Monday, August 24, 2026
Homeಕ್ರೈಮ್ಚಿಕ್ಕಮಗಳೂರಲ್ಲಿ ದೇಶದ್ರೋಹಿ ಕೃತ್ಯದ ಆರೋಪ: ಟಿಪ್ಪು ಕಟೌಟ್‌ʼಗೆ ಪಾಕಿಸ್ತಾನಿ ಹಾಡು ಹಾಕಿ ವೈರಲ್!

ಚಿಕ್ಕಮಗಳೂರಲ್ಲಿ ದೇಶದ್ರೋಹಿ ಕೃತ್ಯದ ಆರೋಪ: ಟಿಪ್ಪು ಕಟೌಟ್‌ʼಗೆ ಪಾಕಿಸ್ತಾನಿ ಹಾಡು ಹಾಕಿ ವೈರಲ್!

Telegram Group
Join Now

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಈದ್‌ ಮಿಲಾದ್‌ ಸಂಭ್ರಮದ ನಡುವೆಯೇ ದೇಶದ್ರೋಹಿ ಕೃತ್ಯದ ಆರೋಪ ಕೇಳಿಬಂದಿದೆ.

ಹೌದು .. ಆಗಸ್ಟ್ 26 ರಂದು ನಡೆಯಲಿರುವ ಈದ್ ಮಿಲಾದ್ ಮೆರವಣಿಗೆಯ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಟಿಪ್ಪು ನಗರದಲ್ಲಿ ಬೃಹತ್ 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ಅಳವಡಿಸಲಾಗಿದೆ. ಆದರೆ, ಈ ಕಟೌಟ್‌ನ ವಿಡಿಯೋವನ್ನು ‘ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಹಿನ್ನೆಲೆಯಲ್ಲಿ ಪಾಕಿಸ್ತಾನದ ಮುಜಾಹಿದ್‌ಗೆ ಸಂಬಂಧಿಸಿದ ದೇಶವಿರೋಧಿ ಹಾಡನ್ನು ಬಳಸಲಾಗಿದೆ.

ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕೃತ್ಯದ ವಿರುದ್ಧ ಸ್ಥಳೀಯ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ

ಇಂತಹ ನೀಚ ಕೃತ್ಯವನ್ನು ಎಸಗಿರುವ ದುರುಳರನ್ನು ಕೂಡಲೇ ಪತ್ತೆಹಚ್ಚಿಜೈಲಿಗಟ್ಟಬೇಕೆಂದು ಆಗ್ರಹಿಸಿದ್ದು ಘಟನೆ ಸಂಬಂಧ ಚಿಕ್ಕಮಗಳೂರು ಪೊಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments