Friday, August 28, 2026
Homeಜಿಲ್ಲಾಸುದ್ದಿಜಗತ್ತು ಬದಲಾಗುತ್ತಿದೆ, ಆದ್ದರಿಂದ ವ್ಯವಹಾರವನ್ನು ಡಿಜಿಟಲ್ ಮಾಡಿಕೊಳ್ಳಬೇಕು: ರವೀಂದ್ರನಾಥ್

ಜಗತ್ತು ಬದಲಾಗುತ್ತಿದೆ, ಆದ್ದರಿಂದ ವ್ಯವಹಾರವನ್ನು ಡಿಜಿಟಲ್ ಮಾಡಿಕೊಳ್ಳಬೇಕು: ರವೀಂದ್ರನಾಥ್

Telegram Group
Join Now

ಜಯಪುರ : ಜಗತ್ತು ಬದಲಾಗುತ್ತಿದೆ, ಆದ್ದರಿಂದ ವ್ಯವಹಾರವನ್ನು ಡಿಜಿಟಲ್ ಮಾಡಿಕೊಳ್ಳಬೇಕು. ಇಂದಿನ ಆಧುನಿಕ ತಂತ್ರಜ್ಞಾನ ವ್ಯವಹಾರದಲ್ಲಿ ಬಳಸಿಕೊಳ್ಳಬೇಕು. ಇದರಿಂದ ವ್ಯವಹಾರವು ಹೆಚ್ಚಾಗುತ್ತದೆ ಸಂಸ್ಥೆಯು ಲಾಭದತ್ತ ಹೋಗಬಹುದು ಎಂದು ಲೆಕ್ಕಪರಿಶೋಧಕರಾದ ರವೀಂದ್ರನಾಥ್ ಹೇಳಿದರು.

ಜಯಪುರದ ಶ್ರೀ ವಿನಾಯಕ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ. ಇದರ 2025-26 ನೇ ಸಾಲಿನ ವಾರ್ಷಿಕ ವರದಿ ಹಾಗೂ 17ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಶೃಂಗೇರಿ ರಸ್ತೆಯಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ಸಾಂಸ್ಕೃತಿಕ ಭವನದಲ್ಲಿ ನಡೆದಿದ್ದು, ಇದರಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ ನಮ್ಮ ವ್ಯವಹಾರಗಳಲ್ಲಿ ಅತಿ ಹೆಚ್ಚು ಲಾಭ ಬಂದಾಗ ಆ ಹಣವನ್ನು ನಂಬಿಕೆ ಇರುವಂತಹ ಸಹಕಾರಿ ಸಂಸ್ಥೆಯಲ್ಲಿ ಇಡುವುದರಿಂದ ಹೆಚ್ಚಿನ ಲಾಭವನ್ನು ಗಳಿಸಬಹುದು. ವ್ಯವಹಾರತ್ಮಕವಾಗಿ ಒಳ್ಳೆಯ ವ್ಯಕ್ತಿಗಳನ್ನು ಗುರುತಿಸಿ ಭದ್ರತೆಯ ಆಧಾರದ ಮೇಲೆ ಸಾಲ ಕೊಡುವುದರಿಂದ ಸಂಸ್ಥೆಗೆ ಉತ್ತಮ ಲಾಭವು ಬರುತ್ತದೆ. ಬಂಗಾರ ಭದ್ರತೆ ಸಾಲವನ್ನು ನೀಡಲು ಇಂದಿನ ಆಧುನಿಕ ಬಂಗಾರ ಪರೀಕ್ಷೆ ಮಾಡುವಂತಹ ಯಂತ್ರ ತರುವುದ್ರಿಂದ ಸಂಸ್ಥೆಗೆ ಹೆಚ್ಚಿನ ಲಾಭವಾಗುತ್ತದೆ ಎಂದರು.

ಸಂಸ್ಥೆಯ ಅಧ್ಯಕ್ಷರಾದ ಸುಬ್ಬರಾಜು ಎಂ ವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡುತ್ತಾ ಸಂಸ್ಥೆಯು ಈ ವರ್ಷ 38,44,728/- ರೂ. ಗಳ ಇವಳ ಲಾಭವನ್ನು ಪಡೆದಿದೆ. ಪ್ರಸ್ತುತ ವರದಿ ಸಾಲಿನ ಅಂತ್ಯಕ್ಕೆ ಸುಸ್ತಿ ಸಾಲದ ಪ್ರಮಾಣವು ಶೇ. 1.29 ರಷ್ಟು ಇದ್ದು ಈ ಬಾರಿ ಎ ಶ್ರೇಣಿಯನ್ನು ಸಂಸ್ಥೆಯು ಹೊಂದಿದೆ. 72ನೇ ಸಾಲಿನ ಅಖಿಲ ಭಾರತ ಸಹಕಾರ ಸಪ್ತಾಹ 2025ರಲ್ಲಿ ಜಿಲ್ಲೆಯ ಉತ್ತಮ ಸೌಹಾರ್ದ ಸಹಕಾರಿ ಸಂಘ ಎಂದು ನಮ್ಮ ಸಂಸ್ಥೆಯು ಪ್ರಶಸ್ತಿಯನ್ನು ಪಡೆದಿದೆ. ಈ ಎಲ್ಲಾ ಅಭಿವೃದ್ಧಿಗೆ ಸಂಸ್ಥೆಯ ನಿರ್ದೇಶಕರು ಸಿಬ್ಬಂದಿಗಳು ಹಾಗೂ ಷೇರುದಾರರು ಮುಖ್ಯ ಕಾರಣಕರ್ತರಾಗಿದ್ದಾರೆ ಎಂದರು.

ವೇದಿಕೆಯಲ್ಲಿ ಹಿರಿಯರಾದ ಪರಮೇಶ್ವರ್ ಶಾಸ್ತ್ರಿ, ನಾಗರಾಜ್ ಶ್ರೇಷ್ಠಿ, ಉಪಾಧ್ಯಕ್ಷರಾದ ಸುಬ್ರಹ್ಮಣ್ಯ, ನಿರ್ದೇಶಕರುಗಳಾದ ಚಂದ್ರಶೇಖರ್, ಗೋಪಾಲ್, ನಾಗರಾಜ್, ಪ್ರಭಾಕರ್, ಪಾಂಡುರಂಗ, ಸುಮಂಗಲ, ಆಶಾ ರವಿ, ಗಣೇಶ್ ಪ್ರಸಾದ್, ಮುಖ್ಯ ಕಾರ್ಯನಿರ್ವಣಾಧಿಕಾರಿ ಪಣಿರಾಜ್ ಹೆಬ್ಬಾರ್, ಸಿಬ್ಬಂದಿಗಳಾದ ಶ್ವೇತಾ, ಸುಚಿತ್ರಾ, ರಾಜಮೂರ್ತಿ ಇದ್ದರು.

ವರದಿ : ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments