Thursday, August 13, 2026
Homeಕರ್ನಾಟಕಕಾವೇರಿ ಕಿಚ್ಚು: ಬೀದಿಗಿಳಿದು ಖಾಲಿ ಕೊಡ ಹಿಡಿದು ಉರುಳು ಸೇವೆ ಮೂಲಕ ರೈತ ಸಂಘದಿಂದ...

ಕಾವೇರಿ ಕಿಚ್ಚು: ಬೀದಿಗಿಳಿದು ಖಾಲಿ ಕೊಡ ಹಿಡಿದು ಉರುಳು ಸೇವೆ ಮೂಲಕ ರೈತ ಸಂಘದಿಂದ ಪ್ರತಿಭಟನೆ

Telegram Group
Join Now

ಚಿಕ್ಕಮಗಳೂರು : ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದಲ್ಲಿ ಕನ್ನಡಪರ ಸಂಘಟನೆಗಳು, ರೈತ ಸಂಘ, ದಲಿತ ಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ

ಹೌದು .. ಚಿಕ್ಕಮಗಳೂರು ನಗರದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯುತ್ತಿದ್ದು  ಕನ್ನಡಪರ ಸಂಘಟನೆಗಳು, ರೈತ ಸಂಘ, ದಲಿತ ಸಂಘಟನೆಗಳಿಂದ  ರಾಜ್ಯ ಸರ್ಕಾರದ ವಿರುದ್ಧ
ಆಕ್ರೋಶ ಹೊರ ಹಾಕಿ  ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತಿದೆ.

ನಗರದ ಹನುಮಂತಪ್ಪ ವೃತ್ತದಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ರಾಜೇಗೌಡನಿಂದ ಖಾಲಿ ಕೊಡ ಹಿಡಿದು ಉರುಳು ಸೇವೆ ಮಾಡುವ ಮೂಲಕ ತಮಿಳುನಾಡು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡಿದ್ದು  ಎಂ.ಜಿ.‌ರಸ್ತೆ ಮೂಲಕ ಆಜಾದ್ ಪಾರ್ಕ್ ವರೆಗೂ ಪ್ರತಿಭಟನಾ ಮೆರವಣಿಗೆ .ಇದಕ್ಕೆ  50ಕ್ಕೂ ಹೆಚ್ಚು ಹೋರಾಟಗಾರರು ಸಹ ಪ್ರೋತ್ಸಾಹ ನೀಡಿದ್ದು ಇವರ ಜೊತೆ ಕೈಜೋಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments