ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿರುವ ಅಮೃತ ಮಹಲ್ ತಳಿ ಸಂವರ್ಧನ ಕೇಂದ್ರಕ್ಕೆ ತೆರಳುವಾಗ ಸಚಿವ ಕೆ.ಜೆ ಜಾರ್ಜ್ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿರುವ ಘಟನೆ ನಡೆದಿದೆ.
ಸದ್ಯ ಸಚಿವ ಜಾರ್ಜ್ ಅವರು ಬರ ವೀಕ್ಷಣೆಗಾಗಿ ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆ ಪ್ರವಾಸದಲ್ಲಿದ್ದಾರೆ. ಪಟ್ಟಣದ ಅಮೃತ್ ಮಹಲ್ ಸಂವರ್ಧನ ತಳಿ ಕೇಂದ್ರದತ್ತ ವಾಹನ ತೆರಳುತ್ತಿದ್ದಾಗ, ಬೆಂಗಾವಲು ವಾಹನ ಕೇಂದ್ರದ ಗೇಟ್‌ಗೆ ಡಿಕ್ಕಿಯೊಡೆದಿದೆ.
