Thursday, August 6, 2026
Homeಜಿಲ್ಲಾಸುದ್ದಿಮೋಟಮ್ಮನವರು ಬಹಿರಂಗವಾಗಿ ಚಿಕ್ಕಮಗಳೂರು ಜನತೆಯ ಕ್ಷಮೆಯಾಚಿಸಲಿ: ಯುವಮುಖಂಡ ದೇವ್ ದತ್ ಕಿಡಿ

ಮೋಟಮ್ಮನವರು ಬಹಿರಂಗವಾಗಿ ಚಿಕ್ಕಮಗಳೂರು ಜನತೆಯ ಕ್ಷಮೆಯಾಚಿಸಲಿ: ಯುವಮುಖಂಡ ದೇವ್ ದತ್ ಕಿಡಿ

Telegram Group
Join Now

ಚಿಕ್ಕಮಗಳೂರು: ಶಾಸಕಿ ಮೋಟಮ್ಮನವರು ಖಾಸಗಿ ಚಾನಲ್‌ ನಲ್ಲಿ ಮಾತನಾಡುವಾಗ ಗಾಯತ್ರಿ ಅವರಿಗೆ ಸಚಿವ ಸ್ಥಾನ ಕೊಡಲು ಹೊರಟಿರೋದು ತಪ್ಪು ಎಂಬ ಹೇಳಿಕೆಯನ್ನು ನೀಡಿದ್ದರ ಬಗ್ಗೆ ಚಿಕ್ಕಮಗಳೂರಿನ ಕಾಂಗ್ರೆಸ್‌ನ ಯುವ ಮುಖಂಡ ದೇವ್ ದತ್ ಕಿಡಿ ಕಾರಿದ್ದಾರೆ.

ನಿಮ್ಮ ಮಗಳಿಗೆ ಸಚಿವ ಸ್ಥಾನ ಕೇಳಿ, ತಪ್ಪಿಲ್ಲ ಆದರೆ  ಬೇರೆಯವರಿಗೆ ಕೊಡಬೇಡಿ ಅನ್ನೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಗಾಯತ್ರಿ ಅವರ ಕೃಪೆಯಿಂದ ನಿಮ್ಮ ಮಗಳು ಶಾಸಕರಾಗಿದ್ದು ಮೊದಲು ಅದನ್ನ ನೆನಪಿನಲ್ಲಿಡಿ  ಹಾಗೆ ಮೋಟಮ್ಮನವರು ಚಿಕ್ಕಮಗಳೂರು ಜನತೆಯ ಕ್ಷಮೆಯಾಚಿಸಲಿ ಎಂದು  ಕಾಂಗ್ರೆಸ್‌ನ ಯುವ ಮುಖಂಡ ದೇವ್ ದತ್ ಅವರು ತಮ್ಮದೇ ಸರ್ಕಾರದ ಶಾಸಕಿಯ ತಾಯಿಯ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನದ ಹೊಗೆ ಬುಗಿಲೆದ್ದಿದೆ. ಈಗಾಗಲೇ ಮಹಿಳಾ ಕೋಟಾದಲ್ಲಿ ಯಾರಿಗೂ ಸಚಿವ ಸ್ಥಾನ ಸಿಗದಿದ್ದಿದ್ದು ಆದರೆ ಚಿಕ್ಕಮಗಳೂರಿನ ಗಾಯಿತ್ರಿ ಶಾಂತೇಗೌಡ ಹೆಸರು ಲಿಸ್ಟ್‌ ನಲ್ಲಿ ಇದ್ದರೂ ಕೊನೆ ಕ್ಷಣದಲ್ಲಿ ಹೆಸರು ಕೈತಪ್ಪಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments