Saturday, August 15, 2026
Homeಜಿಲ್ಲಾಸುದ್ದಿಸ್ವಾತಂತ್ರ್ಯ ದಿನ ಅಂಗವಾಗಿ ಹೆಡದಾಳು ಸರ್ಕಾರಿ ಶಾಲೆಯ ಮಕ್ಕಳಿಗೆ ಕೊಡೆ ವಿತರಿಸಿದ ದಿನೇಶ್ ಕುಮಾರ್

ಸ್ವಾತಂತ್ರ್ಯ ದಿನ ಅಂಗವಾಗಿ ಹೆಡದಾಳು ಸರ್ಕಾರಿ ಶಾಲೆಯ ಮಕ್ಕಳಿಗೆ ಕೊಡೆ ವಿತರಿಸಿದ ದಿನೇಶ್ ಕುಮಾರ್

Telegram Group
Join Now

ಚಿಕ್ಕಮಗಳೂರು : ತಾಲೂಕಿನ ಹೆಡದಾಳು ಸರ್ಕಾರಿ ಶಾಲೆಯ 50 ಮಕ್ಕಳಿಗೆ ಕೊಡೆಗಳನ್ನ ನೀಡಿ ದಿನೇಶ್ ಕುಮಾರ್ ಎಂಬುವವರು ಮಕ್ಕಳ ಮೊಗದಲ್ಲಿ ಸಂತಸ ಅರಳಲು ಕಾರಣರಾಗಿದ್ದಾರೆ.

ಹೌದು, ಮಲೆನಾಡಲ್ಲಿ ಮಳೆ ಅಬ್ಬರಿಸುತ್ತಿದೆ.. ಶಾಲೆಗೆ ಹೋಗುವ ಮಕ್ಕಳಿಗಂತೂ ಮಳೆಯ ರಗಳೆ ತಪ್ಪಿದಲ್ಲ.. ಆದ್ರೂ ವಿಧಿಯಿಲ್ಲದೇ ಮಳೆಯಲ್ಲೇ ನೆನೆದುಕೊಂಡು ಕೆಲ ಮಕ್ಕಳು ಓಡಾಡುವುದನ್ನ ನೋಡಿದ ದಿನೇಶ್, ಸ್ವಾತಂತ್ರö್ಯ ದಿನದ ಅಂಗವಾಗಿ ಆ ಶಾಲೆಯ 50 ಮಕ್ಕಳಿಗೆ ಕೊಡೆಗಳನ್ನ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಬಹಳ ಹಿಂದಿನಿಂದಲೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿರುವ ದಿನೇಶ್, ಇದೀಗ ಮತ್ತೆ ಮಕ್ಕಳಿಗೆ ಅವಶ್ಯವಾಗಿ ಬೇಕಿದ್ದ ಕೊಡೆಗಳನ್ನ ನೀಡುವುದರ ಮೂಲಕ ಉದಾರತೆ ತೋರಿದ್ದಾರೆ. ಕೊಡೆಗಳನ್ನ ಪಡೆದುಕೊಂಡ ಮಕ್ಕಳು ಬಹಳ ಖು಼ಷಿಯಿಂದ ಮನೆ ಕಡೆ ಹೆಜ್ಜೆ ಹಾಕಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments