ಮೂಡಿಗೆರೆ: ಕಾಫಿ ಕೃಷಿಯಲ್ಲಿ ಮಹಿಳೆಯರನ್ನು ತೊಡಗಿಸಿ ಸ್ವಾವಲಂಬಿಗಳನ್ನಾಗಿಸುವುದು. ಮಹಿಳಾ ಕೃಷಿ ಉತ್ಪಾದನಾ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದು ಅಧ್ಯಕ್ಷೆ ಶೋಭಾ ನಾರಾಯಣ್ ತಿಳಿಸಿದರು.
ಅವರು ಇಲ್ಲಿನ ಎಪಿಎಂಸಿ ಆವರಣದ ಕಚೇರಿಯಲ್ಲಿ ನಿರ್ದೇಶಕರ ಸಭೆ ಉದ್ದೇಶಿಸಿ ಮಾತನಾಡಿ. ನಮ್ಮ ಸಂಸ್ಥೆಯಲ್ಲಿ 130ಕ್ಕೂ ಹೆಚ್ಚು ಮಹಿಳಾ ಸದಸ್ಯರನ್ನು ಈಗಾಗಲೆ ಹೊಂದಿದ್ದು. ಇವರ ಕುಟುಂಬದಲ್ಲಿ ಬೆಳೆಯುವ, ಕಾಫಿಯ ಸಂಸ್ಕರಣೆ ವ್ಯಾಪಾರ ಮತ್ತು ತೋಟದಲ್ಲಿ ನಿರ್ವಹಣೆಯನ್ನು ತಿಳಿಸಿಕೊಡುವುದಲ್ಲದೆ ಇಲ್ಲಿನ ಕಾಪಿ. ಮೆಣಸಿಗೆ ಜಾಗತಿಕ ಮುನ್ನಡೆ ಮತ್ತು ಬ್ರಾಂಡ್ ಮಾಡುವ ಉದ್ದೇಶವಾಗಿದೆ. ಮತ್ತು ಸಂಸ್ಥೆಯು ಕಾಫಿ ಕೃಷಿ ಮತ್ತು ಕಾಳು ಮೆಣಸು ವಿವಿಧ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ನರ್ಸರಿ ಗಿಡಗಳು. ಗೊಬ್ಬರ. ಕೃಷಿ ಸಲಕರಣೆಗಳನ್ನು ನೀಡುವ ಉದ್ದೇಶ ಹೊಂದಲಾಗಿದೆ. ಸದಸ್ಯರು ಇದರ ಸದುಪಯೋಗ ಪಡಿಸಿ ಕೊಳ್ಳಬೇಕು ಎಂದರು.
ಉಪಾಧ್ಯಕ್ಷೆ ಸರೋಜಾ ಸುರೇಂದ್ರ ಮಾತನಾಡಿ. ನಮ್ಮ ಸದಸ್ಯರು ಅಂತರಾಷ್ಟ್ರೀಯ ಮಾನದಂಡ ತಕ್ಕಂತೆ ವ್ಯಾಪಾರ ಕೈಗೊಳ್ಳಲು ತೋಟಕ್ಕೆ ಸುಸ್ಥಿರ ಭೂಮಿ ಪ್ರಾಮಾಣಿಕರಣ ಪತ್ರ ಕಡ್ಡಾಯವಿದ್ದು ಸಂಘದ ವತಿಯಿಂದ ಮಾಡಿಕೊಡಲಾಗುವುದು ಎಂದರು. ಹಾಗೆ ಸದಸ್ಯರೆಲ್ಲರೂ ಏಕಿಕೃತ ಉತ್ತಮ ಆದಾಯವನ್ನು ಗಳಿಸುವುದು ಸದೃಢ ಭಾರತ ನಿರ್ಮಾಣಕ್ಕೆ ಕಾರಣವಾಗಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಿ ಈ ಓ ಕೀರ್ತಿ ಕಿರಣ್ ಸಂಘದ ನಿರ್ದೇಶಕರು ಮತ್ತು ಸದಸ್ಯರು ಉಪಸ್ಥಿತರಿದ್ದರು
ಕಾರ್ಯಕ್ರಮದ ವೇಳೆ ಸಂಘದ ಸದಸ್ಯರು ಸಂಸ್ಥೆ ಪೋಷಿಸಿ ಬೆಳೆಸಿದ ಕಾಫಿ ನರ್ಸರಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
