Thursday, August 6, 2026
Homeಪಬ್ಲಿಕ್ ಇಂಪ್ಯಾಕ್ಟ್ಭಾರತಕ್ಕೆ ಬಂದ ರಷ್ಯನ್ ಯುವತಿಗೆ ತಡರಾತ್ರಿ ಆತಂಕ: ಕ್ಯಾಬ್ ಡ್ರೈವರ್ ಮಾಡಿದ ಆ ಒಂದು ಕೆಲಸಕ್ಕೆ...

ಭಾರತಕ್ಕೆ ಬಂದ ರಷ್ಯನ್ ಯುವತಿಗೆ ತಡರಾತ್ರಿ ಆತಂಕ: ಕ್ಯಾಬ್ ಡ್ರೈವರ್ ಮಾಡಿದ ಆ ಒಂದು ಕೆಲಸಕ್ಕೆ ಮಹಿಳೆ ಕಣ್ಣೀರು!

Telegram Group
Join Now

ತಡರಾತ್ರಿಯಲ್ಲಿ ಮೊದಲ ಬಾರಿಗೆ ಭಾರತಕ್ಕೆ ಬಂದಿಳಿದ ರಷ್ಯನ್ ಮಹಿಳೆಯೊಬ್ಬರಿಗೆ ಭಾರತೀಯ ಕ್ಯಾಬ್ ಚಾಲಕನೊಬ್ಬ ತೋರಿದ ಪ್ರಾಮಾಣಿಕತೆ ಮತ್ತು ಆತ್ಮೀಯತೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಲಕ್ಷಾಂತರ ನೆಟ್ಟಿಗರ ಮನ ಗೆದ್ದಿದೆ.

​ರಾತ್ರಿಯ ಪಯಣ ಮತ್ತು ಸಣ್ಣ ಆತಂಕ:​ರಷ್ಯಾದಿಂದ ಭಾರತಕ್ಕೆ ಬಂದಿಳಿದ ಮಹಿಳೆ ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ತೆರಳಲು ಕ್ಯಾಬ್ ಬುಕ್ ಮಾಡಿದ್ದರು. ಕಾರು ಹತ್ತಿದ ತಕ್ಷಣ ಚಾಲಕ ಅತ್ಯಂತ ವಿನಮ್ರವಾಗಿ, “ಮೇಡಂ, ನಿಮಗೆ ಇಂಗ್ಲಿಷ್ ಬರುವುದೇ? ದಯವಿಟ್ಟು ಓಟಿಪಿ (OTP) ತೋರಿಸಿ” ಎಂದು ಕೇಳಿದ್ದಾನೆ. ಆಕೆಗೆ ಇಂಗ್ಲಿಷ್ ಅಷ್ಟಾಗಿ ಬಾರದಿದ್ದರೂ ಫೋನ್‌ನಲ್ಲಿದ್ದ ಓಟಿಪಿ ತೋರಿಸಿದ್ದಾರೆ.

​ನಂತರ ಚಾಲಕ, “ಇದು ನಿಮ್ಮ ಮೊದಲ ಭಾರತ ಪ್ರವಾಸವೇ? ಒಬ್ಬರೇ ಪ್ರಯಾಣಿಸುತ್ತಿದ್ದೀರಾ?” ಎಂದು ವಿಚಾರಿಸಿದಾಗ, ಮಹಿಳೆ ನಗುತ್ತಲೇ ಹೌದೆಂದು ತಲೆಯಾಡಿಸಿ, “ನನಗೆ ತುಂಬಾ ಹಸಿಯುತ್ತಿದೆ. ಈ ಸಮಯದಲ್ಲಿ ಯಾವುದಾದರೂ ಪಿಜ್ಜಾ ಶಾಪ್ ತೆರೆದಿರುತ್ತದೆಯೇ?” ಎಂದು ಕೇಳಿದ್ದಾರೆ.

​ಸ್ವಲ್ಪ ದೂರ ಸಾಗಿದ ನಂತರ ಚಾಲಕ ಕಾರನ್ನು ಹೋಟೆಲೊಂದರ ಮುಂದೆ ನಿಲ್ಲಿಸಿ, ಒಳಗೆ ತೆರಳಿದ್ದಾನೆ. ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದ ಮಹಿಳೆಗೆ ಅಪರಿಚಿತ ಸ್ಥಳದಲ್ಲಿ ತಡರಾತ್ರಿ ಚಾಲಕ ಕಾರು ನಿಲ್ಲಿಸಿ ಹೊರಹೋದಾಗ ಸಣ್ಣ ಆತಂಕ ಶುರುವಾಗಿದೆ. ಮುನ್ನೆಚ್ಚರಿಕೆಯಾಗಿ ಅವರು ತಕ್ಷಣವೇ ಕ್ಯಾಬ್ ವಿವರಗಳನ್ನು ತಮ್ಮ ಪತಿಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದಾರೆ.

​ಬಿಸಿ ಬಿಸಿ ಪಿಜ್ಜಾ ಮತ್ತು ಅಚ್ಚರಿ!

​ಆದರೆ ಕೆಲವೇ ನಿಮಿಷಗಳಲ್ಲಿ ಹಿಂತಿರುಗಿದ ಚಾಲಕ, ತನ್ನ ಕೈಯಲ್ಲಿದ್ದ ಬಿಸಿ ಬಿಸಿ ಫ್ರೆಶ್ ಪಿಜ್ಜಾವನ್ನು ಮಹಿಳೆಗೆ ನೀಡಿ, ಪ್ರಯಾಣ ಮುಂದುವರಿಸಿದ್ದಾನೆ. ಚಾಲಕನ ಈ ಕಾಳಜಿ ಕಂಡು ಮಹಿಳೆ ಆಶ್ಚರ್ಯಚಕಿತರಾಗಿದ್ದಾರೆ.

​ಗಮ್ಯಸ್ಥಾನ ತಲುಪಿದಾಗ, ಮಹಿಳೆಯನ್ನು ಸುರಕ್ಷಿತವಾಗಿ ಹೋಟೆಲ್ ಪ್ರವೇಶದ್ವಾರದವರೆಗೆ ತಲುಪಿಸಲು ಚಾಲಕ ನೆರವಾಗಿದ್ದಾನೆ. ಆತನ ಈ ಅಪಾರ ಪ್ರೀತಿ ಮತ್ತು ಕಾಳಜಿಗೆ ಮನಸೋತ ರಷ್ಯನ್ ಮಹಿಳೆ, ಪ್ರಯಾಣದ ಬಾಡಿಗೆ ಹಾಗೂ ಪಿಜ್ಜಾದ ಹಣವನ್ನು ಪಾವತಿಸಿ, ಜೊತೆಗೆ ಆತನಿಗೆ ಗೌರವಪೂರ್ವಕವಾಗಿ ₹1,000 ಟಿಪ್ (Tip) ನೀಡಲು ಮುಂದಾಗಿದ್ದಾರೆ.

​”ಅತಿಥಿ ದೇವೋ ಭವ!”

​ಆದರೆ ಆ ಚಾಲಕ ಆ ಹೆಚ್ಚುವರಿ ಹಣವನ್ನು ನಯವಾಗಿಯೇ ನಿರಾಕರಿಸಿ, ಕೈಮುಗಿದು “ಅತಿಥಿ ದೇವೋ ಭವ” (ಅತಿಥಿಯು ದೇವರಿಗೆ ಸಮಾನ) ಎಂದು ಹೇಳಿದ್ದಾನೆ.

​ಚಾಲಕನ ಈ ಮಾತು ಮತ್ತು ಸಂಸ್ಕಾರದಿಂದ ಮಹಿಳೆ ತೀವ್ರ ಭಾವಪರಪವಶರಾಗಿದ್ದಾರೆ. ಹೋಟೆಲ್ ಕೊಠಡಿಗೆ ತೆರಳಿದ ತಕ್ಷಣ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ತಮ್ಮ ಈ ಇಡೀ ಅನುಭವವನ್ನು ಹಂಚಿಕೊಂಡಿದ್ದಾರೆ. ಭಾರತೀಯ ಚಾಲಕನ ಪ್ರಾಮಾಣಿಕತೆ ಮತ್ತು ಉದಾರತೆಯನ್ನು ಕೊಂಡಾಡಿದ ಅವರು, “ಮುಂದಿನ ಬಾರಿ ನಾನು ಖಂಡಿತವಾಗಿಯೂ ನನ್ನ ಪತಿಯೊಂದಿಗೆ ಮತ್ತೆ ಭಾರತಕ್ಕೆ ಭೇಟಿ ನೀಡುತ್ತೇನೆ” ಎಂದು ಸಂತಸ ಹಂಚಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments