ನಾಡಿನಲ್ಲೆಡೆ ಇಂದು ಬೃಂದಾವನದ ನಂದನ ಶ್ರೀ ಕೃಷ್ಣನ ಜನ್ಮಾಷ್ಟಮಿಯ ಸಂಭ್ರಮ. ಬೆಂಗಳೂರಿನ ವೇಣು ಮಾದವನ ದೇವಾಲಯಗಳಲ್ಲಿ ಶ್ರೀಕೃಷ್ಣಾಷ್ಟಮಿಯ ಸಂಭ್ರಮ ಜೋರಾಗಿಯೇ ನಡೆಯುತ್ತಿದೆ. ಇದರೊಂದಿಗೆ ರಾಜ್ಯದ ವಿವಿಧ ಶ್ರೀಕೃಷ್ಣನ ಸನ್ನಿಧಿಗಳಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ.
ಬೆಂಗಳೂರಿನ ಪ್ರಸಿದ್ಧ ಇಸ್ಕಾನ್ ದೇವಾಲಯದಲ್ಲೂ ಶ್ರೀ ಕೃಷ್ಣನ ಜನ್ಮಾಷ್ಟಮಿಯ ಸಂಭ್ರಮ ಮನೆ ಮಾಡಿದೆ. ಹಬ್ಬದ ದಿನ ಬೃಂದಾವನದ ಟೀಮ್‌ನಿಂದ ಮುಖ್ಯ ಮಂದಿರದಲ್ಲಿ ನವಿಲಿನ ಅಲಂಕಾರ ಮಾಡಲಾಗಿದೆ.
ರಂಗ ಮಂದಿರದಲ್ಲಿ ವಿಶೇಷವಾಗಿ ರಾಧ – ಕೃಷ್ಣ ಉತ್ಸವ ಮೂರ್ತಿಗಳಿಗೆ 4 ಬಾರಿ 108 ಬಗೆಯ ಜಲಾಮೃತದ ಅಭಿಷೇಕವನ್ನ ಕೂಡ ಮಾಡಲಾಗ್ತಿದೆ.
