ಚಿಕ್ಕಮಗಳೂರು: ಹೆಚ್ಚುವರಿ ಬಸ್ ಒದಗಿಸುವಂತೆ ವಿದ್ಯಾರ್ಥಿಗಳು, ಸ್ಥಳೀಯರಿಂದ KSRTC ಬಸ್ ತಡೆದು ಕಡೂರು ತಾಲೂಕಿನ ಕಬ್ಬಳಿ ಗೇಟ್ ಬಳಿ ಪ್ರತಿಭಟನೆ ನಡೆಸಿದರು.
ಹೌದು .. KSRTC ಬಸ್ಗಾಗಿ ರಸ್ತೆಯಲ್ಲಿ ಕುಳಿತು ಕಬ್ಬಳಿ, ಗುಣಸಾಗರ, ಮಂಗೇನಹಳ್ಳಿ, ಸಿದ್ದಾಪುರ ಗ್ರಾಮಸ್ಥರಿಂದ ಪ್ರೊಟೆಸ್ಟ್ ಹಾಗೆ ಹೊಸ ಬಸ್ ಸೇವೆ ಆರಂಭಿಸುವಂತೆ ಮನವಿ ಮಾಡಿದ್ದ ಸ್ಥಳೀಯರು
ಚಿಕ್ಕಮಗಳೂರು – ಬಾಣಾವರಕ್ಕೆ ಹೆಚ್ಚುವರಿ ಬಸ್ ಒದಗಿಸುವಂತೆಯೂ ಸಾಕಷ್ಟು ಬಾರಿ ಮನವಿ ಮಾಡಿದ್ದು ಇದಕ್ಕೂ ಸ್ಪಂದಿಸದ ಹಿನ್ನೆಲೆ KSRTC ಬಸ್ ತಡೆದು ಆಕ್ರೋಶಗೊಂಡರು.
ಸ್ಥಳಕ್ಕೆ KSRTC ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದಿದ್ದು ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
