆಗ್ತೀನಿ ಅಂತ ಗೊತ್ತಿರಲಿಲ್ಲ. ನಮ್ಮ ನಾಯಕರು ಗಾಡ್ ಗಿಫ್ಟ್ ನೀಡಿದ್ದಾರೆ ಎಂದು ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರು ಹೇಳಿದ್ದಾರೆ. ಇದರ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಮಾಣವಚನ ಸ್ವೀಕರಿಸದಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಆದರೆ ಅದು ಕೆಲವು ಗಂಟೆಗಳು ಮಾತ್ರ. ಪ್ರಮಾಣ ವಚನ ಸ್ವೀಕರಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆಯದೆ ಇರುವುದು ಗಾಯಿತ್ರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಬಳಿ ತನ್ನ ನೋವು ತೊಡಗಿಕೊಂಡರು ಜಪ್ಪಯ್ಯ ಎಂದಿಲ್ಲ ಎನ್ನಲಾಗುತ್ತಿದೆ.
ಮಧ್ಯಾಹ್ನ 3 ಗಂಟೆ ಸುಮಾರಿಗೆ ಪಕ್ಷದಲ್ಲಿ ನಡೆದ ಕೆಲ ಅನಿರೀಕ್ಷಿತ ಬೆಳವಣಿಗೆಗಳು, ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಉಮಾಶ್ರೀ ವ್ಯಕ್ತಪಡಿಸಿದ ಆಕ್ಷೇಪ ಗಾಯತ್ರಿ ಶಾಂತೇಗೌಡರ ಹಾದಿಗೆ ಮುಳುವಾಗಿದೆ.ಮುಖ್ಯಮಂತ್ರಿಗಳಿಂದ ಕರೆ ಬರಬಹುದೆಂದು ನಿರೀಕ್ಷಿಸಿದ್ದ ಇವರಿಗೆ ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈತಪ್ಪಿದ್ದು ಪಕ್ಷ ಶಾಕ್ ನೀಡಿದೆ.
ಗಾಯಿತ್ರಿ ಬದಲಿಗೆ ಎನ್.ಎಸ್.ಬೋಸ್ ರಾಜ್ ಮಂತ್ರಿಯಾಗುವ ಸಲುವಾಗಿ ಗಾಯಿತ್ರಿ ಔಟ್,ಬೋಸ್ ರಾಜ್ ಇನ್ ಎನ್ನುವಂತಾಗಿದೆ.ಮಹಿಳೆಯರಿಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ಸರ್ಕಾರ ಮಹಿಳೆಯರಿಗೆ ಸಚಿವ ಸ್ಥಾನ ನೀಡದಿರುವುದು ಹಲವು ಅನುಮಾನಕ್ಕೆ ಒಳಗಾಗಿದೆ.
ಸಿದ್ದರಾಮಯ್ಯ ಮುಂದೆ ಗಾಯತ್ರಿ ಶಾಂತೇಗೌಡ ಬೇಸರ ವ್ಯಕ್ತಪಡಿಸಿದ್ದು, ತಪ್ಪು ಮಾಡದಿದ್ದರೂ ಪರಿಷತ್ ಸ್ಥಾನದಲ್ಲೂ ತನಗೆ 4 ವರ್ಷ ಅನ್ಯಾಯ ಆಗಿದೆ. ಈಗ ಸಚಿವ ಸ್ಥಾನದ ವಿಚಾರದಲ್ಲಿಯೂ ಹೀಗಾಗಿದ್ದು, ಒಂದು ಅವಕಾಶ ನೀಡುವಂತೆ ಮನವಿ ಮಾಡಿ ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ.
