ಶೃಂಗೇರಿ: ವಿಶ್ವನಾಥ್ ಗದ್ದೆಮನೆ ಚಾರಿಟಬಲ್ ಟ್ರಸ್ಟ್ ನಡೆಸುತ್ತಿರೋ ಸಾಮಾಜಿಕ ಕೆಲಸಕ್ಕೆ ತಾಲೂಕಿನ ಜನತೆ ಫಿದಾ ಆಗುತ್ತಿದ್ದಾರೆ.ಯಾಕಂದ್ರೆ, ಅದ್ರಲ್ಲೂ ಇಂದಿನ ಮಕ್ಕಳೇ ಮುಂದಿನ ಭವಿಷ್ಯದ ಪ್ರಜೆಗಳು. ಹೀಗಾಗಿ, ಅದ್ರಲ್ಲೂ ಸರ್ಕಾರಿ ಶಾಲೆಯ ಮಕ್ಕಳ ಏಳಿಗೆಗೆ ಪರಿಕರಗಳ ಸಮಸ್ಯೆ ಆಗಬಾರದು ಅಂತ ಶೃಂಗೇರಿ ತಾಲೂಕಿನ ಶಾಲಾ ಮಕ್ಕಳಿಗೆ ಪರಿಕರಗಳನ್ನ ಹಂಚಿಕೆ ಮಾಡಿದರು.
ಸಮವಸ್ತ್ರ,ಟ್ರ‍್ಯಾಕ್‌ಸೂಟ್,ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಯಿತು. ತಾಲೂಕಿನ ದುರ್ಗಾ ದೇವಿಗೆ ಪೂಜೆ ಸಲ್ಲಿಸಿ ನಂತ್ರ ದುರ್ಗಾ ದೇವಸ್ಥಾನ,ತ್ಯಾವಣ ಹಾಗೂ ವಿದ್ಯಾರಣ್ಯಪುರದ ಸರ್ಕಾರಿ ಶಾಲೆಯಲ್ಲಿ ಪರಿಕರಗಳನ್ನ ವಿತರಿಸಲಾಯ್ತು.ನಂತ್ರತಾಲೂಕಿನ ರಾಮೇಶ್ವರ ದೇವಸ್ಥಾನದಲ್ಲಿ ನೆಮ್ಮಾರ್ ಮಕ್ಕಿ, ನೆಮ್ಮಾರ್ ಪ್ರೌಢಶಾಲೆ, ಮೇಲ್ನೆಮ್ಮಾರ್, ಹರೂರು, ತನಿಕೋಡು,ಯಡದಾಳು ಹರಡುಗೋಡು ಗಣಪತಿ ದೇವಸ್ಥಾನದಲ್ಲಿ ಗಂಡಘಟ್ಟ, ಕೋಗಿನಬೈಲ್, ಕಿಗ್ಗ, ಸಿಂದೋಡಿ ಸಿರಿಮನೆಯಲ್ಲಿ ಹಂಚಲಾಯ್ತು.
ಈ ಸಮಯದಲ್ಲಿ ಮಕ್ಕಳ ಪೋಷಕರು, ಸ್ಥಳೀ ಯರು ಉಪಸ್ಥಿತರಿದ್ದರು.ಶೃಂಗೇರಿ ತಾಲೂಕಿನ ಶಾಲಾ ಮಕ್ಕಳು ಯಾವುದೇ ಕೀಳರಿಮೆ ಇಲ್ಲದೆ,ನಮ್ಮ ಸರ್ಕಾರಿ ಶಾಲೆಯ ಮಕ್ಕಳು ಎಲ್ಲಾ ರಂಗಗಳಲ್ಲೂ ಮುಂದೆ ಬರಬೇಕು.ಅದೇ ಉದ್ದೇಶದಿಂದ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ನೀಡಿ,ಉತ್ತಮ ಭವಿಷ್ಯದ ಕಡೆಗೆ ಹೆಜ್ಜೆ ಹಾಕಲು ಪ್ರೇರೇಪಿಸಿದಾಗ ಮಾತ್ರ ಮಕ್ಕಳು ಸಮಾಜದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಲಿದ್ದಾರೆ ಅನ್ನೋದು ವಿಶ್ವನಾಥ್ ಗದ್ದೆಮನೆಯವರ ನಂಬಿಕೆ ಕೂಡ ಆಗಿದೆ.
ಒಟ್ಟಿನಲ್ಲಿ ವಿಶ್ವನಾಥ್ ಗದ್ದೆಮನೆ ಚಾರಿಟಬಲ್ ಟ್ರಸ್ಟ್ ನವರ ಈ ಸಾಮಾಜಿಕ ಕಳಕಳಿಗೆ ತಾಲೂಕಿನ ಜನತೆ ಖುಷಿ ಆಗಿದ್ದಾರೆ.
