Friday, August 14, 2026
Homeಜಿಲ್ಲಾಸುದ್ದಿಮೂಡಿಗೆರೆ ಕಾಂಗ್ರೆಸ್ ಕೋಲ್ಡ್‌ ವಾರ್ ತಾರ್ಕಿಕ ಅಂತ್ಯ: ಮತ್ತೇ ಸೀನಿಯರ್ಸ್ ವಿರುದ್ಧ ಮೇಲುಗೈ ಸಾಧಿಸಿದ ಶಾಸಕಿ...

ಮೂಡಿಗೆರೆ ಕಾಂಗ್ರೆಸ್ ಕೋಲ್ಡ್‌ ವಾರ್ ತಾರ್ಕಿಕ ಅಂತ್ಯ: ಮತ್ತೇ ಸೀನಿಯರ್ಸ್ ವಿರುದ್ಧ ಮೇಲುಗೈ ಸಾಧಿಸಿದ ಶಾಸಕಿ ನಯನಾ ಮೋಟಮ್ಮ:!

Telegram Group
Join Now

ಮೂಡಿಗೆರೆ: ಶಾಸಕಿ ನಯನಾ ಮೋಟಮ್ಮ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಟೀಂ ಮಧ್ಯೆ ನಡೆಯುತ್ತಿದ್ದ ಶೀತಲ ಸಮರಕ್ಕೆ ತಾರ್ಕಿಕ ಅಂತ್ಯ ಬಿದ್ದಂಗಾಗಿದೆ. ಎತ್ತು ನೀರಿಗೆ ಎಳೆದ್ರೆ, ಕೋಣ ಏರಿಗೆ ಏಳೀತಾ ಇತ್ತು ಅನ್ನೊಂಗೆ ಆಗಿತ್ತು ಮೂಡಿಗೆರೆ ಕಾಂಗ್ರೆಸ್ಸಿಗರ ನಡುವಿನ ಕಾದಾಟ ಇತ್ತೀಚಿಗಂತೂ ಶಾಸಕಿ ನಯನಾ ಮೋಟಮ್ಮ ವಿರುದ್ದ, ಅವರ ಕಾರ್ಯವೈಖರಿ ಸರಿ ಇಲ್ಲ ಅಂತಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರಗೌಡ ಹಾಗೂ ಕೆಲ ಕಾಂಗ್ರೆಸ್ ಹಿರಿಯ ಮುಖಂಡರು, ಸಾರ್ವಜನಿಕವಾಗಿಯೇ ಅಸಮಾಧಾನ ಹೊರಹಾಕಿದ್ರು.

ಅಲ್ಲಲ್ಲಿ ಸಾಲು ಸಾಲು ಸಭೆಗಳನ್ನ ನಡೆಸಿ ಶಾಸಕಿ ನಯನಾ ವಿರುದ್ಧ ಕೆಂಡಕಾರಿದ್ರು.. ಕೊನೆಗೆ ಈ ಒಳಜಗಳದ ಮ್ಯಾಟ್ರು ಕೆಪಿಸಿಸಿ ಅಧ್ಯಕ್ಷರು, ಸಿಎಂ ಅಂಗಳಕ್ಕೂ ತಲುಪಿತ್ತು.. ನಿನ್ನೆ ಕೂಡ ಗೋಣಿಬೀಡುವಿನಲ್ಲಿ ಹೋಬಳಿ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಏರ್ಪಟಿತ್ತು. ಅಲ್ಲಿ ಶಾಸಕಿ ನಯನಾ ಮೋಟಮ್ಮ ವಿರುದ್ಧ ಕೈ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ರು.

ಇದರ ಬೆನ್ನಲ್ಲೇ ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನ ಆ ಹುದ್ದೆಯಿಂದ ತೆಗೆದು ಹಾಕಿದ್ದೇವೆ ಅಂತಾ ಸ್ವತಃ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ ಹರಿಪ್ರಸಾದ್ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಪಕ್ಷ ವಿರೋಧಿ ಚಟುವಟಿಕೆ ಮಾಡ್ತಿದ್ದೀರಿ ಎಂದು ಕಾರಣ ಕೇಳಿ ನೋಟಿಸ್ ಕೂಡ ನೀಡಲಾಗಿದೆ.

ಸದ್ಯ ಈ ಬೆಳವಣಿಗೆಯನ್ನ ನೋಡ್ತಿದ್ರೆ, ನೋ ಡೌಟ್, ಶಾಸಕಿ ನಯನಾ ಮೋಟಮ್ಮ ಕೈ ಮೇಲಾಗಿದ್ದು, ಶಾಸಕಿ ವಿರುದ್ಧ ಸಮರ ಸಾರಿದ್ದ ‘ಸೋ ಕಾಲ್ಡ್’ ಸೀನಿಯರ್ಸ್ಗಳಿಗೆ ಮುಖಭಂಗವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments