ಎನ್. ಆರ್. ಪುರ: ಮಲೆನಾಡಿಗೆ ಕಂಟಕವಾಗಿರುವ ಪರಿಸರ ಸೂಕ್ಷ್ಮ ವಲಯದ ಕುರಿತು ಈಗಾಗಲೇ ಮಾನ್ಯ ಶಾಸಕರಾದ ಟಿ ಡಿ ರಾಜೇಗೌಡರು ಮತ್ತು ವಿಧಾನ ಪರಿಷತ್ ಸದಸ್ಯರಾದ ಗಾಯತ್ರಿ ಶಾಂತೇಗೌಡ ಅವರು ವಿಧಾನಸಭ ಕಲಾಪಗಳಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ ಅದಕ್ಕೆ ಸರ್ಕಾರದ ಉತ್ತರ ಕೂಡ ಬಂದಿದೆ ಈ ಸಂದರ್ಭದಲ್ಲಿ ಇಬ್ಬರನ್ನು ಕೂಡ ವಿಶೇಷವಾಗಿ ಅಭಿನಂದಿಸುತ್ತಾ ಈಗ ಮುಂದಿರುವ ದಾರಿ ಮಲೆನಾಡಿನ ಜನರಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ರೈತ ಸಂಘಗಳು ಮತ್ತು ರಾಜಕೀಯ ಪಕ್ಷಗಳು ಒಗ್ಗೂಡಬೇಕಿದೆ ಎಂದು ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ಮುಖಂಡ ರತನ್ ಗೌಡ ಅರಗಿ ತಿಳಿಸಿದ್ದಾರೆ.
ಆಕ್ಷೇಪಣೆಗಳನ್ನು ಸಲ್ಲಿಸಲು ಕೊಟ್ಟಿರುವ ಅವಧಿಯ ಒಳಗೆ ಎಲ್ಲ ಗ್ರಾಮಗಳ ಆಕ್ಷೇಪಣೆಗಳನ್ನು ಸಲ್ಲಿಸಲು ಎಲ್ಲಾ ಜವಾಬ್ದಾರಿಯುತ ರೈತ ಸಂಘಗಳು ಮತ್ತು ರಾಜಕೀಯ ಪಕ್ಷಗಳು ನೆರವಾಗಬೇಕು ಮತ್ತು ಈ ಸಂದರ್ಭದಲ್ಲಿ ಯಾವುದೇ ರಾಜಕೀಯ ಮಾಡದೆ ರಾಜಕೀಯ ಬೇಳೆ ಬೇಯಿಸಿಕೊಳ್ಳದೆ ರೈತರ ನೆರವಿಗೆ ನಿಲ್ಲಬೇಕಾಗಿರುವುದು ಎಲ್ಲರ ಕರ್ತವ್ಯ ಎಂದರು.
ಹೋರಾಟ ಪ್ರತಿಭಟನೆಗಳನ್ನು ಮಾಡುವ ಮೊದಲು ಕೊಟ್ಟಿರುವ ಕಾಲಾವಕಾಶದೊಳಗೆ ಆಕ್ಷೇಪಣೆಗಳನ್ನು ಸಲ್ಲಿಸೋಣ.ಜನರ, ರೈತರ ಪರ ಈ ಸಂದರ್ಭದಲ್ಲಿ ನಿಲ್ಲಬೇಕಾಗಿರುವುದು ಎಲ್ಲಾ ಜವಾಬ್ದಾರಿಯುತರ ಕೆಲವಗಬೇಕು ಮಲೆನಾಡನ್ನು ಮತ್ತು ಮಲೆನಾಡಿನ ಜನರನ್ನು ಉಳಿಸುವ ಮತ್ತು ಈ ರೀತಿಯ ಆದೇಶಗಳ ವಿರುದ್ಧ ನಾವೆಲ್ಲರೂ ಹೋರಾಡಬೇಕು ಎಂದಿದ್ದಾರೆ.
