Monday, August 10, 2026
Homeಕ್ರೈಮ್‌Chickmagalore: 100 ಅಡಿ ಪ್ರಪಾತಕ್ಕೆ ಉರುಳಿದ 10 ಚಕ್ರದ ಲಾರಿ: ಅದೃಷ್ಟವಶಾತ್ ಚಾಲಕ & ನಿರ್ವಾಹಕ...

‌Chickmagalore: 100 ಅಡಿ ಪ್ರಪಾತಕ್ಕೆ ಉರುಳಿದ 10 ಚಕ್ರದ ಲಾರಿ: ಅದೃಷ್ಟವಶಾತ್ ಚಾಲಕ & ನಿರ್ವಾಹಕ ಸೇಫ್!

Telegram Group
Join Now

ಚಿಕ್ಕಮಗಳೂರು : ಬ್ರೇಕ್ ಫೇಲ್ ಆದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಲೋಡ್‌ ಸಮೇತ 100 ಅಡಿ ಪ್ರಪಾತಕ್ಕೆ ಉರುಳಿದ ಘಟನೆ ಚಿಕ್ಕಮಗಳೂರು ನಗರದ ಹೊರವಲಯದ ಕಣಿವೆ ಕ್ರಾಸ್ ಬಳಿ ನಡೆದಿದೆ.

ಹೌದು .. ಕಡೂರು-ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು ಅದೃಷ್ಟವಶಾತ್‌ ಚಾಲಕ ಹಾಗೂ ನಿರ್ವಾಹಕ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಚಿಕ್ಕಮಗಳೂರಿನಿಂದ ಕಡೂರು ಕಡೆಗೆ  ಸರಕು ಹೊತ್ತು ಸಾಗುತ್ತಿದ್ದ 10 ಚಕ್ರದ ಲಾರಿ ಕಣಿವೆ ಕ್ರಾಸ್ ತಲುಪುತ್ತಿದ್ದಂತೆ ಬ್ರೇಕ್‌ ಫೇಲ್‌ ಆಗಿದೆ. ಇದರಿಂದಾಗಿ ವಾಹನ ಚಾಲಕನಿಗೆ ವಾಹನದ ಮೇಲೆ ನಿಯಂತ್ರಣ ತಪ್ಪಿದ್ದು ರಸ್ತೆ ಬೇಲಿಯನ್ನು ಮುರಿದುಕೊಂಡ ಮರಕ್ಕೆ ಡಿಕ್ಕಿ ಹೊಡೆದು ಪ್ರಪಾತಕ್ಕೆ ಬಿದ್ದ ಲಾರಿ, ಅಪಘಾತದ ರಭಸಕ್ಕೆ  ಲಾರಿ ಸಂಪೂರ್ಣ ಜಖಂಗೊಂಡಿದೆ.

ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments