ಮೂಡಿಗೆರೆ: ಬಿಜೆಪಿ ತಾಲೂಕು ಮಂಡಲದ ಅಧ್ಯಕ್ಷ ಗಜೇಂದ್ರ ತರುವೆ ಅವರು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಪ್ರಸಾದ್ ಹುಲ್ಲೆಮನೆ ಅವರನ್ನು ನೇಮಿಸಿದರು
ಸೋಮವಾರ ಪಕ್ಷದ ಕಚೇರಿ ಪಂಚಾವಟಿಯಲ್ಲಿ ತಿರಂಗ ಯಾತ್ರೆಯ ಕುರಿತು ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಪಕ್ಷದ ಮುಖಂಡರು ಹಿರಿಯರ ಸಮ್ಮುಖದಲ್ಲಿ ತಾಲೂಕು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಇವರನ್ನು ನೇಮಕ ಮಾಡಲಾಯಿತು
ನೂತನ ಜವಾಬ್ದಾರಿ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಸಾದ್ ಹುಲ್ಲೆಮನೆ ಪಕ್ಷ ನೀಡಿರುವ ಜವಾಬ್ದಾರಿಯನ್ನು ಎಲ್ಲರ ಮಾರ್ಗದರ್ಶನ ಪಡೆದು ನಿಭಾಯಿಸಿಕೊಂಡು ಹೋಗುವುದಾಗಿ ತಿಳಿಸಿದರು. ಅಲ್ಲದೆ ಮುಂದಿನ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಯುವ ಸಮೂಹವನ್ನು ಒಟ್ಟು ಗೂಡಿಸಿ ಪಕ್ಷಕ್ಕೆ ಯುವಕರನ್ನ ಕರೆತಂದು ಪಕ್ಷ ಬಲವರ್ಧನೆಗೆ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು
ಕಳೆದ 10 ವರ್ಷಗಳಿಂದ ಸಾಮಾಜಿಕ ಜಾಲತಾಣ ಸಂಚಾಲಕನಾಗಿ ಹಾಗೂ ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದು ಮುಂದಿನ ದಿನಗಳಲ್ಲಿ ಸಹ ಜವಾಬ್ದಾರಿಗೆ ಬದ್ಧನಾಗಿ ಸಂಘಟನೆಗಾಗಿ ದುಡಿಯುಯುವುದಾಗಿ ತಿಳಿಸಿದರು
ಈ ಸಂದರ್ಭದಲ್ಲಿ ತಾಲೂಕು ಮಂಡಲದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಮರ್ಕಲ್, ಕೋಷ್ಟ ಸಂಚಾಲಕರಾದ ಪಂಚಾಕ್ಷರಿ ಹಾಲೂರು,ಜಿಲ್ಲಾ ಉಪಾಧ್ಯಕ್ಷರಾದ ಅವಿನಾಶ್,ಜಿಲ್ಲಾ ಕಾರ್ಯದರ್ಶಿಯಾದ ಬಾಲು ಶೆಟ್ಟಿ, ಯುವಮೋರ್ಚಾ ಅಧ್ಯಕ್ಷರಾದ ತಾರೇಶ್ ಜೇನ್ ಬೈಲು, ಚಿರಾಗ್ ಕೊಟ್ರುಕೆರೆ ಅಭಿಷೇಕ್ ಜಾವಳಿ, ರಂಗನಾಥ, ರಾಜು, ಮಿಥುನ್ , ಸಿದ್ದಯ್ಯ, ಸಾಗರ್ ಹುಲ್ಲೇಮನೆ, ಶರತ್ ಪಲ್ಗುಣಿ, ಬಿಜೆಪಿ ವಕ್ತಾರ ವಿನಯ್ ಹಳೆಕೋಟೆ, ಜೈಪಾಲ್ ಬಿದರಹಳ್ಳಿ, ರಂಜನ್, ಅತಿತ್, ಸುನಿಲ್ ಸೇರಿ ನಗರ ಹಾಗೂ ಹೋಬಳಿ ಅಧ್ಯಕ್ಷರುಗಳ ಕಾರ್ಯಕರ್ತರು ಹಾಜರಿದ್ದರು
