Tuesday, September 1, 2026
Homeಜಿಲ್ಲಾಸುದ್ದಿಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಹಂತೂರು ಗ್ರಾಮದ ಸಹೋದರಿಯರಿಗೆ ಪ್ರಥಮ ಸ್ಥಾನ

ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಹಂತೂರು ಗ್ರಾಮದ ಸಹೋದರಿಯರಿಗೆ ಪ್ರಥಮ ಸ್ಥಾನ

Telegram Group
Join Now

ಮೂಡಿಗೆರೆ : ಶಿವಮೊಗ್ಗದಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ತಾಲ್ಲೂಕಿನ ಇಬ್ಬರು ಸಹೋದರಿಯರು ಪ್ರಥಮಸ್ಥಾನ ಪಡೆಯುವುದರ ಮೂಲಕ ಕೀರ್ತಿ ತಂದಿದ್ದಾರೆ.

ಹೌದು ತಾಲ್ಲೂಕಿನ ಬಿಜಿಎಸ್ ಶಾಲೆಯ ವಿದ್ಯಾರ್ಥಿನಿಗಳಾದ ಆರಾಧ್ಯ ಅವರು ಅಂಡರ್ 14 ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಅನನ್ಯ ಅವರು ಅಂಡರ್ 12 ವಿಭಾಗದಲ್ಲಿ ಈ ಸಾಧನೆ ಮಾಡಿದ ವಿದ್ಯಾರ್ಥಿಗಳಾಗಿದ್ದಾರೆ. ಇವರು ತಾಲೂಕಿನ ಹಂತೂರು ಗ್ರಾಮದ ಸುಧೀನ್ ಗೌಡ ಹಾಗೂ ರಜಿನಿ ದಂಪತಿಗಳ ಪುತ್ರಿಯರಾಗಿದ್ದು,ಕರಾಟೆ ತರಬೇತುದಾರ ಸೆನ್ಸಾಯ್ ರಾಜೇಂದ್ರನ್ ಅವರ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ.

ಅಂತರ ರಾಷ್ಟ್ರೀಯಮಟ್ಟದಲ್ಲಿ ಸಾಧನೆ ಮಾಡಿ ಗ್ರಾಮಕ್ಕೂ ಶಾಲೆಗೂ ತಾಲೂಕಿಗೂ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಶಾಲೆಯ ಪ್ರಾಂಶುಪಾಲರು, ಶಿಕ್ಷಕರು , ಆಡಳಿತ ಮಂಡಳಿ ಸದಸ್ಯರು, ಕುಟುಂಬಸ್ಥರು ಅಭಿನಂದಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments