ಚಿಕ್ಕಮಗಳೂರು : ದಿನಸಿ ಬೆಲೆ ಏರಿಕೆ ಯಿಂದ ಸಾರ್ವಜನಿಕರು ಕಂಗಲಾಗಿದ್ದಾರೆ, ಆದರೊಂದಿಗೆ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಮನಸ್ಸಿಗೆ ಬಂದಂತೆ ಏರಿಸಿ ಗ್ರಾಹಕರಿಂದ ವಸೂಲಿ ಮಾಡುತ್ತಿರುವ ಪ್ರಕರಣ ವರದಿಯಾಗಿದೆ.
ಜಿಲ್ಲಾಧಿಕಾರಿಗಳು ಆಯಿಲ್ ಕಂಪನಿಗಳು ನಿಗದಿ ಪಡಿಸಿದ ದರದಲ್ಲೆ ಗ್ರಾಹಕರಿಂದ ಹಣ ಪಡೆಯುವಂತೆ.ನಿಗದಿತ ದರ ಕ್ಕಿಂತ ಹೆಚ್ಚಿನ ದರ ಮಾರಾಟ ಮಾಡದಂತೆ ಮತ್ತು 5 ಕಿ ಮೀಟರ್ ವರೆಗೆ ಉಚಿತವಿದ್ದು, 5 ಕಿ,ಮಿ ನಂತರ ಪ್ರತಿ ಕಿ.ಮಿಗೆ 1.60 ಪೈಸಯಂತೆ ಪ್ರತಿ ಸಿಲಿಂಡರ್ ಗೆ ತೆಗೆದುಕೊಳ್ಳುವಂತೆ ಆದೇಶ ವಿದ್ದರೂ ಚಿಕ್ಕಮಗಳೂರು ಹೌಸಿಂಗ್‌ಬೋರ್ಡ್ಆದಿಶಕ್ತಿ ಭಾರತ್ ಗ್ಯಾಸ್ ನಲ್ಲಿ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆಯಾಗಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.
ಸುದ್ಧಿಗಾರರಿಗೆ ಮಾಹಿತಿ ನೀಡಿರುವ ಗ್ರಾಹಕರು ಐದು ಕಿ.ಮಿ ಒಳಗೆ ಮನೆಗಳು ಇದ್ದರು ಭಾರತ್ ಗ್ಯಾಸ್ ದರ ೯೫೫ ಇದೆ. ಆದರೆ ಆಟೋ ಚಾಲಕರು 1040 ರೂ ವಸೂಲಿ ಮಾಡುತ್ತಿದ್ದಾರೆ. ಇದರ ಬಗ್ಗೆ ಕೇಳಿದಾಗ ಮಾಲೀಕರು ನಮಗೆ ಸಂಬಳ ಕೊಡುವುದಿಲ್ಲಾ ಗ್ರಾಹಕರಿಂದಲೇ ವಸೂಲಿ ಮಾಡಿಕೊಳ್ಲಿ ಎಂದು ತಿಳಿಸಿದ್ದಾರೆ, 1040 ಕೊಟ್ಟರೆ ಮಾತ್ರ ಗ್ಯಾಸ್ ಕೊಡುತ್ತೇನೆ ಇಲ್ಲಾದಿದ್ದರೆ ಇಲ್ಲಾ ಎಂದು ಗ್ರಾಹಕರಿಂದ ವಸೂಲಿ ಮಾಡುತ್ತಿದ್ದಾರೆ. ಇದರ ಬಗ್ಗೆ ಮಾಲೀಕರಿಗೆ ಕೇಳಿದರೆ ಅವರು ಉಢಾಪೆಯ ಉತ್ತರವನ್ನು ನೀಡುತ್ತಿದ್ದಾರೆ. ಇನ್ನು ಹೆಚ್ಚಿಗೆ ಮಾತನಾಡಿದರೆ ನಾಳೆ ನಮಗೆ ಗ್ಯಾಸೆ ಇಲ್ಲವೆನ್ನುತ್ತಾರೆ . ಇಂದು ದುಡಿದು ಬಂದ ಹಣದಲ್ಲ ಸಂಸಾರ ನಿಭಾಯಿಸಬೇಕು, ಪ್ರತಿಯೊಂದು ವಸ್ತುಗಳು ಗಗನಕ್ಕೇರಿವೆ. ನಮ್ಮಂತಹ ಮಧ್ಯಮ ಮತ್ತು ಕೆಳಗಿನ ವರ್ಗಗಳ ಕುಟುಂಬದ ವ್ಯಕ್ತಿಗಳಿಗೆ ಮನೆ ಬಾಡಿಗೆ ಕಟ್ಟಬೇಕು, ಮಕ್ಕಳ ವಿದ್ಯಾಭ್ಯಾಸ ಹೀಗೆ ಇರುವಾಗ ಒಂದು ಗ್ಯಾಸಿನ ಮೇಲೆ ೮೦ ರೂ ಹೆಚ್ಚಿಗೆ ವಸೂಲಿ ಮಾಡಿದರೆ ಹೇಗೆ ಜೀವನ ನಡೆಸುವುದು ಎಂದು ಹೇಸರೇಳಲಿಚ್ಚಿಸಿದ ವ್ಯಕ್ತಿ ತನ್ನ ಗೋಳನ್ನು ತೋಡಿಕೊಂಡಿದ್ದಾರೆ.
ಸುದ್ದಿಗಾರೊಂದಿಗೆ ಕಾಂಗ್ರೆಸ್ ಮುಖಂಡ ಉಪ್ಪಳ್ಳಿ ಕೆ. ಭರತ್ ಮಾತನಾಡಿ . ಜಿಲ್ಲಾಡಳಿತ ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿರುವ ಮಾಲೀಕರ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿದ ಅವರು. ಒಬ್ಬ ಗ್ರಾಹಕರಿಂದ 80 ರೂನಂತೆ20 ಗ್ರಾಹಕರಿಂದ 1600 ಸಾವಿರ ತಿಂಗಳಿಗೆ 24 ಸಾವಿರ , ದಿನಕ್ಕೆ 50 ರಿಂದ 100 ಸಿಲಿಂಡರ್ ಗೆ ಲೆಕ್ಕ ಹಾಕಿ ಇತ್ತೀಚೆಗೆ ಹೊರನಾಡಿನ ಹೋಟೇಲ್ ಒಂದರಲ್ಲಿ ಹಲ್ಲಿಯ ವಡೆ ನೀಡಿ ದೊಡ್ಡ ಮಟ್ಟದ ಪ್ರಚಾರವಾದ ಬೆನ್ನಲ್ಲೆ ಪಟ್ಟಣದ ಪ್ರತಿಷ್ಟಿತ ಬೇಕರಿಯಲ್ಲಿ ಹಳಸಿದ ಕೇಕ್ ಅನ್ಮ್ನ ಗ್ರಾಹಕರಿಗೆ ನೀಡುತ್ತಿದ್ದ ನಕಲಿ ತುಪ್ಪ ಮಾರಾಟ ಬೆಳಕಿಗೆ ಬಂದಿದೆ ಆದರೆ ಪತ್ರಿಕೆ, ದೃಷ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತೆ ಹೊರತು ಅವರುಗಳ ಮೇಲೆ ಕ್ರಮ ಜರುಗಿಲ್ಲಾವೆಂದರೆ ಜಿಲ್ಲಾಡಳಿತ ಸಂಪೂರ್ಣ ನಿದ್ರೆಯಲ್ಲಿದೆ ಎಂದರ್ಥವಾಗುತ್ತಿದೆ.
ಈಗ ಬಂದಿರುವ ಜಿಲ್ಲಾಧಿಕಾರಿಗಳು ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಅವರ ಗಮನಕ್ಕೆ ಇಂಥ ವಿಚಾರಗಳು ತಲುಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಜಿಲ್ಲಾಧಿಕಾರಿಗಳು ಸಂಭಂಧ ಪಟ್ಟ ಅಧಿಕಾರಿಗಳೊಂದಿಗೆ ಪ್ರತಿ ವಾರ್ಡ್‌ಗಳಲ್ಲಿ ಸಭೆಯನ್ನು ಕರೆದು ಹೆಚ್ಚಿಗೆ ಹಣ ವಸೂಲಿ , ಕಳಪೆ ಆಹಾರ ವಿತರಣೆ ಇನ್ನು ಹತ್ತು ಹಲವು ದೂರುಗಳಿದಲ್ಲಿ ಅದನ್ನು ಸ್ವಿಕರಿಸಿ ನೊಂದವರಿಗೆ ನ್ಯಾಯ ಕೊಡಿಸುವ ವ್ಯವಸ್ಥೆ ಮಾಡಬೇಕಾಗಿದೆ ಎಂದರು
