Monday, August 24, 2026
Homeಜಿಲ್ಲಾಸುದ್ದಿಅರಸಿನಮಕ್ಕಿ-ಬೂಡುಮುಗೇರು ಗ್ರಾಮಗಳ ರಸ್ತೆಯಲ್ಲಿ ದೊಡ್ಡದೊಡ್ಡ ಗುಂಡಿಗಳು : ಶ್ರಮದಾನದ ಮೂಲಕ ದುರಸ್ಥಿಗೊಳಿಸಿದ ಯುವಕರು

ಅರಸಿನಮಕ್ಕಿ-ಬೂಡುಮುಗೇರು ಗ್ರಾಮಗಳ ರಸ್ತೆಯಲ್ಲಿ ದೊಡ್ಡದೊಡ್ಡ ಗುಂಡಿಗಳು : ಶ್ರಮದಾನದ ಮೂಲಕ ದುರಸ್ಥಿಗೊಳಿಸಿದ ಯುವಕರು

Telegram Group
Join Now

ಬೆಳ್ತಂಗಡಿ:ಅರಸಿನಮಕ್ಕಿ-ಬೂಡುಮುಗೇರು ರಸ್ತೆಯಲ್ಲಿ ಹಲವು ಕಡೆಗಳಲ್ಲಿ ದೊಡ್ಡದೊಡ್ಡ ಗುಂಡಿಗಳು ನಿರ್ಮಾಣಗೊಂಡಿದ್ದು, ವಾಹನ ಚಾಲಕರು ಹಾಗೂ ಸಾರ್ವಜನಿಕರು ಸಂಚರಿಸಲು ತೀವ್ರ ತೊಂದರೆ ಅನುಭವಿಸುತ್ತಿದ್ದರು.

ಇದನ್ನು ಮನಗಂಡ ಅರಸಿನಮಕ್ಕಿಯ ಆಟೋ ರಿಕ್ಷಾ ಚಾಲಕರಾದ ರಾಕೇಶ್‌ ಶೆಟ್ಟಿ ಹಾಗೂ ಉಪೇಂದ್ರ ಮತ್ತು ಸ್ಥಳೀಯ ಯುವಕರಾದ ಸಲ್ಮಾನ್ ಫಾರೀಜ್, ಮಹಮ್ಮದ್ ಫಝಲ್, ಬ್ರಿಜೇಶ್, ಶ್ರವಣ್ ಕುಮಾರ್,ಹಾಗೂ ಯುವರಾಜ್ ಬಿ ಎಸ್ ಅವರು ಆಗಸ್ಟ್ 23ರಂದು ಸ್ವಯಂಪ್ರೇರಿತವಾಗಿ ಶ್ರಮದಾನ ನಡೆಸಿದರು.ರಸ್ತೆಯಲ್ಲಿದ್ದ ಗುಂಡಿಗಳಿಗೆ ಕಲ್ಲುಗಳನ್ನು ಹಾಕಿ ಮುಚ್ಚುವ ಮೂಲಕ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

ಯುವಕರ ಈ ಸಾಮಾಜಿಕ ಕಾಳಜಿ ಹಾಗೂ ಶ್ರಮದಾನಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜೊತೆಗೆ ಈ ಯುವಕರು ಕುಸಲ್ದ ಬೊಳ್ಳಿಲು ಎಂಬ ಇನ್ಸ್ಟಾಗ್ರಾಂ ಖಾತೆಯನ್ನು ಹೊಂದಿದ್ದು,ಕಾಮಿಡಿ ಮತ್ತು ಸಮಾಜಕ್ಕೆ ಉತ್ತಮ ಸಂದೇಶವನ್ನು ಕೊಡುವ ರೀಲ್ಸ್ ಗಳನ್ನು ಮಾಡಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವೈರಲ್ ಆಗಿದ್ದಾರೆ. ಇವರ ಸಾಮಾಜಿಕ ಮತ್ತು ಸಾರ್ವಜನಿಕ ಸೇವೆ ಹೀಗೆ ಮುಂದುವರಿಯಲಿ ಎಂಬುದೇ ನಮ್ಮ ವಾಹಿನಿಯ ಆಶಯ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments