Friday, September 4, 2026
Homeಜಿಲ್ಲಾಸುದ್ದಿ1501ನೇ ಪ್ರವಾದಿ ಮುಹಮ್ಮದ್ ಮುಸ್ತಫಾ ಜನ್ಮದಿನಾಚರಣೆ: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ 

1501ನೇ ಪ್ರವಾದಿ ಮುಹಮ್ಮದ್ ಮುಸ್ತಫಾ ಜನ್ಮದಿನಾಚರಣೆ: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ 

Telegram Group
Join Now

ಮಂಗಳೂರು : ಜಿಲ್ಲೆಯಲ್ಲಿರುವ ಲೇಡಿ ಗೋಶನ್ ಆಸ್ಪತ್ರೆ ಆವರಣದಲ್ಲಿ ಸೆಪ್ಟೆಂಬರ್ 3ರಂದು ಬೆಳಗ್ಗೆ 11.15ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಸ್ಪತ್ರೆ ಹಾಗೂ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗುವಂತೆ ನೀರಿನ ವಿತರಕ ಯಂತ್ರವನ್ನು ಸ್ಥಾಪಿಸುವ ಮೂಲಕ ಸಮಾಜಮುಖಿ ಸೇವಾ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಪ್ರವಾದಿ ಮುಹಮ್ಮದ್  ಅವರ ಮಾನವೀಯತೆ, ಕರುಣೆ ಮತ್ತು ಸಮಾಜ ಸೇವೆಯ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಉದ್ದೇಶದಿಂದ ಟ್ರಸ್ಟ್ ವತಿಯಿಂದ ವಿವಿಧ ಜನಪರ ಹಾಗೂ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರ ಭಾಗವಾಗಿ ಸಾರ್ವಜನಿಕರಿಗೆ ಅಗತ್ಯವಿರುವ ಸ್ಥಳಗಳಲ್ಲಿ *ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಕಾರ್ಯ ಕೈಗೊಳ್ಳಲಾಗಿದೆ.

ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್ (ರಿ.), ಮಂಗಳೂರು ಕಳೆದ 8 ವರ್ಷಗಳಿಂದ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ವಿಶೇಷವಾಗಿ ಕ್ಯಾನ್ಸರ್ ಹಾಗೂ ಡಯಾಲಿಸಿಸ್ ರೋಗಿಗಳಿಗೆ ಅಗತ್ಯ ಸಹಾಯವನ್ನು ಒದಗಿಸುವುದರ ಜೊತೆಗೆ, ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ವಿವಿಧ ಆರೈಕೆ ಕೇಂದ್ರಗಳಿಗೆ ನೆರವು ನೀಡುತ್ತಾ ಮಾನವೀಯ ಸೇವೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.

ಕಾರ್ಯಕ್ರಮದಲ್ಲಿ ಸರ್ಕಾರಿ ಲೇಡಿ ಗೋಶನ್ ಆಸ್ಪತ್ರೆ, ಮಂಗಳೂರು ಇದರ ವೈದ್ಯಕೀಯ ಅಧೀಕ್ಷಕರು ಡಾ. ದುರ್ಗಾಪ್ರಸಾದ್ ಎಂ.ಆರ್, ವಸತಿ ವೈದ್ಯಾಧಿಕಾರಿ (RMO) ಡಾ. ಜಗದೀಶ್,ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್ (ರಿ.), ಮಂಗಳೂರು ಇದರ ಅಧ್ಯಕ್ಷರಾದ ಶಮೀಮ್‌ ಕುಟ್ಟಿಕಳ, ಉಪಾಧ್ಯಕ್ಷರಾದ ಹನೀಫ್‌ ಸಾಲೆತ್ತೂರು, ಕಾರ್ಯದರ್ಶಿ ಹಬೀಬ್‌ ಉಳಾಯಿಬೆಟ್ಟು ಕೋಶಾಧಿಕಾರಿ ಶಕೀಲ್‌ ಹೈದರ್‌ ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್ (ರಿ.)
ಮಂಗಳೂರು
Reg. No. MGT-4-00031-2022-23

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments