Thursday, August 27, 2026
Homeಸಿನೆಮಾಅಭಿಮಾನಿಗಳ ಜೊತೆ ಜನ್ಮದಿನ ಆಚರಿಸಿಕೊಳ್ಳದಿರಲು ಭಾವನಾತ್ಮಕ ಪತ್ರ ಬರೆದ ಕಿಚ್ಚ ಸುದೀಪ್!

ಅಭಿಮಾನಿಗಳ ಜೊತೆ ಜನ್ಮದಿನ ಆಚರಿಸಿಕೊಳ್ಳದಿರಲು ಭಾವನಾತ್ಮಕ ಪತ್ರ ಬರೆದ ಕಿಚ್ಚ ಸುದೀಪ್!

Telegram Group
Join Now

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಮುಂಬರುವ ಹುಟ್ಟುಹಬ್ಬದ ಆಚರಣೆಯ ಕುರಿತು ಅಭಿಮಾನಿಗಳನ್ನುದ್ದೇಶಿಸಿ ನಾಲ್ಕು ಪುಟಗಳ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.

ಬಲವಾದ ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ಈ ವರ್ಷ ಸೆಪ್ಟೆಂಬರ್ 2 ರಂದು ಅಭಿಮಾನಿಗಳ ಜೊತೆ ಜನ್ಮದಿನ ಆಚರಿಸಿಕೊಳ್ಳದಿರಲು ಅವರು ತೀರ್ಮಾನಿಸಿದ್ದು, ಆ ದಿನದಂದು ತಾವು ಮನೆಯಲ್ಲಿ ಲಭ್ಯವಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.‌

ಸತ್ಕಾರಗಳು ಗದ್ದಲವಾಗಬಾರದು ಎಂಬ ಸಂಸ್ಕಾರಯುತ ಸಂದೇಶ ನೀಡಿರುವ ಕಿಚ್ಚ, ಯಾರೂ ಮನೆಯ ಬಳಿ ಬಂದು ಕಾಯುವುದು ಬೇಡ ಎಂದು ಕೈಮುಗಿದು ಮನವಿ ಮಾಡಿದ್ದಾರೆ.

ಸೆಪ್ಟೆಂಬರ್ 2 ಕೇವಲ ಒಂದು ಸಾಮಾನ್ಯ ದಿನಾಂಕವಷ್ಟೇ. ಆದರೆ ಕಳೆದ 30 ವರ್ಷಗಳಿಂದ ಆ ದಿನವನ್ನು ಅದ್ಧೂರಿ ಹಬ್ಬವನ್ನಾಗಿ ಪರಿವರ್ತಿಸಿದವರು ನೀವೇ. ನೀವು ನಿಮ್ಮ ಊರುಗಳಲ್ಲಿ ಮಾಡುವ ಸಮಾಜಮುಖಿ ಕಾರ್ಯಗಳೇ ನನಗೆ ಶ್ರೀರಕ್ಷೆ ಹಾಗೂ ನಿಜವಾದ ಆಶೀರ್ವಾದ” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments